ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ನಿಜವಾದ ಸುಖ ಕೇವಲ ಸಾಧನೆಯಿಂದಲೇ ಸಿಗುತ್ತದೆ, ಭ್ರಷ್ಟ ಮಾರ್ಗದಿಂದ ದೊರೆತ ಹಣದಿಂದಲ್ಲ’ 

ಭಾರತೀಯರಿಗೆ ಭಿಕ್ಷೆ ಬೇಡುವಂತೆ ಮಾಡಿದ ಆಂಗ್ಲರು

ಗಾಂಧಿವಾದಿ ಲೇಖಕ ಧರ್ಮಪಾಲರು ಹೇಳುತ್ತಾರೆ, ‘ಆಂಗ್ಲರು ಮುಂದಿನ ಮುಖ್ಯ ತಪ್ಪುಮಾರ್ಗಗಳನ್ನು ಅವಲಂಬಿಸುತ್ತ ಭಾರತಕ್ಕೆ ಬಹುದೊಡ್ಡ ಹಾನಿ ಮಾಡಿದರು. ಅವರು ಇಲ್ಲಿಯ ಅಮೂಲ್ಯ ನೈಸರ್ಗಿಕ ಹಾಗೂ ಇತರ ಸಂಪತ್ತುಗಳನ್ನು ದೋಚಿದರು. ಇದರಿಂದ ಜನಸಾಮಾನ್ಯರು ಭಿಕ್ಷೆ ಬೇಡುವಂತಾದರು.

ಸತ್ಯಕ್ಕಿಂತ ಶಕ್ತಿಯುತ ಬೇರಾವುದೂ ಇಲ್ಲ !

ಕೇವಲ ಸತ್ಯ ಪುರಾವೆಯನ್ನು ಮುಂದಿಟ್ಟರೆ ಎಲ್ಲ ಉಹಾಪೋಹಗಳ ಹಾಗೂ ಪ್ರಚಾರಗಳ ಪೊಳ್ಳುತನವು ತನ್ನಿಂದತಾನೆ ಹೊರಬೀಳುತ್ತದೆ. ಏಕೆಂದರೆ ಸತ್ಯಕ್ಕಿರುವಷ್ಟು ಶಕ್ತಿ ಬೇರೆ ಯಾವುದಕ್ಕೂ ಇಲ್ಲ.

ಭಾರತದ ಅಧಿಕೃತ ಪಂಚಾಂಗ : ಭಾರತೀಯ ಸೌರ ಕಾಲಗಣನೆ !

೨೨ ಮಾರ್ಚ್‌ನಂದು ಸೂರ್ಯನು ವಿಷುವವೃತ್ತದ ಮೇಲಿರುವುದರಿಂದ ಹಗಲು ಮತ್ತು ರಾತ್ರಿ ಸಮನಾಗಿ ೧೨ ಗಂಟೆಗಳದ್ದೇ ಆಗಿರುತ್ತದೆ. ತದನಂತರ ಸೂರ್ಯನು ಉತ್ತರದ ಕಡೆಗೆ ಸರಿಯುತ್ತಾ ಜೂನ್ ೨೨ ರಂದು ಕರ್ಕವೃತ್ತದ ಮೇಲೆ ಬರುತ್ತಾನೆ. ಅಲ್ಲಿಂದ ಅವನ ದಕ್ಷಿಣಾಯನ ಪ್ರಾರಂಭವಾಗುತ್ತದೆ

ನಿಶ್ಚಯಾತ್ಮಕ ಬುದ್ಧಿಯ ಆವಶ್ಯಕತೆ !

ಆಧುನಿಕ ಶಿಕ್ಷಣವು ಮನುಷ್ಯನ ಚಾರಿತ್ರ್ಯವನ್ನು ರೂಪಿಸಲಾರದು, ಮಾನವಿ ಪ್ರವೃತ್ತಿಯ ವಿಕೃತಿಗಳನ್ನು ತಡೆಗಟ್ಟಲಾರದು. ಇದರಿಂದ ಸಮಾಜದಲ್ಲಿ ಪ್ರತಿನಿತ್ಯ ನಿಕೃಷ್ಟ ಕೃತಿಗಳು ಘಟಿಸುತ್ತಿವೆ ಮತ್ತು ಅವುಗಳಲ್ಲಿ ಹೆಚ್ಚಳವಾಗುತ್ತಿದೆ. ಇದರಿಂದ ಸದ್ಯದ ಬುದ್ಧಿವಂತ ಜನರು ಅಸುಂತುಷ್ಟ, ಚಿಂತಿತ ಮತ್ತು ಅಸ್ವಸ್ಥರಾಗಿದ್ದಾರೆ

‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪದಿಂದ ಸಾಧಕರ ಮೇಲೆ ಮತ್ತು ಸಂತರ ಮೇಲಾಗುವ ಪರಿಣಾಮಗಳು

ಅಮಾವಾಸ್ಯೆಯ ೨-೩ ದಿನಗಳ ಮೊದಲಿನಿಂದಲೇ ತೊಂದರೆಯು ಹೆಚ್ಚಾಗುತ್ತದೆ ಮತ್ತು ಹುಣ್ಣಿಮೆಯಾದ ನಂತರ ಮುಂದಿನ ೨-೩ ದಿನಗಳ ಕಾಲ ತೊಂದರೆಯು ಹೆಚ್ಚಾಗುತ್ತದೆ. ಇದರ ಕಾರಣವೆಂದರೆ, ಅಮಾವಾಸ್ಯೆಯ ೨-೩ ದಿನಗಳ ಮೊದಲೇ ದೊಡ್ಡ ದೊಡ್ಡ ಕೆಟ್ಟ ಶಕ್ತಿಗಳು ಕಪ್ಪು ಶಕ್ತಿಯನ್ನು ಸಂಗ್ರಹಿಸುತ್ತವೆ.

ಆರತಿಯ ಸಮಯದಲ್ಲಿ ಶಂಖನಾದ ಮಾಡಿದಾಗ ಮುರಳೀಧರ ಶ್ರೀಕೃಷ್ಣನ ಮೂರ್ತಿಯ ಕೈಯಲ್ಲಿನ ಕೊಳಲು ಹಾರಿ ಕೆಳಗೆ ಬಿದ್ದಿರುವ ಘಟನೆಯ ಬಗ್ಗೆ ಮಾಡಿದ ಸೂಕ್ಷ್ಮ ಪರೀಕ್ಷಣೆ !

ಶ್ರೀಕೃಷ್ಣನ ಮೂರ್ತಿಯಲ್ಲಿ ಬಹಳಷ್ಟು ಪ್ರಮಾಣದಲ್ಲಿ ಮಾರಕ ತತ್ತ್ವಕಾರ್ಯನಿರತವಾಗಿರುವುದು ಅರಿವಾಯಿತು. ಅದರಿಂದ ಸಾಧಕರಿಗೆ ತೊಂದರೆಗಳನ್ನು ಕೊಡುವ ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳ ವಿನಾಶದ ಪ್ರಕ್ರಿಯೆ ವೇಗದಿಂದ ಪ್ರಾರಂಭವಾಗಿರುವುದು ಅರಿವಾಯಿತು.

ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ಮಾಡುತ್ತಿದ್ದ ತಂದೆ (ಪ.ಪೂ. ಬಾಳಾಜಿ (ದಾದಾ) ಆಠವಲೆ) ಮತ್ತು ತಾಯಿ (ಪೂ. (ಸೌ.) ನಲಿನಿ ಆಠವಲೆ) ಇವರ ವಿವಿಧ ಸೇವೆಗಳು !

ವಯಸ್ಸಿಗನುಸಾರ ಪೂ. (ಸೌ.) ತಾಯಿಯವರಿಗೆ ವಿವಿಧ ವೇದನೆಗಳ ಜೊತೆಗೆ ಉಬ್ಬಸದ ತೊಂದರೆಯೂ ಇತ್ತು. ನಡುನಡುವೆ ಇದರ ತೀವ್ರತೆಯೂ ಹೆಚ್ಚಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ‘ಅವರಿಗೆ ಯಾವ ವೈದ್ಯಕೀಯ ಉಪಚಾರವನ್ನು ನೀಡಬೇಕು ?’, ಎಂಬುದನ್ನು ಪ.ಪೂ. ಡಾಕ್ಟರರು ಸಾಧಕರಿಗೆ ಪ್ರತ್ಯಕ್ಷ ಕೃತಿಯಿಂದ ಕಲಿಸಿದರು.

ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

‘ಸಾಕ್ಷಾತ್ ಭಗವಂತನಿಂದಾಗಿಯೇ ನಾನು ಎಲ್ಲವನ್ನೂ ಮಾಡುತ್ತೇನೆ. ಈ ದೇಹವು ಭಗವಂತನದ್ದೇ ಆಗಿದೆ, ಹೀಗಿರುವಾಗ ನನ್ನ ಮನಸ್ಸಿನಲ್ಲಿ ಪ್ರಶಂಸೆಯ ವಿಚಾರ ಏಕೆ ಬಂತು ?’, ಎಂಬುದರ ಚಿಂತನೆಯನ್ನು ಮಾಡಿ ನಾನು ಗುರುದೇವರಲ್ಲಿ ಕ್ಷಮೆಯಾಚಿಸಿದೆ. – ಕು. ಅಪಾಲಾ ಔಂಧಕರ

ಕಳೆದ ೫೦ ವರ್ಷದಲ್ಲಿ ನಮಗೆ ದೇಶದ ಭಾಷೆಯನ್ನು ನಿರ್ಧರಿಸಲು ಆಗಲಿಲ್ಲ ಇದು ಲಜ್ಜಾಸ್ಪದ !

‘ಕಳೆದ ೫೦ ವರ್ಷಗಳಲ್ಲಿ ನಮಗೆ ದೇಶದ ಭಾಷೆಯನ್ನು ತಯಾರಿಸಲು ಆಗಲಿಲ್ಲ. ಇದರಷ್ಟು ದುರದೃಷ್ಟದ ವಿಷಯ ಇನ್ನೇನಿಲ್ಲ. ೫೦ ವರ್ಷಗಳಲ್ಲಿ ನಮಗೆ ದೇಶದ ಭಾಷೆಯನ್ನು ತಯಾರಿಸಲಾಗದಿರುವುದರಿಂದ ಇಂದು ಆಂಗ್ಲರ ಬೆರಳನ್ನು ಹಿಡಿದುಕೊಂಡು ನಾವು ನಡೆಯಬೇಕಾಗುತ್ತಿದೆ.