|

ಗ್ವಾಲೆರ್ (ಮಧ್ಯಪ್ರದೇಶ) – ಇಲ್ಲಿಯ ಬಡ ಹಿಂದುಗಳನ್ನು ಪಂಜಾಬದ ಜಾಲಂದರದಲ್ಲಿನ ಚರ್ಚ್ ಗೆ ಕರೆದುಕೊಂಡು ಹೋಗಿ ಅಲ್ಲಿ ಮತಾಂತರ ಮಾಡುವ ಕ್ರೈಸ್ತರ ಪ್ರಯತ್ನವನ್ನು ಭಜರಂಗದಳದ ಕಾರ್ಯಕರ್ತರ ಸತರ್ಕತೆಯಿಂದ ವಿಫಲವಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಮಾರ್ಚ್ ೧೨ ರಂದು ತಡರಾತ್ರಿ ಪಾತಾಳಕೋಟೆ ಎಕ್ಸ್ಪ್ರೆಸ್‌ನಲ್ಲಿನ ೧೮ ಹಿಂದುಗಳನ್ನು ಬಿಡುಗಡೆಗೊಳಿಸಿದರು. ಅವರೆಲ್ಲರೂ ಕಾರ್ಮಿಕ ವರ್ಗದವರಾಗಿದ್ದರು.
पुलिस अधीक्षक ‘ रेल ‘ श्री राहुल कुमार लोढ़ा ( भा.प्र. से. ) के निर्देशन मे जीआरपी ने धर्मांतरण कराने वाले गिरोह को गिरफ्तार किया I @DGP_MP @BhopalSrp @ips_kmak @ManishSShrma @JansamparkMP @grpmpcontrol @mohdept @DDIndialive @MP_MyGov @MPPoliceDeptt pic.twitter.com/AziQPotkym
— Thana Grp Gwalior (@ThanaGrpGwalior) March 14, 2025
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಚಿಂದವಾಡ ಇಲ್ಲಿಯ ಸೇಜನಾಥ ಸೂರ್ಯವಂಶಿ ಮತ್ತು ವಿಜಯ ಕುಮಾರ ಇವರು ಕಾರ್ಮಿಕರಿಗೆ ‘ನೀವು ಕ್ರೈಸ್ತ ಧರ್ಮ ಸ್ವೀಕರಿಸಿದರೆ, ನಿಮಗೆ ಪ್ರತಿಯೊಬ್ಬರಿಗೂ ೧ ಲಕ್ಷ ರೂಪಾಯ ನೀಡುವೆವು, ನಿಮ್ಮ ಮಕ್ಕಳಿಗೆ ಒಳ್ಳೆಯ ಕ್ರೈಸ್ತ ಶಾಲೆಯಲ್ಲಿ ಶಿಕ್ಷಣ ನೀಡುವೆವು ಮತ್ತು ಅವರಿಗೆ ವಿದೇಶದಲ್ಲಿ ಉದ್ಯೋಗ ಕೂಡ ನೀಡುವೆವು’, ಎಂದು ಆಮಿಷ ಒಡ್ಡಿದ್ದರು. ಈ ಆಮಿಷಕ್ಕೆ ಮರುಳಾಗಿ ೧೮ ಜನರು ಮತಾಂತರಗೊಳ್ಳಲು ಇಬ್ಬರೂ ಕ್ರೈಸ್ತರ ಜೊತೆಗೆ ಪಾತಾಳಕೋಟ ಎಕ್ಸ್ಪ್ರೆಸ್ ನಿಂದ ಜಾಲಂಧರಗೆ ಹೊರಟಿದ್ದರು.
ಭಜರಂಗದಳದ ಕಾರ್ಯಕರ್ತರಿಗೆ ಈ ಮಾಹಿತಿ ದೊರೆಯುತ್ತಲೇ, ಅವರು ಮಾಹಿತಿಯನ್ನು ಪೊಲೀಸರಿಗೆ ನೀಡಿದರು. ಪೊಲೀಸರು ತಕ್ಷಣ ವಿದೇಶದಲ್ಲಿನ ಗಂಜಾ ರೈಲ್ವೆ ನಿಲ್ದಾಣದಲ್ಲಿ ಪಾತಾಳಕೋಟ ಎಕ್ಸ್ಪ್ರೆಸ್ ನಿಲ್ಲಿಸಿದರು ಮತ್ತು ೧೧ ಪ್ರಯಾಣಿಕರನ್ನು ವಶಕ್ಕೆ ಪಡೆದರು. ಅದರ ನಂತರ ಬೀನಾ ರೈಲು ನಿಲ್ದಾಣದಲ್ಲಿ ಇನ್ನೂ ೪ ಪ್ರಯಾಣಿಕರನ್ನು ವಶಕ್ಕೆ ಪಡೆದರು. ಅದರ ನಂತರ ಪೊಲೀಸರಿಗೆ ಎಸ್-೧ ಸಂಖ್ಯೆಯ ಭೋಗಿಯಲ್ಲಿ ಇನ್ನೂ ಮೂವರು ಇರುವ ಮಾಹಿತಿ ದೊರೆಯಿತು. ಪೊಲೀಸರು ಬಂದಿರುವ ಸುದ್ದಿ ತಿಳಿಯುತ್ತಲೇ ಅವರು ಮೂವರು ಓಡಿ ಹೋಗುವ ಪ್ರಯತ್ನದಲ್ಲಿ ಇರುವಾಗ ಪೊಲೀಸರು ಗ್ವಾಲ್ಹೇರ್ ನಿಲ್ದಾಣದಲ್ಲಿ ರೈಲು ನಿಲ್ಲಿಸಿ ಅವರನ್ನು ವಶಕ್ಕೆ ಪಡೆದರು. ಪೊಲೀಸರು ಈ ಪ್ರಕರಣವನ್ನು ಕುಲಂಕುಶವಾಗಿ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವು
|