ಹೋಳಿಯಂದು ದೇಶದ ಅನೇಕ ಸ್ಥಳಗಳಲ್ಲಿ ಮತಾಂಧ ಮುಸಲ್ಮಾನರಿಂದ ಹಿಂಸಾಚಾರ !

ನವದೆಹಲಿ – ಹೋಳಿ ದಹನ ಮತ್ತು ಧೂಳಿವಂದನ ಈ ದಿನದಂದು ದೇಶದಲ್ಲಿ ವಿವಿಧ ರಾಜ್ಯಗಳಲ್ಲಿ ಮತಾಂಧ ಮುಸಲ್ಮಾನರಿಂದ ಹಿಂಸಾಚಾರ ನಡೆಸಲಾಗಿದೆ. ಪಂಜಾಬ್, ಉತ್ತರಪ್ರದೇಶ, ಗುಜರಾತ್, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಈ ಹಿಂಸಾಚಾರ ನಡೆದಿದೆ.

ಉತ್ತರಪ್ರದೇಶ

೧. ಉತ್ತರಪ್ರದೇಶದಲ್ಲಿನ ಶಹಜಹಪುರ ಇಲ್ಲಿ ವಿಶ್ವ ಪ್ರಸಿದ್ಧ ಲಾಟ ಸಾಹೇಬರ ಮೆರವಣಿಗೆಯಲ್ಲಿ ಪೊಲೀಸರ ಮೇಲೆ ಬೂಟು ಮತ್ತು ಚಪ್ಪಲಿಗಳು ಎಸೆದರು. ಅವರ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳು ಕೂಡ ಎಸೆದರು. ಯಾವಾಗ ಪೋಲೀಸರು ಅದನ್ನು ತಡೆಯುವ ಪ್ರಯತ್ನ ಮಾಡಿದರೋ ಆಗ ಹೆಚ್ಚಿನ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿದರು. ಆದ್ದರಿಂದ ಪೊಲೀಸರು ಸ್ವರಕ್ಷಣೆಗಾಗಿ ಲಾಠಿಚಾರ್ಜ್ ಮಾಡಬೇಕಾಯಿತು.

೨. ಉನ್ನವದಲ್ಲಿ ಹೋಳಿ ಮೆರವಣಿಗೆಯ ಸಮಯದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಯಿತು. ಅದರಲ್ಲಿ ೩ ಪೊಲೀಸರು ಗಾಯಗೊಂಡರು. ಮಥುರಾದಲ್ಲಿ ಬಣ್ಣ ಹಚ್ಚುವುದರ ಕುರಿತು ನಡೆದಿರುವ ವಿವಾದದಲ್ಲಿ ೧೦ ಜನರು ಗಾಯಗೊಂಡರು.

೩. ಉನ್ನಾವ ಜಿಲ್ಲೆಯಲ್ಲಿನ ಗಂಜಮುರಾದಾಬಾದ್ ನಗರದಲ್ಲಿ ಹೋಳಿಯ ಮೆರವಣಿಗೆಯ ಸಮಯದಲ್ಲಿ ಅಮಲಿನಲ್ಲಿ ಇರುವ ರೌಡಿಗಳು ಗದ್ದಲ ನಡೆಸಿದರು. ಪೊಲೀಸರು ಅವರನ್ನು ತಡೆಯುವ ಪ್ರಯತ್ನ ಮಾಡಿದಾಗ, ಅವರು ಅವರ ಮೇಲೆ ಕಲ್ಲು ಎಸೆದರು. ಕಲ್ಲುತೂರಾಟದಲ್ಲಿ ೩ ಪೊಲೀಸರು ಗಾಯಗೊಂಡಿದ್ದಾರೆ. ರೌಡಿಗಳನ್ನು ಹಿಡಿತಕ್ಕೆ ತರುವುದಕ್ಕಾಗಿ ಪೊಲೀಸರಿಗೆ ಲಾಠಿಚಾರ್ಜ್ ಮಾಡಬೇಕಾಯಿತು.

೪. ಮಥುರಾದಲ್ಲಿನ ಬಾಟಿ ಗ್ರಾಮದಲ್ಲಿ ಬಣ್ಣ ಹಚ್ಚುವುದರ ಕುರಿತಾಗಿ ಮತಾಂಧ ಮುಸಲ್ಮಾನರು ಕಲ್ಲು ತೂರಾಟ ನಡೆಸಿದರು. ಈ ಘಟನೆಯಲ್ಲಿ ೧0 ಜನರು ಗಾಯಗೊಂಡರು. ಪೊಲೀಸರು ೭ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

೫. ಜೇವರ ರಣಹೇರ ಗ್ರಾಮದಲ್ಲಿ ಹೋಳಿಯ ದಿನದಂದು ಗಲಬೆ ನಡೆದಿದೆ. ಇಲ್ಲಿ ಕ್ಷುಲ್ಲಕ ಕಾರಣದಿಂದ ವಿವಾದವಾದ ನಂತರ ಮತಾಂಧ ಮುಸಲ್ಮಾನರಿಂದ ಹೊಡೆದಾಟ ನಡೆದಿದೆ. ಆ ಸಮಯದಲ್ಲಿ ಕಲ್ಲು ತೂರಾಟದ ಜೊತೆಗೆ ಗುಂಡು ಹಾರಿಸಲಾಗಿದೆ. ಇದರಲ್ಲಿ ೫ ಜನರು ಗಾಯಗೊಂಡಿದ್ದಾರೆ.

೬. ಬಿಜನೌರಾದ ಧಾಮಾಪುರದಲ್ಲಿ ಬಣ್ಣ ಹಚ್ಚುವುದರ ಕುರಿತು ಮತಾಂಧ ಮುಸಲ್ಮಾನರಿಂದ ಗಲಭೆ

೭. ಮುರಾದಾಬಾದದ ವೀರ ಶಾಹ ಹಜಾರಿ ಪ್ರದೇಶದಲ್ಲಿ ಹೋಳಿಯ ದಿನದಂದು ಆಲಿಂಗನ ನಿರಾಕರಿಸಿರುವುದರಿಂದ ಓರ್ವ ಯುವಕನು ಭಾಜಪಾ ನಾಯಕನ ಮೇಲೆ ಗುಂಡು ಹಾರಿಸಿದನು. ಈ ಘಟನೆಯಲ್ಲಿ ೨ ಗಾಯಗೊಂಡರು.

೮. ಬಾಗಪತದಲ್ಲಿನ ರಾಠೋಡ ಗ್ರಾಮದಲ್ಲಿ ಹೋಳಿ ಆಡುವುದರಿಂದ ವಿವಾದ ನಡೆಯಿತು. ಅದರಲ್ಲಿ ಮತಾಂಧ ಮುಸಲ್ಮಾನರು ಮನೆಗೆ ನುಗ್ಗಿ ಯುವಕನಿಗೆ ಗುಂಡು ಹಾರಿಸಿ ಹತ್ಯೆಗೈದರು.

ಹಿಮಾಚಲ ಪ್ರದೇಶ

ಹೋಳಿಯ ದಿನದಂದು ಹಿಮಾಚಲಪ್ರದೇಶದ ಬಿಲಾಸಪುರದಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕ ಬಂಬರ ಠಾಕೂರ್ ಇವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಯಿತು. ಅವರ ಮೇಲೆ ೪ ಅಜ್ಞಾತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಬಂಬರ ಠಾಕೂರ್ ಹೋಳಿ ಆಡುತ್ತಿರುವಾಗ ಆರೋಪಿ ಅಲ್ಲಿಗೆ ಬಂದು ಅವರ ಮೇಲೆ ೧೨ ಸುತ್ತು ಗುಂಡುಗಳನ್ನು ಹಾರಿಸಿದನು.

ಜಾರ್ಖಂಡ್

ಜಾರ್ಖಂಡದಲ್ಲಿನ ಗಿರಿಹೀಡ ಜಿಲ್ಲೆಯಲ್ಲಿನ ಘೋಡಥಂಬದಲ್ಲಿ ಹೋಳಿಯ ಮೆರವಣಿಗೆಯಲ್ಲಿ ಮತಾಂಧ ಮುಸಲ್ಮಾನರಿಂದ ಹಿಂಸಾಚಾರ ನಡೆದಿದೆ. ಅವರು ಅನೇಕ ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಈ ಗಲಬೆಯಲ್ಲಿ ಅನೇಕ ಜನರು ಗಾಯಗೊಂಡರು. ಪರಿಸರದಲ್ಲಿನ ಬಿಗುವಿನ ವಾತಾವರಣ ಗಮನಿಸಿ ಹೆಚ್ಚುವರಿ ಪೊಲೀಸ ಬಂದೋಬಸ್ತ್ ಮಾಡಲಾಯಿತು.

ಲುಧಿಯಾನ (ಪಂಜಾಬ) – ಮಸೀದಿಯ ಮೇಲೆ ಮತ್ತು ನಮಾಜ್ ಮಾಡುವವರ ಮೇಲೆ ಕಲ್ಲು ತೂರಾಟ !

ಪಂಜಾಬದಲ್ಲಿ ಹೋಳಿ ಆಡುವ ಕಾಂಗ್ರೆಸ್ ನಾಯಕನ ಮೇಲೆ ಗುಂಡು ಹಾರಿಸಲಾಗಿದೆ. ರಾಜ್ಯದಲ್ಲಿನ ಲುಧಿಯಾನಾದಲ್ಲಿ ಮಸೀದಿಯ ಮೇಲೆ ಮತ್ತು ನಮಾಜ ಮಾಡುವವರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇಲ್ಲಿಯ ಒಂದು ಮಸೀದಿ ಗುರಿ ಮಾಡಲಾಗಿತ್ತು. ಈ ಕಲ್ಲುತೂರಾಟದಲ್ಲಿ ಮಸೀದಿಯವರೆಗೆ ರಕ್ಷಣೆಗಾಗಿ ನಿಂತಿರುವ ಪೊಲೀಸರು ಕೂಡ ಗಾಯಗೊಂಡಿದ್ದಾರೆ. ಕಲ್ಲು ತೂರಾಟದಿಂದ ಮಸೀದಿಯ ಗಾಜುಗಳು ಒಡೆದಿದೆ ಮತ್ತು ಅನೇಕ ಜನರು ಗಾಯಗೊಂಡಿದ್ದಾರೆ.

ಸಂಪಾದಕೀಯ ನಿಲುವು

  • ಹಿಂದೂಗಳ ಹಬ್ಬಗಳಲ್ಲಿ ಮತಾಂಧ ಮುಸಲ್ಮಾನರು ದಾಳಿ ನಡೆಸಿಲ್ಲ, ಈ ರೀತಿ ಒಂದೇ ಒಂದು ಘಟನೆ ನಡೆದಿಲ್ಲ, ಇದು ಹಿಂದುಗಳಿಗೂ ಮತ್ತು ಆರಿಸಿರುವ ಸರಕಾರಕ್ಕೆ ಲಜ್ಜಾಸ್ಪದ.!
  • ಈ ಸ್ಥಿತಿ ಬದಲಾಗುವುದಕ್ಕಾಗಿ ಹಿಂದೂ ರಾಷ್ಟ್ರವೇ ಬೇಕು, ಇದನ್ನು ಗಮನದಲ್ಲಿಟ್ಟುಕೊಂಡು ಹಿಂದುಗಳು ಕೃತಿಶೀಲರಾಗುವುದು ಅವಶ್ಯಕವಾಗಿದೆ !