‘ಶಿವಾಜಿ ವಿಶ್ವವಿದ್ಯಾಲಯ’ ಹೆಸರು ಖಾಯಂ ಇಡಲು ಆಯೋಜಿಸಲಾಗಿದ್ದ ಸಭೆಯಲ್ಲಿ ಮಟ್ಟ ಹಾಕುವ ಭಾಷೆಯ ಪ್ರಯೋಗ!

ಕೋಲ್ಲಾಪುರ – ‘ಶಿವಾಜಿ ವಿಶ್ವವಿದ್ಯಾಲಯ’ ಹೆಸರು ಖಾಯಂ ಗೊಳಿಸುವ ಬೇಡಿಕೆಗಾಗಿ ಆಯೋಜಿಸಿಲಾಗಿದ್ದ ಸಭೆಯಲ್ಲಿ ‘ಶಿವಾಜಿ ವಿಶ್ವವಿದ್ಯಾಲಯ’ದ ಹೆಸರನ್ನು ವಿಸ್ತರಿಸಲು ಪ್ರಯತ್ನಿಸಿದರೆ ಹೊಡೆದು ಹಾಕುತ್ತೇವೆ!’, ಎಂದು ಎಚ್ಚರಿಕೆ ನೀಡಲಾಯಿತು. ಈ ಕುರಿತಾದ ವರದಿಗಳು ಇತರ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಶಿವಾಜಿ ವಿಶ್ವವಿದ್ಯಾಲಯ’ದ ಹೆಸರು ವಿಸ್ತರಿಸಿ ‘ಛತ್ರಪತಿ ಶಿವಾಜಿ ಮಹಾರಾಜ ವಿಶ್ವವಿದ್ಯಾಲಯ’ ಆಗಬಾರದೆಂದು ಈ ಸಭೆಯಲ್ಲಿ ಬೇಡಿಕೆ ಮಂಡಿಸಲಾಯಿತು. (ಒಂದೆಡೆ ‘ಭಾರತದಲ್ಲಿ ಪ್ರಜಾಪ್ರಭುತ್ವವಿದೆ’, ‘ಕಾನೂನಿನ ಆಡಳಿತವಿದೆ’, ಎಂದು ಹೇಳುವುದು ಮತ್ತು ಇನ್ನೊಂದೆಡೆ ‘ಹೊಡೆದು ಹಾಕುವ’ ಭಾಷೆ ಬಳಸುವುದು, ಇದು ವಿರೋಧಾಭಾಸವಲ್ಲವೇ? ಯಾವ ಶಿವಾಜಿ ಮಹಾರಾಜರು 5 ಬಾದಶಾಹರನ್ನು ಸೋಲಿಸಿ ಹಿಂದೂ ರಾಜ್ಯವನ್ನು ಸ್ಥಾಪಿಸಿದರೋ ಅಂತಹ ಹಿಂದೂಗಳ ಅಸ್ಮಿತೆಯ ಹೆಮ್ಮೆಯ ಪ್ರತೀಕವನ್ನು ನಿರ್ಮಿಸಿದವರನ್ನು ‘ಛತ್ರಪತಿ’ ಎಂದು ಕರೆಯಲು ಪ್ರಗತಿಪರರಿಗೆ ಏಕೆ ಹಿಂಜರಿಕೆ? ಇಂತಹ ವಿರೋಧವೆಂದರೆ ಛತ್ರಪತಿಗೆ ವಿರೋಧವಲ್ಲವೇ? – ಸಂಪಾದಕರು)

ಇದೇ ವೇಳೆ ವಿಶ್ವವಿದ್ಯಾಲಯದ ಹೆಸರನ್ನು ವಿಸ್ತರಿಸಲು ಬೆಂಬಲಿಸಿದ್ದ ಕೋಲ್ಲಾಪುರದ ಎಲ್ಲಾ ಜನಪ್ರತಿನಿಧಿಗಳನ್ನು ಈ ಸಭೆಯಲ್ಲಿ ಖಂಡಿಸಲಾಯಿತು. (ಆಯ್ಕೆಯಾದ ಜನಪ್ರತಿನಿಧಿಗಳು ಸಾವಿರಾರು ನಾಗರಿಕರನ್ನು ಪ್ರತಿನಿಧಿಸುತ್ತಾರೆ. ಪ್ರಜಾಪ್ರಭುತ್ವದ ಮಾರ್ಗದಲ್ಲಿ ಆಯ್ಕೆಯಾದ ಮತ್ತು ಸೂಕ್ತ ವಿಷಯಕ್ಕೆ ಬೆಂಬಲ ನೀಡುವ ಜನಪ್ರತಿನಿಧಿಗಳನ್ನು ಖಂಡಿಸುವುದು ಒಂದು ರೀತಿಯಲ್ಲಿ ಪ್ರಜಾಪ್ರಭುತ್ವದ ಮೇಲೆಯೇ ಅವಿಶ್ವಾಸ ತೋರಿಸಿದಂತಿದೆ! ಇದೇ ವೇಳೆ, ಈ ಹಿಂದೆ ಪ್ರಗತಿಪರರ ವಿಷಯಕ್ಕೆ ಸಮ್ಮತಿ ನೀಡಿ ಅವರನ್ನು ಹೊಗಳುತ್ತಿದ್ದ ಜನಪ್ರತಿನಿಧಿಗಳು ಮತ್ತು ಹಿಂದುತ್ವ, ರಾಷ್ಟ್ರ-ಧರ್ಮ ವಿಷಯಗಳ ಪರವಾಗಿ ನಿಲ್ಲುತ್ತಿದ್ದವರನ್ನು ವಿರೋಧಿಸುವುದು ಪ್ರಗತಿಪರರ ದ್ವಂದ್ವ ನೀತಿಯಾಗಿದೆ! ಪ್ರಗತಿಪರರ ಈ ದ್ವಂದ್ವ ನೀತಿ ಅರಿತುಕೊಂಡೇ ಕೋಲ್ಲಾಪುರ ಜಿಲ್ಲೆಯ ಜಾಗೃತ ನಾಗರಿಕರು ಹಿಂದೂ ವಿರೋಧಿ ಜನಪ್ರತಿನಿಧಿಗಳನ್ನು ಮನೆಗೆ ಕಳುಹಿಸಿದ್ದಾರೆ! – ಸಂಪಾದಕರು)

‘ಶಿವಾಜಿ ವಿಶ್ವವಿದ್ಯಾಲಯ’ದ ಅಧಿಸಭೆಯಲ್ಲಿ ಹೆಸರು ವಿಸ್ತರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಗದ್ದಲ ಮತ್ತು ವಿರೋಧ!

‘ಶಿವಾಜಿ ವಿಶ್ವವಿದ್ಯಾಲಯ’ದ ಮಾರ್ಚ್ 15ರಂದು ನಡೆದ ಸಾಮಾನ್ಯ ಸಭೆಯಲ್ಲಿ ಕೆಲವು ಸದಸ್ಯರು ಕಪ್ಪು ಪಟ್ಟಿಗಳನ್ನು ಧರಿಸಿ ಹೆಸರು ವಿಸ್ತರಿಸುವುದನ್ನು ವಿರೋಧಿಸಿದರು. ನಂತರ ಕೆಲವು ಸದಸ್ಯರು ‘ಶಿವಾಜಿ ವಿಶ್ವವಿದ್ಯಾಲಯ’ ಹೆಸರೇ ಸ್ಥಿರವಾಗಿರಬೇಕೆಂದು ಘೋಷಣೆಗಳನ್ನು ಕೂಗಿದರು. ಆರಂಭದಲ್ಲಿ ‘ಶಿವಾಜಿ ವಿಶ್ವವಿದ್ಯಾಲಯ’ದ ಹೆಸರು ವಿಸ್ತರಿಸಬಾರದೆಂಬ ಬೇಡಿಕೆಯ ಸ್ಥಗಿತ ಪ್ರಸ್ತಾವನೆಯನ್ನು ಮಂಡಿಸಲಾಯಿತು. ಈ ಪ್ರಸ್ತಾವನೆಯನ್ನು ಅಂಗೀಕಾರವಾಗದ ಕಾರಣ ಮತ್ತೆ ಗದ್ದಲವಾಯಿತು. ಅಂತಿಮವಾಗಿ ಚರ್ಚೆಯಿಲ್ಲದೆ ಈ ಪ್ರಸ್ತಾವನೆಯನ್ನು ಅಂಗೀಕರಿಸಲಾಯಿತು. ಈ ವೇಳೆ ‘ನಮ್ಮ ವಿಶ್ವವಿದ್ಯಾಲಯ ಶಿವಾಜಿ ವಿಶ್ವವಿದ್ಯಾಲಯ’ ಎಂಬ ಘೋಷಣೆಗಳನ್ನು ಕೂಗಲಾಯಿತು. ಈ ಸಭೆಯಲ್ಲಿ ಕುಲಪತಿ ಡಾ. ಡಿ.ಟಿ. ಶಿರ್ಕೆ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸಂಪಾದಕೀಯ ನಿಲುವು

ಒಂದೆಡೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಕೂಗಾಡುವುದು ಮತ್ತು ಇನ್ನೊಂದೆಡೆ ‘ಕಾನೂನು ಕೈಗೆತ್ತಿಕೊಳ್ಳುವ’ ಭಾಷೆ, ಈ ದ್ವಂದ್ವನೀತಿ ಈಗ ಜಾಗೃತ ನಾಗರಿಕರ ಗಮನಕ್ಕೆ ಬಂದಿದೆ!