(ಮೇಲೆ ಪ್ರಕಟಿಸಿದ ಚಿತ್ರದ ಉದ್ದೇಶ ಯಾರ ಧಾರ್ಮಿ ಭಾವನೆಗಳಿಗೆ ನೋವನ್ನುಂಟು ಮಾಡಿರುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು)
ನಂದಿಗ್ರಾಮ (ಬಂಗಾಳ) – ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಬಂಗಾಳದಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ನಂದಿಗ್ರಾಮದ ಬ್ಲಾಕ್ 2 ರ ಕಮಲಪುರದಲ್ಲಿ ಸ್ಥಳೀಯ ನಿವಾಸಿಗಳು ಮಾರ್ಚ್ 11 ರಿಂದ ಪೂಜೆ ಮತ್ತು ಕೀರ್ತನೆಗಳನ್ನು ಮಾಡುತ್ತಿದ್ದರು; ಆದರೆ ಅದು ನಡೆಯುತ್ತಿರುವಾಗ, ಕೀರ್ತನೆಯ ಸಮಯದಲ್ಲಿ ಶ್ರೀರಾಮನ ನಾಮಜಪ ಮಾಡುವುದನ್ನು ಸಹಿಸಲಾಗದ ಕೆಲವರು ಆ ಸ್ಥಳವನ್ನು ಧ್ವಂಸ ಮಾಡಿದರು. ಈ ಸಮಯದಲ್ಲಿ ಹನುಮಂತನ ವಿಗ್ರಹವನ್ನು ಸಹ ಧ್ವಂಸಗೊಳಿಸಿದರು ಎಂದು ಭಾಜಪ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ. ಈ ಘಟನೆ ಮಾರ್ಚ್ 14 ರಂದು ನಡೆದಿದೆ ಎಂದು ಭಾಜಪ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ಶುಭೇಂದು ಅಧಿಕಾರಿ ಆರೋಪಿಸಿದ್ದಾರೆ.
1. ಅಮಿತ ಮಾಳವೀಯ ಅವರು ಹೇಳಿದಂತೆ, ಹೋಳಿ ದಿನದಂದು ಬರುಯಿಪುರ, ಜಾದವಪುರ ಮತ್ತು ಮುರ್ಷಿದಾಬಾದ ಸೇರಿದಂತೆ ರಾಜ್ಯಾದ್ಯಂತ ಇಂತಹ ಘಟನೆಗಳು ನಡೆದಿವೆ. ಬಂಗಾಳದ ಕೆಲವು ಭಾಗಗಳಲ್ಲಿ ಹೋಳಿ ಆಚರಣೆಯನ್ನು ನಿಷೇಧಿಸಲು ಮಮತಾ ಬ್ಯಾನರ್ಜಿಯವರ ಪೊಲೀಸರು ಪ್ರಯತ್ನಿಸಿದರು; ಆದರೆ ನಂತರ ಅವರು ಹಿಂದೆ ಸರಿದರು. ಸನಾತನಿಗಳಲ್ಲಿ ವ್ಯಾಪಕ ಆಕ್ರೋಶವಿದೆ; ಆದರೆ ಈ ಕಠಿಣ ಸಮಯದಲ್ಲಿ ಭಾಜಪ ಅವರೊಂದಿಗೆ ದೃಢವಾಗಿ ನಿಲ್ಲುತ್ತದೆ. ನಾವು ಮಮತಾ ಬ್ಯಾನರ್ಜಿ ಅವರಿಗೆ ಬಂಗಾಳ ಮತ್ತೊಂದು ಬಾಂಗ್ಲಾದೇಶ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.
2. ಬಂಗಾಳದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಬಿರಭೂಮ್ ಜಿಲ್ಲೆಯ ಸೈಂಥಿಯಾ ನಗರದ ಕನಿಷ್ಠ 5 ಗ್ರಾಮ ಪಂಚಾಯತ ಪ್ರದೇಶಗಳಲ್ಲಿ ಮಾರ್ಚ್ 17 ರವರೆಗೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ವದಂತಿಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
3. ಇದಕ್ಕೂ ಮೊದಲು, ಮಾರ್ಚ್ 9 ರಂದು, ಬಂಗಾಳದ ಬಶೀರಹಾಟ ನಗರದ ಶಂಖಚುರಾ ಬಜಾರ್ನಲ್ಲಿರುವ ಶ್ರೀ ಕಾಳಿಮಾತಾ ದೇವಸ್ಥಾನ ಮತ್ತು ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿತ್ತು. ದೇವಸ್ಥಾನದ ಮೇಲಿನ ದಾಳಿಯನ್ನು ತೃಣಮೂಲ ಕಾಂಗ್ರೆಸ್ ನಾಯಕ ಶಹನೂರ್ ಮಂಡಲ್ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಂಪಾದಕೀಯ ನಿಲುವುಬಂಗಾಳ ಎಂದರೆ ಮತ್ತೊಂದು ಬಾಂಗ್ಲಾದೇಶವಾಗಿದೆ. ಕೇಂದ್ರ ಸರಕಾರ ಬಾಂಗ್ಲಾದೇಶದ ಬಗ್ಗೆ ಏನನ್ನೂ ಮಾಡುತ್ತಿಲ್ಲ, ಬಂಗಾಳದ ಬಗ್ಗೆಯೂ ಏನನ್ನೂ ಮಾಡುತ್ತಿಲ್ಲ. ಆದ್ದರಿಂದ, ಎರಡೂ ಸ್ಥಳಗಳಲ್ಲಿ ಹಿಂದೂಗಳಿಗೆ ಹೊಡೆತ ತಿನ್ನುವುದನ್ನು ಬಿಟ್ಟು ಬೇರೆ ದಾರಿಯಿಲ್ಲ! |