ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತದಿಂದ ಮತ್ತೊಮ್ಮೆ ಕಪಾಳ ಮೋಕ್ಷ !
ನ್ಯೂಯಾರ್ಕ್ (ಅಮೇರಿಕಾ) – ‘ಇಸ್ಲಾಮೊಫೋಬಿಯ’ ವನ್ನು (ಇಸ್ಲಾಮದ ಬಗ್ಗೆ ದ್ವೇಷ) ಎದುರಿಸುವುದಕ್ಕಾಗಿ ವಿಶ್ವಸಂಸ್ಥೆ ಆಯೋಜಿಸಿರುವ ಸಭೆಯಲ್ಲಿ ಪಾಕಿಸ್ತಾನವು ಜಮ್ಮು ಕಾಶ್ಮೀರದ ವಿಷಯ ಪ್ರಸ್ತಾಪ ಮಾಡಿದ ನಂತರ ಭಾರತ ಪಾಕಿಸ್ತಾನಕ್ಕೆ ತಪರಾಕಿ ನೀಡಿದೆ. ವಿಶ್ವಸಂಸ್ಥೆಯಲ್ಲಿನ ಭಾರತದ ಸ್ಥಾಯಿ ಪ್ರತಿನಿಧಿ ಪಾರ್ವತಾನೇನೀ ಹರೀಶ್ ಇವರು ಪಾಕಿಸ್ತಾನಕ್ಕೆ ತಪರಾಕಿ ನೀಡುತ್ತಾ, ಅಭ್ಯಾಸದಂತೆ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವರು ಇಂದು ಭಾರತೀಯ ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದ ಬಗ್ಗೆ ಅಯೋಗ್ಯ ಉಲ್ಲೇಖ ಮಾಡಿದ್ದಾರೆ. ಮೇಲಿಂದ ಮೇಲೆ ನೀಡುವ ಸಂದರ್ಭಗಳು ಅವರ ದಾವೇ ದೃಢಪಡಿಸುವುದಿಲ್ಲ ಅಥವಾ ಗಡಿ ದಾಟಿ ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ನೀಡುವುದಿಲ್ಲ. ಪಾಕಿಸ್ತಾನದ ಭಯೋತ್ಪಾದಕ ಮನಸ್ಥಿತಿ ಎಲ್ಲರಿಗೂ ತಿಳಿದಿದೆ ಮತ್ತು ಈ ವಾಸ್ತವ ಬದಲಾಗುವುದಿಲ್ಲ. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಅದು ಹಾಗೆಯೇ ಇರುವುದು, ಎಂದು ಹೇಳಿದರು.
ಪಾರ್ವತಾನೇನೀ ಹರೀಶ್ ಇವರು ಮಾತು ಮುಂದುವರೆಸಿ, ನಮಗೆ ಕಟ್ಟರವಾದಿ ಮನಸ್ಥಿತಿ ಮತ್ತು ‘ಇಸ್ಲಾಮೊಫೋಬಿಯ’ ಇದರ ವಿರುದ್ಧ ಕೆಲಸ ಮಾಡುವ ಆವಶ್ಯಕತೆ ಇದೆ ಎಂಬುದು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಇತ್ತೀಚಿಗೆ ಪ್ರಾರ್ಥನಾ ಸ್ಥಳಗಳು ಮತ್ತು ಧಾರ್ಮಿಕ ಜನಾಂಗವನ್ನು ಗುರಿ ಮಾಡಿರುವ ಹಿಂಸಾಚಾರದಲ್ಲಿ ಆಘಾತಕಾರಿ ಬೆಳವಣಿಗೆ ನಾವು ನೋಡಿದ್ದೇವೆ. ಇದು ಕೇವಲ ನಮಗಾಗಿ ಆತಂಕದ ವಿಷಯ ಅಷ್ಟೇ ಅಲ್ಲದೆ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನಾವು ಕಟ್ಟರವಾದಿಗಳಿಗೆ ಪ್ರೋತ್ಸಾಹ ನೀಡುವುದಿಲ್ಲ ಇದನ್ನು ಕೂಡ ದೃಢಪಡಿಸಬೇಕು, ಎಂದು ಹೇಳಿದರು.
ಸಂಪಾದಕೀಯ ನಿಲುವುನಾಯಿಯ ಬಾಲ ಎಷ್ಟೇ ನೇರ ಮಾಡುವ ಪ್ರಯತ್ನ ಮಾಡಿದರು ಅದು ಡೊಂಕೇ ಇರುತ್ತದೆ, ಹಾಗೆಯೇ ಪಾಕಿಸ್ತಾನದ ಸ್ಥಿತಿ ಇದೆ. ಬಾಲ ನೇರ ಮಾಡುವುದಕ್ಕೆ ಸಮಯ ಕಳೆಯದೆ ಅದು ಕತ್ತರಿಸುವುದು ಯೋಗ್ಯ ವಾಗುವುದು ! |