|
ಖಾಲಾಪುರ (ರಾಯಗಡ) – ಖಾಲಾಪುರ ತಾಲೂಕಿನಲ್ಲಿನ ಹಾಳ ಬುದ್ರುಕದಲ್ಲಿ ಮಾರ್ಚ್ ೧೨ ತಡ ರಾತ್ರಿಯಂದು ಗೋಕಳ್ಳ ಸಾಗಾಣಿಕೆ ಮತ್ತು ಹತ್ಯೆಯ ಮಾಹಿತಿ ದೊರೆತನಂತರ ಗೋರಕ್ಷಕರು ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದರು; ಆದರೆ ೨೫೦ ರಿಂದ ೩೦೦ ಮತಾಂಧ ಮುಸಲ್ಮಾನರು ಇವರ ಮೇಲೆ ದಾಳಿ ನಡೆಸುತ್ತಾ ಕಲ್ಲು ತೂರಾಟ ನಡೆಸಿದರು. ಇದರಲ್ಲಿ ಕೆಲವು ಗೋರಕ್ಷಕರು ಮತ್ತು ಪೊಲೀಸ ಸಿಬ್ಬಂದಿ ಗಾಯಗೊಂಡರು.
೧. ಖಾಲಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಂಕಲ್ ಕಿಚನ್ ಹೋಟೆಲ್ ಪರಿಸರದಲ್ಲಿ ಗೋರಕ್ಷಕರಿಗೆ ಎರಡು ಗೋವುಗಳು ಕಂಡು ಬಂದವು. ೫೦ ಅಡಿ ಆಳದ ತೆಗ್ಗಿನಲ್ಲಿ ಗೋವುಗಳ ಅವಶೇಷ ಮತ್ತು ಚರ್ಮ ದೊರೆಯಿತು. ಅದಕ್ಕಾಗಿ ಗೋರಕ್ಷಕರು ಪೊಲೀಸರನ್ನು ಕರೆಸಿದರು.
೨. ಕೆಲವು ಸಮಯದಲ್ಲಿ ೨೫೦ ರಿಂದ ೩೦೦ ಮುಸಲ್ಮಾನರು ಒಟ್ಟಾಗಿ ಪೊಲೀಸರ ಮೇಲೆ ಮತ್ತು ಗೋರಕ್ಷಕರ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಲ್ಲಿ ಗೋರಕ್ಷಕರು ಗಂಭೀರವಾಗಿ ಗಾಯಗೊಂಡರು. (ಇದರಿಂದ ಮತಾಂಧ ಮುಸಲ್ಮಾನರ ಆಯೋಜನೆ ಮತ್ತು ದಾಳಿಯ ಬಗ್ಗೆ ಗಮನಕ್ಕೆ ಬರುತ್ತದೆ ! – ಸಂಪಾದಕರು)
೩. ದಾಳಿಕೋರ ಮತಾಂಧ ಮುಸಲ್ಮಾನರಲ್ಲಿ ಗ್ರಾಮದಲ್ಲಿನ ಚಿಕ್ಕ ಮಕ್ಕಳ ಸಹಿತ ಮಹಿಳೆಯರು ಇದ್ದರು. ಅವರ ಕೈಯಲ್ಲಿ ಕೆಲವು ಶಸ್ತ್ರಗಳು ಮತ್ತು ಕಲ್ಲುಗಳು ಇದ್ದವು.
೪. ಪರಿಸ್ಥಿತಿ ಕೈಮೀರುತ್ತಿರುವುದರಿಂದ ಗೋರಕ್ಷಕರು ಮತ್ತು ಪೊಲೀಸರು ಸುರಕ್ಷೆಗಾಗಿ ಖೋಪೋಲಿ ಮುಂಬಯಿ ಹೆದ್ದಾರಿಗೆ ಬಂದರು; ಆದರೆ ಮುಸಲ್ಮಾನರು ಹೆದ್ದಾರಿಯಲ್ಲಿನ ವಾಹನಗಳ ಮೇಲೆ ಕೂಡ ಕಲ್ಲು ತೂರಾಟ ನಡೆಸಿದರು.
೫. ಘಟನೆಯ ಮಾಹಿತಿ ದೊರೆಯುತ್ತಲೇ ಹೆಚ್ಚುವರಿ ಪೊಲೀಸ ಪಡೆ ನೇಮಕ ಮಾಡಿದರು ಮತ್ತು ಕೆಲವು ಗಂಟೆಗಳ ಪ್ರಯತ್ನದ ನಂತರ ಪರಿಸ್ಥಿತಿ ಹಿಡಿತಕ್ಕೆ ಬಂದಿತು.
೬. ಈ ಪ್ರಕರಣದಲ್ಲಿ ಪೊಲೀಸರು ೧೨ ಜನರನ್ನು ವಶಕ್ಕೆ ಪಡೆದಿದ್ದಾರೆ ಮತ್ತು ವಿಚಾರಣೆ ನಡೆಯುತ್ತಿದೆ ಹಾಗೂ ೬೦ ಜನರ ವಿರುದ್ಧ ದೂರು ದಾಖಲಾಗಿದೆ. ಸಮೀರ್ ಸೈಯದ್, ಮೂರ್ತಜಾ ಮೆಟಕರ, ಜಾವೇದ್ ಲಿಯಾಕತ ಸೊಂಡೆ, ಕಾದೀರ್ ಲತೀಫ್, ಕರ್ಜಿಕರ್, ರಿಯಾಜ್ ಜಳಗಾವಕರ, ಉಸ್ಮಾನ್ ಜಳಗಾವಕರ, ಸಮೀರ್ ದುಸ್ತೆ, ಮುಜಫರ್ ಕರ್ಜಿಕರ್, ಮೊಜ್ಜಾಂ ಮಾಂಡಲೇಕರ್, ಮುಜೀಬ್ ಜಳಗಾಬಕರ್, ಆಸಿಫ್ ಬೆಡೇಕರ್ ಗುಂಪಿನಲ್ಲಿನ ಕೆಲವರ ಹೆಸರುಗಳಾಗಿವೆ.
೭. ಪೊಲೀಸರು ನಾಗರಿಕರಿಗೆ ಶಾಂತಿ ಕಾಪಾಡಲು ಕರೆ ನೀಡಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಆಶ್ವಾಸನೆ ನೀಡಿದ್ದಾರೆ.
೮. ಈ ಘಟನೆಯ ನಂತರ ಗೋರಕ್ಷಕ ಸಂಘಟನೆ ಆಕ್ರಮಕವಾಗಿದ್ದು ಶಿವ ಪ್ರತಿಷ್ಠಾನ ಹಿಂದುಸ್ಥಾನ ಸಹಿತ ವಿವಿಧ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ. ‘ಗೋಮಾತೆಯ ರಕ್ಷಣೆಗಾಗಿ ನಾವು ಯಾವುದೇ ಬೆಲೆ ತೆತ್ತಲು ಸಿದ್ಧವಾಗಿದ್ದೇವೆ’, ಎಂದೂ ಗೋರಕ್ಷಕರು ಎಚ್ಚರಿಕೆ ನೀಡಿದರು.
ಸಂಪಾದಕೀಯ ನಿಲುವು
|