ಆರತಿಯ ಸಮಯದಲ್ಲಿ ಶಂಖನಾದ ಮಾಡಿದಾಗ ಮುರಳೀಧರ ಶ್ರೀಕೃಷ್ಣನ ಮೂರ್ತಿಯ ಕೈಯಲ್ಲಿನ ಕೊಳಲು ಹಾರಿ ಕೆಳಗೆ ಬಿದ್ದಿರುವ ಘಟನೆಯ ಬಗ್ಗೆ ಮಾಡಿದ ಸೂಕ್ಷ್ಮ ಪರೀಕ್ಷಣೆ !

ಕು. ಮಧುರಾ ಭೋಸಲೆ

‘೨೩.೪.೨೦೧೯ ರಂದು ಸಾಯಂಕಾಲ ೬.೩೦ ಕ್ಕೆ ಸನಾತನದ ರಾಮನಾಥಿ ಆಶ್ರಮದಲ್ಲಿನ ಧ್ಯಾನಮಂದಿರದಲ್ಲಿ ದಿನನಿತ್ಯದಂತೆ ಆರತಿಯನ್ನು ಮಾಡಲಾಯಿತು. ಸನಾತನದ ಸಾಧಕ ಶ್ರೀ. ಸುನೀಲ ಪವಾರ ಆರತಿಯನ್ನು ಮಾಡುವ ಮೊದಲು ಮೂರು ಬಾರಿ ಶಂಖನಾದ ಮಾಡಿದರು. ಓರ್ವ ಸಂತರು ಪರಾತ್ಪರ ಗುರು ಡಾ. ಆಠವಲೆಯವರಿಗೆ ಕೊಟ್ಟಿರುವ ಧಾತುವಿನ ಬೆಳ್ಳಿಯ ಬಣ್ಣದ ಮುರಳೀಧರ ಶ್ರೀಕೃಷ್ಣನ ಮೂರ್ತಿಯನ್ನು ಧ್ಯಾನಮಂದಿರದಲ್ಲಿ ಇಡಲಾಗಿದೆ. ಶ್ರೀಕೃಷ್ಣನ ಕೈಯಲ್ಲಿ ಬೆಳ್ಳಿಯ ಬಣ್ಣದ ಕೊಳಲಿದೆ. ಶ್ರೀ. ಸುನೀಲ ಪವಾರ ಮೊದಲನೆಯ ಸಲ ಶಂಖನಾದ ಮಾಡಿದಾಗ ಮುರಳೀಧರ ಶ್ರೀಕೃಷ್ಣನ ಮೂರ್ತಿಯ ಕೈಯಲ್ಲಿನ ಗೇಣುದ್ದ ಕೊಳಲು ಹಾರಿ ೪-೫ ಅಡಿ ದೂರ ಹೋಗಿ ಬಿದ್ದಿತು. ಈ ಘಟನೆಯ ನಂತರ ಸ್ವಲ್ಪ ಸಮಯದಲ್ಲಿ ನನಗೆ ಸೌ. ಪ್ರಿಯಾಂಕಾ ರಾಜಹಂಸ (ಆಧ್ಯಾತ್ಮಿಕ ಮಟ್ಟ ಶೇ. ೬೯) ಇವರು ಈ ಘಟನೆಯ ಸೂಕ್ಷ್ಮ ಪರೀಕ್ಷಣೆಯನ್ನು ಮಾಡಲು ಹೇಳಿದರು. ಆಗ ದೇವರ ಕೃಪೆಯಿಂದ ನನ್ನಿಂದಾದ ಸೂಕ್ಷ್ಮ ಪರೀಕ್ಷಣೆಯನ್ನು ಮುಂದೆ ನೀಡುತ್ತಿದ್ದೇನೆ’.

೧. ಸನಾತನದ ರಾಮನಾಥಿ ಆಶ್ರಮದಲ್ಲಿನ ಧ್ಯಾನಮಂದಿರದ ಮುರಳೀಧರ ಶ್ರೀಕೃಷ್ಣನ ಮೂರ್ತಿಯ ಸೂಕ್ಷ್ಮ ಪರೀಕ್ಷಣೆ

೧ ಅ. ಶಂಖನಾದದಿಂದ ನಿರ್ಗುಣ ಚೈತನ್ಯ ಮತ್ತು ನಾದಶಕ್ತಿ ವಾತಾವರಣದಲ್ಲಿ ಪ್ರಕ್ಷೇಪಿಸುವುದು, ನಾದಶಕ್ತಿಯ ಲಹರಿಗಳು ಮುರಳೀಧರ ಶ್ರೀಕೃಷ್ಣನ ಮೂರ್ತಿಗೆ ಸೂಕ್ಷ್ಮದಲ್ಲಿ ಸ್ಪರ್ಶವಾಗಿದ್ದರಿಂದ ಮೂರ್ತಿಯ ಸೂರ್ಯನಾಡಿ ಪ್ರಾರಂಭವಾಗುವುದು ಮತ್ತು ಅದರಲ್ಲಿ ಮಾರಕ ತತ್ತ್ವ ಕಾರ್ಯನಿರತವಾಗುವುದು :  ಈ ಸೂಕ್ಷ್ಮ ಪರೀಕ್ಷಣೆಯನ್ನು ಮಾಡುವಾಗ ದೇವರು ನನ್ನನ್ನು ಕೆಲವು ಕ್ಷಣ ಭೂತಕಾಲಕ್ಕೆ ಕರೆದೊಯ್ದನು ಮತ್ತು ನಾನು ‘ಯಾವಾಗ ಸಾಧಕನು ಶಂಖನಾದವನ್ನು ಮಾಡಿದ್ದನೋ, ಆ ಕ್ಷಣವನ್ನು ಅನುಭವಿಸತೊಡಗಿದೆನು. ಆಗ ನನಗೆ, ಶಂಖನಾದದಿಂದ ನಿರ್ಗುಣ ಚೈತನ್ಯ ಮತ್ತು ನಾದಶಕ್ತಿ ಸಂಪೂರ್ಣ ವಾತಾವರಣದಲ್ಲಿ ಪಸರಿಸಿತು ಮತ್ತು ನಾದಶಕ್ತಿಯ ಲಹರಿಗಳು ಮುರಳೀಧರ ಶ್ರೀಕೃಷ್ಣನ ಮೂರ್ತಿಗೆ ಸೂಕ್ಷ್ಮದಿಂದ ಸ್ಪರ್ಶಿಸಿತು ಎಂದು ಅರಿವಾಯಿತು. ಇದರಿಂದಾಗಿ ಶ್ರೀಕೃಷ್ಣನ ಮೂರ್ತಿಯ ಸೂರ್ಯನಾಡಿ ಪ್ರಾರಂಭವಾಗಿ ಅದರಲ್ಲಿನ ಮಾರಕ ತತ್ತ್ವಕಾರ್ಯನಿರತವಾಗಿ ಮಾರಕ ಶಕ್ತಿ ಪ್ರಕಟವಾಯಿತು. ಆ ಮಾರಕ ಶಕ್ತಿ ಶ್ರೀಕೃಷ್ಣನ ಎರಡೂ ಕೈಗಳಿಂದ ವೇಗದಿಂದ ಪ್ರವಹಿಸಿದ್ದರಿಂದ ಅವನ ಕೈಗೆ ವಿದ್ಯುತ್ತಿನ ಆಘಾತದಂತಾಗಿ ಅವನ ಕೈಯಲ್ಲಿನ ಕೊಳಲು ಒಮ್ಮೆಲೆ ಹಾರಿ ದೂರ ಹೋಗಿ ಬಿದ್ದಿತು.

೧ ಆ. ಶ್ರೀಕೃಷ್ಣನ ತಾರಕ ರೂಪವು ಲುಪ್ತವಾಗಿದ್ದರಿಂದ ಅವನು ಕೊಳಲಿನ ತ್ಯಾಗವನ್ನು ಮಾಡುವುದು ಮತ್ತು ಕಾಲಕ್ಕನುಸಾರವಾಗಿ ಮಾರಕ ರೂಪವನ್ನು ಧರಿಸಲು ಕೈಯಲ್ಲಿ ಸುದರ್ಶನಚಕ್ರವನ್ನು ಹಿಡಿಯುವುದು : ಈ ಘಟನೆಯಿಂದ ಶ್ರೀಕೃಷ್ಣನು ಸಾಧಕರಿಗೆ, ‘ಈಗ ಅನುಕೂಲ ಕಾಲವು ಮುಗಿದಿರುವುದರಿಂದ ಕೊಳಲು ನುಡಿಸುವ ಸಮಯವು ಮುಗಿದು ಹೋಗಿದೆ. ಈಗ ಆಪತ್ಕಾಲ ಬಂದಿರುವುದರಿಂದ ಕಾಲಕ್ಕನುಸಾರ ಮಾರಕ ರೂಪವನ್ನು ಧರಿಸುವುದು ಆವಶ್ಯಕವಾಗಿದೆ. ಆದುದರಿಂದ ಈಗ ನನ್ನ ತಾರಕ ರೂಪವು ಲುಪ್ತವಾಗಿದೆ; ಆದುದರಿಂದಾಗಿ ನಾನು ನನ್ನ ಕೊಳಲನ್ನು ತ್ಯಾಗ ಮಾಡಿ ನನ್ನ ಪ್ರೀತಿಯ ಸುದರ್ಶನಚಕ್ರವನ್ನು ಧರಿಸುತ್ತಿದ್ದೇನೆ. ಸುದರ್ಶನಚಕ್ರವನ್ನು ಧರಿಸಿದ ಮೇಲೆ ನನ್ನ ಮಾರಕ ರೂಪವು ಸಂಪೂರ್ಣ ವ್ಯಕ್ತವಾಗುವುದು’, ಎಂಬ ಸಂದೇಶವನ್ನು ನೀಡಿದನು.

೧ ಇ. ಶ್ರೀಕೃಷ್ಣನ ಮೂರ್ತಿಯಲ್ಲಿ ಬಹಳಷ್ಟು ಪ್ರಮಾಣದಲ್ಲಿ ಮಾರಕ ತತ್ತ್ವ ಕಾರ್ಯನಿರತವಾಗುವುದು : ಶ್ರೀಕೃಷ್ಣನ ಮೂರ್ತಿಯಲ್ಲಿ ಬಹಳಷ್ಟು ಪ್ರಮಾಣದಲ್ಲಿ ಮಾರಕ ತತ್ತ್ವಕಾರ್ಯನಿರತವಾಗಿರುವುದು ಅರಿವಾಯಿತು. ಅದರಿಂದ ಸಾಧಕರಿಗೆ ತೊಂದರೆಗಳನ್ನು ಕೊಡುವ ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳ ವಿನಾಶದ ಪ್ರಕ್ರಿಯೆ ವೇಗದಿಂದ ಪ್ರಾರಂಭವಾಗಿರುವುದು ಅರಿವಾಯಿತು.

೧ ಈ. ಭಗವಾನ ಶ್ರೀಕೃಷ್ಣನು ಧರ್ಮಸಂಸ್ಥಾಪನೆಯ ಕಾರ್ಯಕ್ಕಾಗಿ ಸಕ್ರಿಯನಾಗಿರುವುದರ ಅನುಭವ ಬರುವುದು : ಮೂರ್ತಿಯಲ್ಲಿ ಕೇಸರಿ ಬಣ್ಣದ ಧರ್ಮಶಕ್ತಿಯ ಲಹರಿಗಳು ಮಿಂಚಿನಂತೆ ಹೊಳೆಯುತ್ತಿರುವುದು ಕಾಣಿಸಿತು. ಇದರಿಂದ  ಭಗವಾನ ಶ್ರೀಕೃಷ್ಣನು ಧರ್ಮಸಂಸ್ಥಾಪನೆ ಕಾರ್ಯಕ್ಕಾಗಿ ಸಕ್ರಿಯನಾಗಿರುವುದರ ಅನುಭವ ಬಂದಿತು.

೨. ಭೂಮಿಯ ಮೇಲೆ ಬಿದ್ದಿರುವ ಕೊಳಲಿನ ಸೂಕ್ಷ್ಮ ಪರೀಕ್ಷಣೆ

ಭೂಮಿಯ ಮೇಲೆ ಬಿದ್ದಿರುವ ಕೊಳಲನ್ನು ನೋಡಿದಾಗ ಅದರ ಸ್ಥೂಲದಲ್ಲಿನ ಕಾರ್ಯವು ಮುಗಿದಿರುವುದರಿಂದ ನನಗೆ ಅದರಲ್ಲಿನ ಕೃಷ್ಣತತ್ತ್ವ ಲುಪ್ತವಾಗಿರುವುದು ಅರಿವಾಯಿತು. ಅದರಲ್ಲಿ ಶ್ರೀವಿಷ್ಣುವಿನ ನಿರ್ಗುಣ ತತ್ತ್ವ ಮತ್ತು ಚೈತನ್ಯ ಕಾರ್ಯನಿರತವಿರುವುದು ಅರಿವಾಯಿತು. ಕೊಳಲಿಗೆ ಶ್ರೀಕೃಷ್ಣನ ವಿಯೋಗದಿಂದ ಸ್ವಲ್ಪ ದುಃಖವೆನಿಸಿತು; ಆದರೆ ಶ್ರೀಕೃಷ್ಣನು ಸಮಷ್ಟಿಯ ಕಲ್ಯಾಣಕ್ಕಾಗಿ ಮಾರಕ ರೂಪವನ್ನು ಧರಿಸಿದ್ದನ್ನು ನೋಡಿ ಅದಕ್ಕೆ ಹೆಚ್ಚು ಆನಂದವಾಯಿತು. ಇದರಿಂದ ಕೊಳಲಿನಲ್ಲಿ ಸಂಕುಚಿತ ಸ್ತರದಲ್ಲಿನ ವ್ಯಷ್ಟಿ ಭಾವವಿರದೇ ವ್ಯಾಪಕ ಸ್ತರದಲ್ಲಿ ಸಮಷ್ಟಿಭಾವ ಇರುವುದು ಅರಿವಾಯಿತು.

೩. ಕೊಳಲಿನ ಅನುಭೂತಿಯಿಂದ ಶ್ರೀಕೃಷ್ಣನು ನೀಡಿದ ಬೋಧನೆ

ಮೇಲಿನ ಪ್ರಸಂಗದಿಂದ ‘ಭಗವಂತನು ಅವನ ಭಕ್ತರಿಗೆ ನೀಡಿದ ವಚನವನ್ನು ಪೂರ್ಣ ಮಾಡಲು ಯಾವಾಗಲೂ ಸಿದ್ಧನಿರುತ್ತಾನೆ’, ಎಂಬುದರ ಅರಿವಾಯಿತು. ಮಹಾಭಾರತದ ಯುದ್ಧದಲ್ಲಿ ಯಾವಾಗ ಅರ್ಜುನನು ಭೀಷ್ಮಾಚಾರ್ಯರ ವಧೆಯನ್ನು ಮಾಡುತ್ತಿರಲಿಲ್ಲವೋ, ಆಗ ಶ್ರೀಕೃಷ್ಣನು ‘ನಾನು ಯುದ್ಧದಲ್ಲಿ ಶಸ್ತ್ರಗಳನ್ನು ಹಿಡಿಯುವುದಿಲ್ಲ’, ಎಂಬ ಪ್ರತಿಜ್ಞೆಯನ್ನು ಮುರಿದು ಸುದರ್ಶನಚಕ್ರವನ್ನು ಧರಿಸಿದ್ದನು. ಅದೇ ರೀತಿ ಈಗ ಕಲಿಯುಗದಲ್ಲಿಯೂ ಸನಾತನದ ಸಾಧಕರಿಗೆ ಆಗುತ್ತಿರುವ ಕೆಟ್ಟ ಶಕ್ತಿಗಳ ತೊಂದರೆಗಳ ಕಡೆಗೆ ಭಗವಾನ ಶ್ರೀಕೃಷ್ಣನು ಕೊಳಲನ್ನು ನುಡಿಸುತ್ತ ಸಾಕ್ಷೀಭಾವದಿಂದ ನೋಡದೇ, ಅವನು ಸುದರ್ಶನಚಕ್ರವನ್ನು ಧರಿಸಿ ಕೆಟ್ಟ ಶಕ್ತಿಗಳನ್ನು ಸಂಪೂರ್ಣ ನಾಶಮಾಡಿ  ಧರ್ಮಸಂಸ್ಥಾಪನೆಯನ್ನು ಮಾಡಲಿದ್ದಾನೆ, ಎಂಬ ಭರವಸೆ ಮೇಲಿನ ಅನುಭೂತಿಯಿಂದ ಸಿಗುತ್ತದೆ.

 ೪. ಕೃತಜ್ಞತೆ

ಈ ಅನುಭೂತಿಯನ್ನು ನೀಡಿದ ಬಗ್ಗೆ ನಾನು ಭಗವಾನ ಶ್ರೀಕೃಷ್ಣ ಮತ್ತು ಅವನ ಅಂಶಾವತಾರವಾಗಿರುವ ಪರಾತ್ಪರ ಗುರು ಡಾ. ಆಠವಲೆಯವರ ಪಾವನ ಚರಣಗಳಲ್ಲಿ ಎಲ್ಲ ಸಾಧಕರ ವತಿಯಿಂದ ಕೃತಜ್ಞತಾಪುಷ್ಪಗಳನ್ನು ಅರ್ಪಿಸುತ್ತೇನೆ.

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಲಭಿಸಿದ ಜ್ಞಾನ) ಆಧ್ಯಾತ್ಮಿಕ ಮಟ್ಟ ಶೇ. ೬೩), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೩.೪.೨೦೨೧)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ.

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.