ಗಾಂಧಿವಾದಿ ಲೇಖಕ ಧರ್ಮಪಾಲರು ಹೇಳುತ್ತಾರೆ, ‘ಆಂಗ್ಲರು ಮುಂದಿನ ಮುಖ್ಯ ತಪ್ಪುಮಾರ್ಗಗಳನ್ನು ಅವಲಂಬಿಸುತ್ತ ಭಾರತಕ್ಕೆ ಬಹುದೊಡ್ಡ ಹಾನಿ ಮಾಡಿದರು. ಅವರು ಇಲ್ಲಿಯ ಅಮೂಲ್ಯ ನೈಸರ್ಗಿಕ ಹಾಗೂ ಇತರ ಸಂಪತ್ತುಗಳನ್ನು ದೋಚಿದರು. ಇದರಿಂದ ಜನಸಾಮಾನ್ಯರು ಭಿಕ್ಷೆ ಬೇಡುವಂತಾದರು. ಹಾಗೆಯೇ ಅವರು ಅನೇಕರನ್ನು ಕುಮಾರ್ಗಕ್ಕೆ ಹಚ್ಚಿದರು. ಈ ಸಂದರ್ಭದಲ್ಲಿ ವಾರನಹೆಸ್ಟಿಂಗ್‌ರ ಲಿಖಿತ ಪುರಾವೆ ನೀಡಿ ಹೇಳುತ್ತಾ, ‘ನಮ್ಮ ಧೋರಣೆ ಹಾಗೂ ನಾವು ಮಾಡಿದ ಕೆಲಸಗಳಿಂದ ಭಾರತದಲ್ಲಿ ಅನಾಚಾರವು ಹೆಚ್ಚಾಯಿತು. ಅದರಿಂದ ಸೈನಿಕರು ಹಾಗೂ ಪೊಲೀಸರೂ ಕಳ್ಳರು ಹಾಗೂ ದರೋಡೆಕೋರರಾದರು’, ಎಂದರು. ಆಂಗ್ಲರು ಬೇಕೆಂದೇ ಭಾರತವನ್ನು ಕಳಂಕಿತಗೊಳಿಸಿದರು.
– ವಿಶ್ವಾಸ ಪಾಟೀಲ (ಸಾಪ್ತಾಹಿಕ ಲೋಕಜಾಗರ, ೨೮.೯.೨೦೧೨)