ದಶಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವು ಉತ್ಸಾಹ ಹಾಗೂ ಭಾವಪೂರ್ಣ ವಾತಾವರಣದಲ್ಲಿ ಆರಂಭ !

ದೀಪಪ್ರಜ್ವಲನೆ ಮಾಡುತ್ತಿರುವಾಗ ಎಡದಿಂದ ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಸ್ವಾಮಿ ಸಂಯುಕ್ತಾನಂದ ಮಹಾರಾಜರು, ನ್ಯಾಯವಾದಿ ಪೂಜ್ಯ ಹರಿಶಂಕರ ಜೈನ್, ಸ್ವಾಮಿ ನಿರ್ಗುಣಾನಂದಗಿರಿ ಮಹಾರಾಜರು

ರಾಮನಾಥಿ (ಫೋಂಡಾ), ಜೂನ್ ೧೨ (ವಾರ್ತೆ) – `ಜಯತು ಜಯತು ಹಿಂದೂ ರಾಷ್ಟ್ರಮ್’, `ಹರ ಹರ ಮಹಾದೇವ’, ಇಂತಹ ಜಯಘೋಷದೊಂದಿಗೆ ಇಲ್ಲಿಯ ಶ್ರೀ ರಾಮನಾಥ ದೇವಸ್ಥಾನ, ಫೋಂಡಾ, ಗೋವಾದಲ್ಲಿ ದಶಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವು ಭಾವಪೂರ್ಣ ಮತ್ತು ಉತ್ಸಾಹದ ವಾತಾವರಣದಲ್ಲಿ ಆರಂಭವಾಯಿತು. ಈ ಅಧಿವೇಶನ ಜೂನ್ ೧೮ ರ ತನಕ ನಡೆಯಲಿದ್ದು ವಿವಿಧ ರಾಜ್ಯಗಳ ೪೫೦ ಪ್ರತಿನಿಧಿಗಳು ಈ ಅಧಿವೇಶನದಲ್ಲಿ ಭಾಗವಹಿಸಿದ್ದಾರೆ. ಅಧಿವೇಶನದ ಆರಂಭದಲ್ಲಿ ಸನಾತನದ ಪುರೋಹಿತ ಪಾಠಶಾಲೆಯ ಶ್ರೀ. ಅಮರ ಜೋಶಿ ಇವರು ಶಂಖನಾದವನ್ನು ಮಾಡಿದರು. ನಂತರ ಸನಾತನದ ಪುರೋಹಿತ ಪಾಠಶಾಲೆಯ ಸರ್ವಶ್ರೀ ಅಮರ ಜೋಶಿ ಮತ್ತು ಈಶಾನ ಜೋಶಿ ಇವರು ವೇದಮಂತ್ರಗಳ ಪಠಣ ಮಾಡಿದರು. ತದನಂತರ ಹಿಂದೂ ಜನಜಾಗೃತಿ ಸಮಿತಿಯ ಮುಂಬಯಿನ ಸಮನ್ವಯಕ ಶ್ರೀ. ಬಳವಂತ ಪಾಠಕ ಇವರು ಶ್ರೀ. ಅಮರ ಜೋಶಿ ಮತ್ತು ಶ್ರೀ. ಈಶಾನ ಜೋಶಿ ಇವರ ಸತ್ಕಾರ ಮಾಡಿದರು. ಈ ಸಮಯದಲ್ಲಿ `ಭಾರತ ಸೇವಾಶ್ರಮ ಸಂಘ’ದ ಸ್ವಾಮಿ ಸಂಯುಕ್ತಾನಂದ ಮಹಾರಾಜರು ದೀಪಪ್ರಜ್ವಲನೆಯನ್ನು ಮಾಡಿದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ತ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ, `ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ಸಂರಕ್ಷಕ ಹಾಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಪೂ. ಹರಿ ಶಂಕರ ಜೈನ್ ಮತ್ತು `ಇಂಟರನ್ಯಾಶನಲ್ ವೇದಾಂತ ಸೋಸೈಟಿ’ಯ ಸ್ವಾಮಿ ನಿರ್ಗುಣಾನಂದಗಿರಿ ಮಹಾರಾಜರು ಉಪಸ್ಥಿತರಿದ್ದರು.