ಅಮೃತಸರ(ಪಂಜಾಬ)ದಲ್ಲಿ ದೇವಸ್ಥಾನದಲ್ಲಿ ಬಾಂಬ್ ಸ್ಪೋಟ: ಜೀವಹಾನಿ ಇಲ್ಲ

ದಾಳಿಯ ಹಿಂದೆ ಐ.ಎಸ್.ಐ. (ಇಂಟರ್ ಸರ್ವಿಸ್ ಇಂಟಲಿಜೆನ್ಸ್)ನ ಕೈವಾಡ !

ಅಮೃತಸರ (ಪಂಜಾಬ್) – ಇಲ್ಲಿಯ ಠಾಕುರದ್ವಾರ ದೇವಸ್ಥಾನದಲ್ಲಿ ಬೈಕ್‌ನಲ್ಲಿ ಬಂದಿದ್ದ ಯುವಕರು ಎರಡು ಹ್ಯಾಂಡ್ ಬಾಂಬ್ ಎಸೆದರು. ಈ ದಾಳಿ ನಡೆದಾಗ, ದೇವಸ್ಥಾನದ ಅರ್ಚಕರು ಒಳಗೆ ಮಲಗಿದ್ದರು, ಅವರು ಈ ದಾಳಿಯಿಂದ ಸ್ವಲ್ಪದರಲ್ಲಿಯೇ ಬಚಾವಾದರು. ಪೊಲೀಸರು ನಡೆಸಿರುವ ವಿಚಾರಣೆಯಲ್ಲಿ ಈ ಘಟನೆಯ ಹಿಂದೆ ಪಾಕಿಸ್ತಾನದ ಗೂಢಾಚಾರ ಸಂಸ್ಥೆ ಐ.ಎಸ್.ಐ.ನ ಕೈವಾಡ ಇರುವುದು ಬೆಳಕಿಗೆ ಬಂದಿದೆ.

೧. ಪಂಜಾಬದ ಪೊಲೀಸ ಅಧಿಕಾರಿ ಗುರುಪ್ರೀತ ಸಿಂಹ ಭೂಲ್ಲರ್ ಇವರು, ಸಿಸಿಟಿವಿಯಲ್ಲಿ ಇಬ್ಬರು ಬೈಕ್ ಸವಾರರು ಕಾಣುತ್ತಿದ್ದಾರೆ, ಅವರ ಶೋಧ ನಡೆಸುತ್ತಿದ್ದೇವೆ. ಅವರನ್ನು ಬೇಗನೆ ಬಂಧಿಸಲಾಗುವುದು. ಪಾಕಿಸ್ತಾನದ ವ್ಯವಸ್ಥೆ ಪ್ರತಿದಿನ ಬಡ ಕುಟುಂಬದಲ್ಲಿನ ಯುವಕರನ್ನು ಈ ರೀತಿಯ ಕೃತ್ಯ ಮಾಡಲು ಪ್ರೇರೇಪಿಸಲಾಗುತ್ತದೆ. ಕಳೆದ ಕೆಲವು ದಿನಗಳಿಂದ ನಡೆದಿರುವ ಘಟನೆಯಿಂದ ಐ.ಎಸ್.ಐ. ದುರ್ಬಲ ಜನರನ್ನು ಗುರಿ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ. ಯಾರದೋ ಪ್ರಭಾವದಿಂದ ಅಥವಾ ಹಣದ ಆಸೆಗಾಗಿ ಈ ರೀತಿಯ ಕೃತ್ಯಗಳು ಮಾಡಬೇಡಿ. ಇದರ ಪರಿಣಾಮ ನೀವು ಅನುಭವಿಸ ಬೇಕಾಗುವುದು, ಹೀಗೂ ಕೂಡ ಪಂಜಾಬದ ಪೊಲೀಸ ಅಧಿಕಾರಿಗಳು ಹೇಳಿದ್ದಾರೆ.

೨. ಮುಖ್ಯಮಂತ್ರಿ ಭಗವಂತ ಮಾನ ಇವರು, ಪಂಜಾಬದಲ್ಲಿ ಯಾವಾಗಲೂ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ; ಆದರೆ ಪೊಲೀಸರು ಇಂತಹ ಸಮಾಜಕಂಟಕರ ಮೇಲೆ ತಕ್ಷಣ ಕ್ರಮ ಕೂಡ ಕೈಗೊಳ್ಳುತ್ತಾರೆ. ಪಂಜಾಬದಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವ ರಕ್ಷಿಸಲಾಗುವುದು ಎಂದು ಹೇಳಿದರು.

ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಆರೋಪಿಗಳ ಬಂಧನ

ಅಮೃತಸರದ ಪೊಲೀಸ್ ಮಹಾನಿರೀಕ್ಷಕ ಗುರಪ್ರಿತ್ ಸಿಂಗ್ ಭುಲ್ಲರ್ ಮಾತನಾಡಿ, ಬಿಹಾರದ ಮಧೇಪುರದಿಂದ ಕರ್ಣ, ಮುಖೇಶ್ ಮತ್ತು ಸಜ್ಜನ್ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರು ನೇಪಾಳಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿರುವಾಗ ಬಂಧಿಸಲಾಗಿದೆ. ಈ ವ್ಯಕ್ತಿಗಳು ಗ್ರೆನೇಡ್‌ಗಳನ್ನು ಸರಬರಾಜು ಮಾಡುತ್ತಿದ್ದರು. ಇವರು ಸ್ಫೋಟ ಸಂಭವಿಸಿದ ಸ್ಥಳದಲ್ಲೇ ವಾಸಿಸುತ್ತಿದ್ದರು. ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗುವುದು.

ಸಂಪಾದಕೀಯ ನಿಲುವು

ಪಂಜಾಬದಲ್ಲಿ ಪಾಕಿಸ್ತಾನಿಗಳಿಂದ ಖಲಿಸ್ತಾನಿ ಬೆಂಬಲಿಗರ ಜೊತೆಗೆ ಕೈಜೋಡಿಸಿ ಹಿಂಸಾಚಾರ ನಡೆಸುವ ಪ್ರಯತ್ನ ವಿಫಲಗೊಳಿಸುವುದು ಕಾಲದ ಅಗತ್ಯವಾಗಿದೆ. ಇದಕ್ಕಾಗಿ ಪಂಜಾಬದಲ್ಲಿ ಸಮಯ ಇರುವಾಗಲೇ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು, ಇಲ್ಲವಾದರೆ ಬಂಗಾಲದಂತಹ ಪರಿಸ್ಥಿತಿ ಇಲ್ಲಿ ಕೂಡ ಕೈಮೀರಿ ಹೋಗಲು ಸಮಯ ಬೇಕಾಗುವುದಿಲ್ಲ ಇದೇ ಸತ್ಯ !