• ಗೋವಾಕ್ಕೆ ದೇಶಾದ್ಯಂತವಿರುವ ಗೌರವಾನ್ವಿತರ ಆಗಮನ ! • ಇಂದಿನಿಂದ ಅಧಿವೇಶನ ಆರಂಭ ! |
ರಾಮನಾಥಿ (ಫೊಂಡಾ ), ಜೂನ ೧೧ (ವಾರ್ತೆ) – ಗೋವಾದಲ್ಲಿ ಕಳೆದ ೧೦ ವರ್ಷಗಳಿಂದ ನಡೆಯುವ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಿಂದಾಗಿ ದೇಶದಲ್ಲಿನ ಹಿಂದೂರಾಷ್ಟ್ರದ ಚರ್ಚೆಯು ಆರಂಭವಾಗಿ ಈ ನಿಟ್ಟಿನಲ್ಲಿ ಬೆಳವಣಿಗಳೂ ನಡೆಯುತ್ತಿವೆ. ಅದಕ್ಕಾಗಿಯೇ ಪ್ರಸ್ತುತ ಜೂನ ೧೨ ರಿಂದ ೧೮ ರವರೆಗೆ ಇಲ್ಲಿನ ‘ಶ್ರೀ ರಾಮನಾಥ ದೇವಸ್ಥಾನ’, ಫೋಂಡಾ, ಗೋವಾದಲ್ಲಿ ಆಯೋಜಿಸಲಾಗಿರುವ ಹತ್ತನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ಕ್ಕಾಗಿ ಪರಶುರಾಮ ಭೂಮಿಯಾಗಿರುವ ಗೋವಾ ಸಜ್ಜಾಗಿದೆ. ಈ ಅಧಿವೇಶನದ ನಿಮಿತ್ತ ದೇಶಾದ್ಯಂತ ಇರುವ ಗೌರವಾನ್ವಿತರ ಆಗಮನದಿಂದ ಪೋಂಡಾ ನಗರದ ವಾತಾವರಣವು ಕೇಸರಿಮಯವಾಗಿದೆ.
ಈ ಅಧಿವೇಶನಕ್ಕೆ ಪ್ರಮುಖವಾಗಿ ‘ಸಿಬಿಐ’ನ ಮಾಜಿ ಮಧ್ಯಂತರ ಸಂಚಾಲಕರಾದ ಶ್ರೀ. ನಾಗೇಶ್ವರ ರಾವ, ಕಾಶಿಯ ಜ್ಞಾನವಾಪಿ ಮಸೀದಿಯ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುತ್ತಿರುವ ನ್ಯಾಯವಾದಿ (ಪೂ.) ಹರಿಶಂಕರ ಜೈನ ಮತ್ತು ಅವರ ಸುಪುತ್ರ ’ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ನ ರಾಷ್ಟ್ರೀಯ ವಕ್ತಾರರಾದ ನ್ಯಾಯವಾದಿ ವಿಷ್ಣುಶಂಕರ ಜೈನ, ಭಾಜಪದ ತೆಲಂಗಾಣದ ಪ್ರಸಿದ್ಧ ಸಂಸದ ಟಿ. ರಾಜಾಸಿಂಹ, ‘ಪನೂನ ಕಾಶ್ಮೀರ’ನ ಶ್ರೀ. ರಾಹುಲ ಕೌಲರೊಂದಿಗೆ ಅನೇಕ ಹಿರಿಯ ನ್ಯಾಯವಾದಿಗಳು, ಉದ್ಯೋಗಪತಿಗಳು, ವಿಚಾರವಂತರು, ಲೇಖಕರು ಮುಂತಾದವರು ಉಪಸ್ಥಿತರಿರಲಿದ್ದಾರೆ. ಈ ಅಧಿವೇಶನಕ್ಕೆ ಅಮೇರಿಕಾ, ಇಂಗ್ಲೆಂಡ, ಹಾಂಕಾಂಗ, ಸಿಂಗಾಪೂರ, ಫಿಜಿ, ನೇಪಾಳ ಮುಂತಾದ ದೇಶಗಳೊಂದಿಗೆ ಭಾರತದ ೧೬ ರಾಜ್ಯಗಳಲ್ಲಿನ ೩೫೦ಕ್ಕೂ ಹೆಚ್ಚಿನ ಹಿಂದೂ ಸಂಘಟನೆಗಳ ೧೦೦೦ಕ್ಕೂ ಹೆಚ್ಚಿನ ಪ್ರತಿನಿಧಿಗಳನ್ನು ಆಮಂತ್ರಿಸಲಾಗಿದೆ.
ಅಧಿವೇಶನದ ಸಿದ್ಧತೆ ಪೂರ್ಣವಾಗಿದೆ
ಹತ್ತನೇ ಅಖಿಲ ಭಾರತೀಯ ಹಿಂದೂರಾಷ್ಟ್ರ ಅಧಿವೇಶನದ ಸಿದ್ಧತೆಯು ಪೂರ್ಣವಾಗಿದೆ. ಜೂನ್ ೧೨ ರಂದು ಆರಂಭವಾಗುವ ಈ ಅಧಿವೇಶನಕ್ಕೆ ಉಪಸ್ಥಿತರಿರುವ ಹಿಂದುತ್ವನಿಷ್ಠರು ರಾಮನಾಥಿಯಲ್ಲಿ ಆಗಮಿಸಿದ್ದಾರೆ. ರಾಮನಾಥಿಯಲ್ಲಿನ ಸನಾತನದ ಆಶ್ರಮ, ಹಾಗೆಯೇ ಕಾರ್ಯಸ್ಥಳವಾದ ಶ್ರೀ ರಾಮನಾಥ ದೇವಸ್ಥಾನದಲ್ಲಿ ಹಿಂದುತ್ವನಿಷ್ಠರಿಗಾಗಿ ಸ್ವಾಗತ ಕಮಾನುಗಳನ್ನು ನಿಲ್ಲಿಸಲಾಗಿದೆ. ಇದರಿಂದ ಬಂದಿರುವ ಧರ್ಮಪ್ರೇಮಿಗಳ ಉತ್ಸಾಹದಲ್ಲಿ ವೃದ್ಧಿಯಾಗಿದೆ.