ನಿಶ್ಚಯಾತ್ಮಕ ಬುದ್ಧಿಯ ಆವಶ್ಯಕತೆ !

ಸರ್ವೋತ್ತಮ ಶಿಕ್ಷಣ ಯಾವುದು ? 

ಪೂ. ಡಾ. ಶಿವಕುಮಾರ ಓಝಾ

ಪೂ. ಡಾ. ಶಿವಕುಮಾರ ಓಝಾ (೮೭ ವರ್ಷ) ಇವರು ‘ಐಐಟಿ’, ಮುಂಬಯಿಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದ ಅಧ್ಯಾಪಕರೆಂದು ಕಾರ್ಯನಿರತರಾಗಿದ್ದರು ಅವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಮುಂತಾದ ವಿಷಯಗಳ ೧೧ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ. ಅವುಗಳಲ್ಲಿನ ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’ ಎಂಬ ಹಿಂದಿ ಭಾಷೆಯ ಗ್ರಂಥದ ಕೆಲವೊಂದು ಲೇಖನಗಳನ್ನು ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಾಪ್ತಾಹಿಕ ಸನಾತನ ಪ್ರಭಾತದ ೨೩/೧೦ ನೇ ಸಂಚಿಕೆಯಲ್ಲಿ ‘ಅನೇಕ ವಿಷಯಗಳ ಬಗ್ಗೆ ಬುದ್ಧಿಯಲ್ಲಿರುವ ಅಜ್ಞಾನ !’ ಈ ವಿಷಯದ ಮಾಹಿತಿಯನ್ನು ನೀಡಲಾಗಿತ್ತು. ಇಂದು ನಾವು ಅದರ ಮುಂದಿನ ಭಾಗವನ್ನು ನೋಡೋಣ. 

(ಭಾಗ ೧೪)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/54704.html

೫೩. ಆಧುನಿಕ ಶಿಕ್ಷಣ ಮತ್ತು ಅದರ ಅಡಚಣೆಗಳು

೫೩ ಅ. ಆಧುನಿಕ ಶಿಕ್ಷಣದ ದುಷ್ಪರಿಣಾಮಗಳು ಮತ್ತು ಮನುಷ್ಯನ ಬುದ್ಧಿಯ ಅಸಾಮರ್ಥ್ಯ : ಇಂದಿನ ಆಧುನಿಕ ಶಿಕ್ಷಣದ ಅಡಿಪಾಯವು ಆಧುನಿಕ ಶಿಕ್ಷಣದ ಪ್ರಸಾರವನ್ನು ಮಾಡಿದ ಭೋಗವಾದಿ ಪಾಶ್ಚಾತ್ಯ ಮನುಷ್ಯನ ಚಿಂತನಪ್ರಕ್ರಿಯೆಯ ಮೇಲಾಧಾರಿತವಾಗಿದೆ. ಸದ್ಯ ಜಗತ್ತಿನಲ್ಲಿ ಮತ್ತು ಭಾರತದಲ್ಲಿಯೂ ಇದೇ ಶಿಕ್ಷಣವು ಅತ್ಯಧಿಕ ಪ್ರಮಾಣದಲ್ಲಿ ಬಳಕೆಯಲ್ಲಿದೆ. ಆಧುನಿಕ ಶಿಕ್ಷಣವು ಮನುಷ್ಯನ ಚಾರಿತ್ರ್ಯವನ್ನು ರೂಪಿಸಲಾರದು, ಮಾನವಿ ಪ್ರವೃತ್ತಿಯ ವಿಕೃತಿಗಳನ್ನು ತಡೆಗಟ್ಟಲಾರದು. ಇದರಿಂದ ಸಮಾಜದಲ್ಲಿ ಪ್ರತಿನಿತ್ಯ ನಿಕೃಷ್ಟ ಕೃತಿಗಳು ಘಟಿಸುತ್ತಿವೆ ಮತ್ತು ಅವುಗಳಲ್ಲಿ ಹೆಚ್ಚಳವಾಗುತ್ತಿದೆ. ಇದರಿಂದ ಸದ್ಯದ ಬುದ್ಧಿವಂತ ಜನರು ಅಸುಂತುಷ್ಟ, ಚಿಂತಿತ ಮತ್ತು ಅಸ್ವಸ್ಥರಾಗಿದ್ದಾರೆ. ಆಧುನಿಕ ಶಿಕ್ಷಣದ ಬಳಿ ಇದಕ್ಕೆ ಯಾವುದೇ ಉತ್ತರವಿಲ್ಲ. ನಿಕೃಷ್ಟ ಪರಿಣಾಮಗಳನ್ನು ತಡೆಗಟ್ಟುವಂತಹ ಪರಿಣಾಮಕಾರಿ ಉಪಾಯಗಳು ಯಾವುವು, ಎಂಬುದರ ಬಗ್ಗೆಯೂ ಅವರಲ್ಲಿ ಉತ್ತರವಿಲ್ಲ. ಇಲ್ಲಿಯವರೆಗೆ ಅಧ್ಯಯನ ಮಾಡಿದ ಬುದ್ಧಿಯ ಮಿತಿಯನ್ನು ನೋಡಿ, ‘ಮನುಷ್ಯನ ವ್ಯಾವಹಾರಿಕ ಬುದ್ಧಿಯು ಶಿಕ್ಷಣಕ್ಕೆ ಸಂಬಂಧಿಸಿದ ಒಳ್ಳೆಯ ದೃಷ್ಟಿಕೋನವನ್ನು ವಿಕಸಿತಗೊಳಿಸಲು ಮತ್ತು ಯೋಗ್ಯ ಉತ್ತರವನ್ನು ಕಂಡು ಹಿಡಿಯಲು ಅಸಮರ್ಥವಾಗಿದೆ’, ಎಂದು ನಾವು ಅವಶ್ಯವಾಗಿ ನಿರ್ಣಯಿಸಬಹುದು.

೫೪. ಸಂದೇಹಗಳು ಉದ್ಭವಿಸಿದಾಗ ಭಿನ್ನಾಭಿಪ್ರಾಯಗಳು, ಹಾಗೆಯೇ ತರ್ಕವಿತರ್ಕಗಳು ಉಂಟಾಗುತ್ತವೆ

ಯಾವುದೇ ವಿಷಯಕ್ಕೆ ಸಂಬಂಧಿಸಿದ ಸಂದೇಹಗಳು ಉದ್ಭವಿಸಿದಾಗ ಮನುಷ್ಯನು ಅವುಗಳ ನಿವಾರಣೆಗಾಗಿ ಪ್ರಯತ್ನಿಸುತ್ತಾನೆ; ಆದರೆ ಅನೇಕ ಬಾರಿ ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳುತ್ತವೆ. ಯಾವುದಾದರೊಬ್ಬ ವ್ಯಕ್ತಿಯು ಬುದ್ಧಿಯಿಂದ ತನ್ನ ವಿಚಾರಗಳನ್ನು ಮಂಡಿಸುತ್ತಾನೆ; ಎರಡನೇಯ ವ್ಯಕ್ತಿಯು ಆ ವಿಚಾರಗಳನ್ನು ಅಲ್ಲಗಳೆದು ತನ್ನ ತರ್ಕವನ್ನು ಮಂಡಿಸುತ್ತಾನೆ; ಆದರೆ ಈ ತರ್ಕವು ಮೊದಲ ವ್ಯಕ್ತಿಗೆ ಒಪ್ಪಿಗೆಯಾಗುವುದಿಲ್ಲ ಮತ್ತು ಆ ವ್ಯಕ್ತಿಯು ಆ ಬಗ್ಗೆ ಕಾರಣಗಳನ್ನು ನೀಡುತ್ತಾನೆ. ಈ ರೀತಿ ತರ್ಕ-ವಿತರ್ಕ ಅಥವಾ ವಾದವಿವಾದಗಳ ಬಗೆಗಿನ ಪ್ರಕ್ರಿಯೆಯು ಆರಂಭವಾಗುತ್ತದೆ ಮತ್ತು ಯಾವುದೇ ಸರಿಯಾದ ನಿರ್ಣಯವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

೫೫. ದೂರದರ್ಶನದಲ್ಲಿನ ಚರ್ಚೆಗಳಲ್ಲಿ ಯಾವುದಾದರೊಂದು ವಿಷಯದ ಬಗ್ಗೆ ಒಂದು ಸರಿಯಾದ ನಿರ್ಣಯದವರೆಗೆ ಬರಲು ಸಾಧ್ಯವಾಗದಿರುವುದು ಮತ್ತು ಅದರ ಅಂತ್ಯವು ಸಂಶಯಾಸ್ಪದವಾಗಿಯೇ ಉಳಿಯುವುದು

ಸದ್ಯ ದೂರದರ್ಶನದಲ್ಲಿ ವಿವಿಧ ವಿಷಯಗಳ ಚರ್ಚೆಗಳನ್ನು ಮತ್ತು ವಾದವಿವಾದಗಳನ್ನು ತೋರಿಸಲಾಗುತ್ತದೆ. ಅವುಗಳಿಂದ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುತ್ತದೆ. ಕೆಲವೊಮ್ಮೆ ಭವ್ಯ ಸಭಾಗೃಹಗಳಲ್ಲಿ ಚರ್ಚೆಗಳು ನಡೆಯುತ್ತವೆ. ಅಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮತ್ತು ಉಚ್ಚ ಶಿಕ್ಷಣ ಪಡೆದ ಜನರನ್ನೇ ಆಮಂತ್ರಿಸಲಾಗುತ್ತದೆ. ಚರ್ಚೆಗಳು ಅತ್ಯಂತ ವಿದ್ವತ್ತಪೂರ್ಣವಾಗಿ ನಡೆಯುತ್ತವೆ; ಆದರೆ ಕೊನೆಗೆ ಕಾರ್ಯಕ್ರಮದ ನಿವೇದಕರಿಗೆ ಯಾವುದೇ ನಿಶ್ಚಿತ ನಿರ್ಣಯಕ್ಕೆ ತಲುಪಲು ಸಾಧ್ಯವಾಗುವುದಿಲ್ಲ. ಆದುದರಿಂದ ಕಾರ್ಯಕ್ರಮವನ್ನು ಕೊನೆಗೊಳಿಸುವಾಗ ಅವರು ಯಾವುದೇ ವಕ್ತಾರರಿಗೆ ದುಃಖವಾಗದ ರೀತಿಯಲ್ಲಿ ಚರ್ಚೆಯನ್ನು ಕೊನೆಗೊಳಿಸುತ್ತಾರೆ. ಚರ್ಚೆಯ ನಿರ್ಣಯವು ಕೊನೆಯವರೆಗೆ ಸಂಶಯಾಸ್ಪದವಾಗಿಯೇ ಏಕೆ ಉಳಿಯುತ್ತದೆ ಮತ್ತು ನಿಶ್ಚಯಾತ್ಮಕ ನಿರ್ಣಯಗಳನ್ನು ಏಕೆ ತೆಗೆದುಕೊಳ್ಳಲು ಆಗುವುದಿಲ್ಲ ? ಈ ಬಗ್ಗೆ ಎಂದಾದರೂ ವಿಚಾರ ಮಾಡಿದ್ದಾರೆಯೇ ?

೫೬. ವೈಜ್ಞಾನಿಕ ಸ್ತರದಲ್ಲಿನ ಬರವಣಿಗೆಗಳಲ್ಲಿ ‘ಪ್ರಾಯಶಃ (ಅನುಮಾನ)’ ಅಥವಾ ‘ಬಹುಶಃ(ಬಹುತೇಕ)’ ಈ ಶಬ್ದಗಳ ಉಲ್ಲೇಖವಿರುವುದು, ಆದರೆ ‘ಶ್ರೀಮದ್ಭಗವದ್ಗೀತೆಯಲ್ಲಿ ವಿಭಿನ್ನ ಗೂಢ ವಿಷಯಗಳ ಬಗ್ಗೆ ಚರ್ಚೆಗಳನ್ನು ಮಾಡಿದ್ದರೂ ‘ಪ್ರಾಯಶಃ’ ಅಥವಾ ‘ಬಹುಶಃ’ ಈ ಶಬ್ದಗಳ ಉಲ್ಲೇಖವಿಲ್ಲದಿರುವುದು’ ಮತ್ತು ಇದು ಕೇವಲ ನಿಶ್ಚಯಾತ್ಮಕ ಬುದ್ಧಿಯಿಂದ ಸಾಧ್ಯವಾಗುವುದು

ಆಧುನಿಕ ಯುಗದಲ್ಲಿನ ಉಚ್ಚ ಮಟ್ಟದ ಜಗನ್ಮಾನ್ಯ ವೈಜ್ಞಾನಿಕ ಗ್ರಂಥಗಳು ಅಥವಾ ಸಂಶೋಧನೆ, ಹಾಗೆಯೇ ಸಂಶೋಧನೆಗೆ ಸಂಬಂಧಿಸಿದ ನಿಯತಕಾಲಿಕೆಗಳನ್ನು (Research Journals) ನೋಡಿರಿ. ಅದರಲ್ಲಿ ‘ಪ್ರಾಯಶಃ’ ಅಥವಾ ‘ಬಹುಶಃ’ (Probably or may be) ಈ ಶಬ್ದಗಳನ್ನು ಉಪಯೋಗಿಸಿರುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿನ ಪ್ರಾಚೀನ ಪ್ರಮಾಣಿತ ಗ್ರಂಥಗಳಲ್ಲಿ ಎಲ್ಲಿಯೂ ಯಾವುದೇ ವಿಷಯದ ಚರ್ಚೆಯ ಬಗ್ಗೆ ‘ಪ್ರಾಯಶಃ’ ಅಥವಾ ‘ಬಹುಶಃ’ ಶಬ್ದಗಳನ್ನು ಬಳಸಿಲ್ಲ. ಪ್ರತಿಯೊಂದು ವಿಚಾರವನ್ನು ನಿಶ್ಚಯಾತ್ಮಕ ಬುದ್ಧಿಯಿಂದ ಬರೆಯಲಾಗಿದೆ, ಉದಾ ‘ಶ್ರೀಮದ್ಭಗವದ್ಗೀತೆಯಲ್ಲಿ ವಿವಿಧ ಗೂಢ ವಿಷಯಗಳ ಬಗ್ಗೆ ಚರ್ಚೆಯನ್ನು ಮಾಡಲಾಗಿದೆ; ಆದರೆ ಯಾವುದೇ ಸ್ಥಳದಲ್ಲಿ ‘ಪ್ರಾಯಶಃ’ ಅಥವಾ ‘ಬಹುಶಃ’ ಈ ಶಬ್ದಗಳನ್ನು ಉಪಯೋಗಿಸಲಾಗಿಲ್ಲ’. ಇದು ಯಾವುದರಿಂದಾಗಿ ಸಾಧ್ಯವಾಗುತ್ತದೆ ? ನಾವು ಇಂತಹ ನಿಶ್ಚಯಾತ್ಮಕ ಬುದ್ಧಿಯ ಶಿಕ್ಷಣಪದ್ಧತಿಯನ್ನು ಪ್ರಾರಂಭಿಸುವುದು ಅಪೇಕ್ಷಿತವಿದೆ; ಏಕೆಂದರೆ ಆ ಬುದ್ಧಿಯಲ್ಲಿಯೇ ಮನುಷ್ಯನನ್ನು ಉಚ್ಚತರ ಮತ್ತು ಉಚ್ಚತಮ ಮನುಷ್ಯನನ್ನು ಮಾಡುವ ಸಾಮರ್ಥ್ಯವಿರುತ್ತದೆ.

೫೭. ಕೌಶಲ್ಯಪೂರ್ಣ ಮತ್ತು ನಿಶ್ಚಯಾತ್ಮಕ ಬುದ್ಧಿಗೆ ಆವಶ್ಯಕವಿರುವ ಘಟಕಗಳು ಮತ್ತು ಅವುಗಳ ಅನಿವಾರ್ಯತೆ !

ಕೌಶಲ್ಯಪೂರ್ಣ ಮತ್ತು ನಿಶ್ಚಯಾತ್ಮಕ ಬುದ್ಧಿಗಾಗಿ ವಾಸನೆ, ಸ್ವಾರ್ಥ, ಭಯ, ಕುಸಂಸ್ಕಾರ, ಅಹಂಕಾರ ಇತ್ಯಾದಿಗಳಿಂದ ದೂರವಿರಬೇಕು ಮತ್ತು ಒಳ್ಳೆಯ ಸಂಸ್ಕಾರ, ವಿಚಾರ ಮತ್ತು ಸದಾಚರಣಿ ಗಳಾಗಿರಬೇಕು. ಸಿಟ್ಟು, ದ್ವೇಷ ಮತ್ತು ಆಸೆ ಇತ್ಯಾದಿ ವಾಸನೆಗಳು ಮನುಷ್ಯನಿಗೆ ಯೋಗ್ಯ ನಿರ್ಣಯವನ್ನು ತೆಗೆದುಕೊಳ್ಳಲು ಬಿಡುವುದಿಲ್ಲ. ಮನುಷ್ಯನ ಸ್ವಾರ್ಥದಲ್ಲಿ ಸತತವಾಗಿ ಬದಲಾವಣೆಯಾಗುತ್ತಿರುತ್ತದೆ. ಆದ್ದರಿಂದ ಅವನು ಯೋಗ್ಯ ಮತ್ತು ನಿಶ್ಚಯಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಲು ವಿಫಲನಾಗುತ್ತಾನೆ. ಮನುಷ್ಯನಿಗೆ ಸಮಾಜ, ಸರಕಾರ ಮತ್ತು ಪರಿಸ್ಥಿತಿಯ ಭಯವಾಗುತ್ತದೆ. ಆದ್ದರಿಂದ ಯೋಗ್ಯ ಅಥವಾ ನಿಶ್ಚಯಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಮನುಷ್ಯನ ಚಿತ್ತದಲ್ಲಿ ವರ್ತಮಾನ ಜೀವನದ ಮತ್ತು ಪೂರ್ವಜನ್ಮದ ಕುಸಂಸ್ಕಾರಗಳಿರುತ್ತವೆ. ಎಲ್ಲಿಯವರೆಗೆ ಅವುಗಳನ್ನು ಕಿತ್ತೆಸೆಯುವುದಿಲ್ಲವೋ, ಅಲ್ಲಿಯವರೆಗೆ ಮನುಷ್ಯನಿಗೆ ಜಾಣತನದಿಂದ ಮತ್ತು ನಿಶ್ಚಯಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮನುಷ್ಯನ ಅಹಂಕಾರವು ಸಹ ಯೋಗ್ಯ ಮತ್ತು ನಿಶ್ಚಯಾತ್ಮಕ ನಿರ್ಣಯವನ್ನು ತೆಗೆದುಕೊಳ್ಳಲು ಅಡಚಣೆಗಳನ್ನು ತರುತ್ತದೆ. ಆದುದರಿಂದ ನಾವು, ‘ವ್ಯಾವಹಾರಿಕ ಮನುಷ್ಯನ ಬುದ್ಧಿಯು ವಿವಿಧ ದೋಷಗಳಿಂದ ಪೀಡಿತವಾಗಿರುವುದನ್ನು ನೋಡುತ್ತೇವೆ. ಇದರಿಂದ ಯೋಗ್ಯ (ಕೌಶಲ್ಯಪೂರ್ಣ) ಮತ್ತು ನಿಶ್ಚಯಾತ್ಮಕ ನಿರ್ಣಯವನ್ನು ಇಂತಹ ಬುದ್ಧಿಯಿಂದ ತೆಗೆದು ಕೊಳ್ಳಲು ಸಾಧ್ಯವಾಗುವುದಿಲ್ಲ’.

೫೮. ಋಷಿಗಳ ಬುದ್ಧಿಯು ತೇಜಸ್ವಿಯಾಗಿರುವುದರಿಂದ ಅವರು ಮಂಡಿಸಿದ ವಿಚಾರಗಳ ಆಧಾರದ ಮೇಲೆಯೇ ಆಧುನಿಕ ಶಿಕ್ಷಣದ ದೋಷಗಳು ದೂರವಾಗಲಿವೆ ಮತ್ತು ಅವರ ತೇಜಸ್ವಿ ವಿಚಾರಗಳೇ ಭಾರತೀಯ ಸಂಸ್ಕೃತಿಯ ಪ್ರಾಣವಾಗಿವೆ

ಭಾರತೀಯ ಋಷಿಗಳ ಬುದ್ಧಿಯು ಶುದ್ಧ, ಪವಿತ್ರ, ದೋಷರಹಿತ, ಚೈತನ್ಯಮಯ ಮತ್ತು ತೇಜಸ್ವಿಯಾಗಿತ್ತು. ಆದ್ದರಿಂದ ಅವರ ವಿಚಾರಗಳಲ್ಲಿ ವ್ಯಾಪಕ ದೃಷ್ಟಿಕೋನವಿರುತ್ತಿತ್ತು. ವ್ಯಾಪಕತೆಯು ಯೋಗ್ಯ ಮತ್ತು ನಿಶ್ಚಯಾತ್ಮಕ ಬುದ್ಧಿಯಿಂದಲೇ ಪ್ರಾಪ್ತವಾಗುತ್ತದೆ. ಪರಂಪರೆಯಿಂದ ಭಾರತೀಯ ವಿದ್ವಾನರಿಗೆ (ಪಂಡಿತರಿಗೆ) ಆ ವಿಚಾರ ಮತ್ತು ಉಪದೇಶಗಳ ಬಗ್ಗೆ ಅಪಾರ ಗೌರವ ಮತ್ತು ಶ್ರದ್ಧೆ ಇದೆ. ಯಾವಾಗ ಋಷಿಗಳ ಮೂಲಕ ಮಂಡಿಸಲಾದ ವಿಚಾರಗಳ ಆಧಾರವಿರುವುದೋ, ಆಗಲೇ ಆಧುನಿಕ ಶಿಕ್ಷಣದಲ್ಲಿನ ದೋಷಗಳು ದೂರವಾಗಬಹುದು. ಈ ಆಧಾರವೇ ಭಾರತೀಯ ಸಂಸ್ಕೃತಿಯ ಪ್ರಾಣವಾಗಿದೆ.

– (ಪೂ.) ಡಾ. ಶಿವಕುಮಾರ ಓಝಾ, ಹಿರಿಯ ಸಂಶೋಧಕರು ಮತ್ತು ಭಾರತೀಯ ಸಂಸ್ಕೃತಿಯ ಅಧ್ಯಯನಕಾರರು

(ಆಧಾರ : ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?)