‘ರಾಜಾಪುರದಲ್ಲಿ ಏನು ನಡೆಯಿತೋ, ಅದರ ಹಿಂದೆ ಸನಾತನ ಸಂಸ್ಥೆಯ ಪ್ರಭಾವದ ಪರಿಣಾಮವಂತೆ!’

ಇತಿಹಾಸ ತಜ್ಞ ಸರ್ಫರಾಜ್ ಅಹ್ಮದ್ ಅವರ ‘ಬಿಬಿಸಿ’ ವರದಿಯಿಂದ ಸನಾತನ ದ್ವೇಷ ಬಹಿರಂಗ!

ರತ್ನಾಗಿರಿ – ಮಾರ್ಚ್ ೧೨ ರಂದು ರತ್ನಾಗಿರಿ ಜಿಲ್ಲೆಯ ರಾಜಾಪುರದಲ್ಲಿ ಶಿಮ್ಗೋತ್ಸವದಲ್ಲಿ ಹೋಳಿಯ ಮರವನ್ನು ಕೊಂಡೊಯ್ಯುವ ಸಾಂಪ್ರದಾಯಿಕ ಮೆರವಣಿಗೆಯ ಸಮಯದಲ್ಲಿ ಮಸೀದಿಯ ಬಳಿ ಹಿಂದೂ ಮತ್ತು ಮುಸಲ್ಮಾನರ ನಡುವೆ ಘರ್ಷಣೆ ನಡೆಯಿತು. ಮಸೀದಿಯ ಮೆಟ್ಟಿಲುಗಳಿಗೆ ಹೋಳಿಯ ಮರವನ್ನು ತಾಗಿಸುವ ವರ್ಷಾನುಗಟ್ಟಲೆಯ ಹಳೆಯ ಸಂಪ್ರದಾಯ ಇದ್ದರೂ, ಮಸೀದಿಯ ಗೇಟನ್ನು ಮುಚ್ಚಲಾಗಿತ್ತು. ಸಂಪ್ರದಾಯಕ್ಕೆ ವಿರುದ್ಧವಾಗಿ ಮುಸಲ್ಮಾನರು ವರ್ತಿಸಿದ್ದರಿಂದ ಆಕ್ರೋಶಗೊಂಡ ಹಿಂದೂಗಳು ಹೋಳಿಯ ಮರವನ್ನು ಮಸೀದಿಯ ಆವರಣಕ್ಕೆ ನುಗ್ಗಿಸಿದರು. ಈ ಘಟನೆಯ ಬಗ್ಗೆ ಇತಿಹಾಸ ತಜ್ಞ ಸರ್ಫರಾಜ್ ಅಹ್ಮದ್ ಅವರ ಹೇಳಿಕೆಯನ್ನು ‘ಬಿಬಿಸಿ’ ಯಲ್ಲಿ ಪ್ರಸಾರ ಮಾಡಲಾಗಿದೆ. ಇದರಲ್ಲಿ ಅವರು, “ಕಳೆದ ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ಸನಾತನ ಸಂಸ್ಥೆಯ ಪ್ರಭಾವವಿದೆ. ರಾಜಾಪುರದಲ್ಲಿ ಏನು ನಡೆಯಿತೋ ಅದು ಇದ್ದಕ್ಕಿದ್ದಂತೆ ನಡೆದದ್ದಲ್ಲ. ಕಳೆದ ಕೆಲವು ವರ್ಷಗಳಿಂದ ಇಂತಹ ಮನಸ್ಥಿತಿಯನ್ನು ರೂಪಿಸಲಾಗುತ್ತಿತ್ತು. ಇದೆಲ್ಲ ನಡೆಯುತ್ತಿರುವಾಗ, ಧರ್ಮನಿರಪೇಕ್ಷ ಸಂಘಟನೆಗಳು, ಸಂಸ್ಥೆಗಳು, ಪಕ್ಷಗಳು ಇಂತಹ ವಿಷಯಗಳನ್ನು ನಿರ್ಲಕ್ಷಿಸಿವೆ. ಇಂದು ಅದರ ಪರಿಣಾಮಗಳು ಕಾಣುತ್ತಿರುವಾಗ, ಅದರ ಬಗ್ಗೆ ಕಾಳಜಿ ಅಥವಾ ಚಿಂತೆ ವ್ಯಕ್ತಪಡಿಸಲಾಗುತ್ತಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ‘ನಾಲಿಗೆಗೆ ಎಉಬು ಇಲ್ಲ ಅಂದರೆ, ಏನು ಬೇಕಾದರೂ ಹೇಳಬಹುದು’, ಇಂತಹ ಮನೋವಿಕೃತಿಯ ಇತಿಹಾಸ ತಜ್ಞ ಸರ್ಫರಾಜ್ ಅಹ್ಮದ್! ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಳೆದ ೨೫ ವರ್ಷಗಳಿಂದ ನಿಸ್ವಾರ್ಥ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿರುವ ಸನಾತನ ಸಂಸ್ಥೆಯ ಮೇಲೆ ಹೀಗೆ ಕೆಸರೆರಚುವುದು, ಇದರಿಂದ ಅಹ್ಮದ್ ಅವರ ವೈಚಾರಿಕ ಮಟ್ಟ ಎಷ್ಟಿರಬಹುದು, ಎಂದು ಯೋಚಿಸದೇ ಇರುವುದು ಒಳ್ಳೆಯದು!
  • ಇಂತಹ ಹಿಂದೂ ದ್ವೇಷಿ ಇತಿಹಾಸ ತಜ್ಞರನ್ನು ಭಾರತದ ರಾಷ್ಟ್ರಪ್ರೇಮಿ ಮತ್ತು ಪ್ರಜಾಪ್ರಭುತ್ವವಾದಿ ಮಾಧ್ಯಮಗಳು ಪರಿಗಣಿಸದ ಕಾರಣ, ಬಿಬಿಸಿಯಂತಹ ಕಟ್ಟರ ಹಿಂದೂ ವಿರೋಧಿ ಮಾಧ್ಯಮಗಳು ಅವರನ್ನು ಎತ್ತಿ ಹಿಡಿಯುತ್ತವೆ, ಇದರಲ್ಲಿ ಆಶ್ಚರ್ಯವೇನಿದೆ?