ಅಮರಾವತಿ (ಆಂಧ್ರ ಪ್ರದೇಶ) – ವಿದ್ಯಾರ್ಥಿಗಳಿಗೆ ಒಳ್ಳೆಯದಾಗಿ ಕಲಿಸಿದರು ಕೂಡ ವಿದ್ಯಾರ್ಥಿಗಳಲ್ಲಿ ಸುಧಾರಣೆ ಆಗುತ್ತಿಲ್ಲ ಎಂಬುದನ್ನು ನೋಡಿ ಆಂಧ್ರ ಪ್ರದೇಶದಲ್ಲಿನ ಓರ್ವ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುವ ಬದಲು ಸ್ವತಃ ಶಿಕ್ಷೆ ಅನುಭವಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಆಂಧ್ರಪ್ರದೇಶದಲ್ಲಿನ ವಿಜಯನಗರಂ ಜಿಲ್ಲಾ ಪರಿಷತ್ತಿನ ಶಾಲೆಯಲ್ಲಿ ನಡೆದಿದೆ. ಮುಖ್ಯೋಪಾಧ್ಯಾಯ ಚಿಂತಾ ರಮಣ ಇವರು ವಿದ್ಯಾರ್ಥಿಗಳ ಕೆಟ್ಟು ವರ್ತನೆಗೆ ಬೇಸತ್ತು ಈ ರೀತಿ ನಡೆದುಕೊಂಡರು. ‘ಮಕ್ಕಳಿಗೆ ಕಲಿಸುವಲ್ಲಿ ನಾವು ಎಲ್ಲಿ ಕಡಿಮೆ ಬೀಳುತ್ತಿದ್ದೇವೆ’, ಇದನ್ನು ಹೇಳುತ್ತಾ ಈ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಎದುರು ಬಸ್ಕಿ ಹೊಡೆದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಎದುರು ಕಿವಿ ಹಿಡಿದು ೫೦ ಬಸ್ಕಿ ಹೊಡೆದರು. ಮುಖ್ಯೋಪಾಧ್ಯಾಯರು ಯಾವಾಗ ಬಸ್ಕಿ ಹೊಡೆಯುತ್ತಿದ್ದರು ಆ ಸಮಯದಲ್ಲಿ ವಿದ್ಯಾರ್ಥಿಗಳು ಪರಸ್ಪರರನ್ನು ನೋಡುತ್ತಿದ್ದರು. ಕೆಲವು ವಿದ್ಯಾರ್ಥಿಗಳು ‘ಹೀಗೆ ಮಾಡಬೇಡಿ’ ಎಂದು ವಿನಂತಿಸಿದರು ಕೂಡ ಮುಖ್ಯೋಪಾಧ್ಯಾಯರು ಹಾಗೆ ಮಾಡಿದರು; ಆದರೆ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಮಾತಿನ ಕಡೆಗೆ ದುರ್ಲಕ್ಷ ಮಾಡುತ್ತಾ ಬಸ್ಕಿ ಹೊಡೆಯುವುದು ಮುಂದುವರೆಸಿದರು. ಮುಖ್ಯೋಪಾಧ್ಯಾಯರ ಈ ಕೃತಿಯಿಂದ ಉಪಸ್ಥಿತ ಇರುವ ನೂರಾರು ವಿದ್ಯಾರ್ಥಿಗಳು ನಾಚಿಕೆ ಪಟ್ಟರು.
ಸಂಪಾದಕೀಯ ನಿಲುವುವಿದ್ಯಾರ್ಥಿಗಳಿಗೆ ಕಲಿಸುವುದು ಇದು ಶಿಕ್ಷಕರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಅಪೇಕ್ಷಿತ ಬದಲಾವಣೆ ಕಾಣದಿದ್ದರೆ, ಆಗ ಈ ಕರ್ತವ್ಯ ಪಾಲನೆಯಲ್ಲಿ ನಾವು ಎಲ್ಲಿ ಕಡಿಮೆ ಬಿದ್ದೆವು, ಇದರ ಬಗ್ಗೆ ಚಿಂತನ ಮಂಥನ ನಡೆಸಿ ಶಿಕ್ಷಕರು ಅಗತ್ಯವಿರುವ ಬದಲಾವಣೆ ಸಹಿತ ವಿದ್ಯಾದಾನದ ಕಾರ್ಯ ಮುಂದುವರಿಸಬೇಕು. ಸ್ವತಃ ಶಿಕ್ಷೆ ಅನುಭವಿಸಿ ಈ ಸಮಸ್ಯೆ ಬಗೆ ಹರಿಯುವುದಿಲ್ಲ; ತದ್ವಿರುದ್ಧ ಶಿಕ್ಷಕರು ಕರ್ತವ್ಯ ಪಾಲನೆಯಲ್ಲಿ ಕಡಿಮೆ ಬಿದ್ದಿರುವ ಹಣೆಪಟ್ಟೆ ಅಂಟಿಕೊಳ್ಳುತ್ತದೆ! |