ಹಿಮಾಚಲ ಪ್ರದೇಶದ ಪಂಜಾಬದಲ್ಲಿನ ಶಿಖ ಪ್ರವಾಸಿಗರ ರೌಡಿಸಂ

ಬೈಕ್‌ಗಳಲ್ಲಿ ಖಲಿಸ್ತಾನಿ ಭಯೋತ್ಪಾದಕ ಬಿಂದ್ರನ್ವಾಲೆನ ಚಿತ್ರ ಇರುವ ಧ್ವಜ !

ಕುಲ್ಲು (ಹಿಮಾಚಲಪ್ರದೇಶ) – ಕುಲ್ಲು ಮತ್ತು ಉನಾ ಜಿಲ್ಲೆಯಲ್ಲಿ ಪಂಜಾಬದಿಂದ ಬೈಕ್‌ನಲ್ಲಿ ಬಂದಿದ್ದ ಪ್ರವಾಸಿಗರು ಗೂಂಡಾಗಿರಿ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಶಿಖ ಯುವಕರು ಬೈಕ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಬಿಂದ್ರನ್ವಾಲೆನ ಚಿತ್ರ ಇರುವ ದೊಡ್ಡ ಧ್ವಜ ತೆಗೆದುಕೊಂಡು ಕುಲು ಮನಾಲಿಯ ಕಡೆಗೆ ಮುಂದೆಸಾಗಿದ್ದರು. ಉನಾದಲ್ಲಿ ಈ ಶಿಖ್ ಯುವಕರು ಹಿಮಾಚಲ ಪೊಲೀಸರ ಗೃಹರಕ್ಷಕ ಪಡೆಯ ಸೈನಿಕನಿಗೆ ಹೊಡೆದಿದ್ದಾರೆ ಹಾಗೂ ಕುಲ್ಲುನಲ್ಲಿನ ಮಣಿಕರ್ಣದಲ್ಲಿ ಅವರು ಪೊಲೀಸರು ಅಳವಡಿಸಿರುವ ಬ್ಯಾರಿಕೆಟ್ ಮುರಿದಿದ್ದಾರೆ. (ಇದು ಹಿಮಾಚಲ ಪ್ರದೇಶ ಸರಕಾರ ಮತ್ತು ಪೊಲೀಸರಿಗೆ ಲಜ್ಜಾಸ್ಪದ ! – ಸಂಪಾದಕರು)

೧. ಮಣಿಕರ್ಣ ಗುರುದ್ವಾರ ಸಿಂಹ ಸಾಹೇಬ ಇಲ್ಲಿ ಬಂದಿರುವ ಪಂಜಾಬದ ಶಿಖ್ ಯುವಕರು ಸುರಕ್ಷಾ ನೀಡುವ ಪೊಲೀಸ್ ಸಿಬ್ಬಂದಿಯ ಜೊತೆಗೆ ದೂರ್ವರ್ತನೆ ನಡೆಸಿದ್ದಾರೆ.

೨. ಹಿಮಾಚಲ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಮತ್ತು ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. (ಹಿಮಾಚಲ ಪ್ರದೇಶದ ಪೊಲೀಸರು ನೋಡುಗರ ನಿಲುವು ತಾಳುವುದು, ಎಂದರೆ ಖಲಿಸ್ತಾನಿಗಳಿಗೆ ಬೆಂಬಲ ನೀಡುವ ಹಾಗೆ ಇದೆ ! – ಸಂಪಾದಕರು)

೩. ಕುಲ್ಲುದ ರಾಯಸನ ಇಲ್ಲಿ ಶಿಖ್ ಯುವಕ ಮತ್ತು ಸ್ಥಳೀಯ ಯುವಕರ ನಡುವೆ ನಡೆದಿರುವ ಹೊಡೆದಾಟದ ವಿಡಿಯೋ ಬೆಳಕಿಗೆ ಬಂದಿದೆ.

ಸಂಪಾದಕೀಯ ನಿಲುವು

ಖಲಿಸ್ತಾನಿ ಎಂಬಲಿಗರ ಹೆಚ್ಚುತ್ತಿರುವ ಉಪದ್ರವವನ್ನು ಹಿಡಿತಕ್ಕೆ ತರುವುದಕ್ಕಾಗಿ ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ, ಇದೇ ಈ ಘಟನೆಯಿಂದ ಗಮನಕ್ಕೆ ಬರುತ್ತದೆ !