|
ಇಸ್ಲಾಮಾಬಾದ (ಪಾಕಿಸ್ತಾನ) – ಜಾಫರ ಎಕ್ಸ್ಪ್ರೆಸ್ ರೈಲು ಅಪಹರಣ ಪ್ರಕರಣದಲ್ಲಿ ಪಾಕಿಸ್ತಾನಿ ಸೇನೆ ಪತ್ರಿಕಾಗೋಷ್ಠಿ ನಡೆಸಿ, ಅಪಹರಣದಲ್ಲಿ 31 ಜನರು ಸಾವನ್ನಪ್ಪಿದ್ದರು, ಅವರಲ್ಲಿ 18 ಜನರು ಸೈನಿಕರು ಎಂದು ಹೇಳಿದರು. ‘ಬಲೂಚ್ ಲಿಬರೇಶನ್ ಆರ್ಮಿ’ಯ ಸ್ವಾತಂತ್ರ್ಯ ಹೋರಾಟಗಾರರು ಪಾಕಿಸ್ತಾನಿ ಸೇನೆಯ ಮಾಹಿತಿಯನ್ನು ನಿರಾಕರಿಸಿದರು ಮತ್ತು ಎಲ್ಲಾ 214 ಒತ್ತೆಯಾಳುಗಳನ್ನು ಕೊಂದಿದ್ದೇವೆ, ಅವರಲ್ಲಿ ಹೆಚ್ಚಿನವರು ಪಾಕಿಸ್ತಾನಿ ಸೈನಿಕರು ಎಂದು ಹೇಳಿದೆ.
ಬಲೂಚ್ ಲಿಬರೇಶನ್ ಆರ್ಮಿಯ ಸ್ವಾತಂತ್ರ್ಯ ಹೋರಾಟಗಾರರು,
1. ನಾವು ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಳ್ಳಲು ಪಾಕಿಸ್ತಾನಿ ಸೇನೆಗೆ 48 ಗಂಟೆಗಳ ಕಾಲಾವಕಾಶ ನೀಡಿದ್ದೆವು. ಇದು ಅವರ ಜೀವಗಳನ್ನು ಉಳಿಸಿಕೊಳ್ಳಲು ಕೊನೆಯ ಅವಕಾಶವಾಗಿತ್ತು; ಆದರೆ ಎಂದಿನಂತೆ, ಅವರು ದುರಹಂಕಾರವನ್ನು ಪ್ರದರ್ಶಿಸಿದರು ಮತ್ತು ತಮ್ಮ ನಿರ್ಧಾರಕ್ಕೆ ದೃಢವಾಗಿ ನಿಂತರು. ಯಾವುದೇ ಚರ್ಚೆ ನಡೆಯಲಿಲ್ಲ ಮತ್ತು ಸತ್ಯ ತಿಳಿದಿದ್ದರೂ ಅವರು ಕಣ್ಣು ಮುಚ್ಚಿಕೊಂಡರು. ಪಾಕಿಸ್ತಾನಿ ಸೇನೆ ಮತ್ತು ಸರಕಾರದ ಈ ಹಠಮಾರಿತನದಿಂದಾಗಿ, ನಾವು ಎಲ್ಲಾ 214 ಒತ್ತೆಯಾಳುಗಳನ್ನು ಕೊಂದಿದ್ದೇವೆ.
2. ನಾವು ಯಾವಾಗಲೂ ಯುದ್ಧ ಮತ್ತು ಅಂತರರಾಷ್ಟ್ರೀಯ ಕಾನೂನಿನ ತತ್ವಗಳ ಪ್ರಕಾರ ವರ್ತಿಸಿದ್ದೇವೆ; ಆದರೆ ಪಾಕಿಸ್ತಾನ ಸರಕಾರವು ತನ್ನ ಸೈನಿಕರ ಜೀವಗಳನ್ನು ಉಳಿಸುವ ಬದಲು, ಯುದ್ಧದಲ್ಲಿ ಅವರನ್ನು ಬಲಿಕೊಡುವುದು ಸೂಕ್ತವೆಂದು ಪರಿಗಣಿಸಿತು. ಶತ್ರುವಿನ ಈ ಮೊಂಡುತನಕ್ಕೆ 214 ಸೈನಿಕರು ಜೀವ ತೆತ್ತ ಬೇಕಾಯಿತು.
3. ಪಾಕಿಸ್ತಾನಿ ಸೇನೆಯೊಂದಿಗಿನ ಘರ್ಷಣೆಯಲ್ಲಿ ನಮ್ಮ 12 ಸೈನಿಕರು ಮರಣ ಹೊಂದಿದರು, ಅವರಿಗೆ ನಾವು ಶ್ರದ್ಧಾಂಜಲಿ ಸಲ್ಲಿಸಿದ್ದೇವೆ. ಈ ಜನರು ಶತ್ರುಗಳ ವಿರುದ್ಧ ಮರೆಯಲಾಗದ ತ್ಯಾಗಗಳನ್ನು ಮಾಡಿದರು. ಇದರಲ್ಲಿ ನಮ್ಮ ಮಜೀದ್ ಬ್ರಿಗೇಡ್‌ನ 5 ಆತ್ಮಾಹುತಿ ಬಾಂಬರ್‍ಗಳು ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಶತ್ರುಗಳಿಗೆ ಸೂಕ್ತ ಉತ್ತರ ನೀಡಿದರು, ಇದನ್ನು ಇತಿಹಾಸವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತದೆ.