ಕಾಬುಲನಲ್ಲಿ ಡ್ರೋನ್‍ನಿಂದ ನಡೆಸಿದ ದಾಳಿಯಲ್ಲಿ 10 ಅಮಾಯಕರು ಹತರಾದುದಕ್ಕೆ ಕ್ಷಮೆಯಾಚಿಸಿದ ಅಮೇರಿಕಾ

ವಾಷಿಂಗ್ಟನ (ಅಮೇರಿಕಾ) – ಅಪಘಾನಿಸ್ತಾನದ ರಾಜಧಾನಿ ಕಾಬುಲನ ವಿಮಾನ ನಿಲ್ದಾಣದ ಹೊರಗಡೆ ಕೆಲವು ವಾರಗಳ ಹಿಂದೆ ಇಸ್ಲಾಮಿಕ್ ಸ್ಟೆಟ್‍ನ ಉಗ್ರರಿಂದಾದ ಆತ್ಮಹುತಿ ಸ್ಫೋಟದಲ್ಲಿ 100 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು, ಈ ಬಗ್ಗೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಅಮೇರಿಕಾವು ಆಗಸ್ಟ್ 29 ರಂದು ಡ್ರೋನ್ ಮೂಲಕ ನಡೆಸಿದ್ದ ದಾಳಿಯಲ್ಲಿ 10 ಜನರು ಹತರಾಗಿದ್ದರು. ಹತರಾಗಿರುವ ಜನರು ಭಯೋತ್ಪಾದಕರಲ್ಲ, ಅಮಾಯಕ ನಾಗರಿಕರಿದ್ದರು, ಅದು ಈಗ ಬೆಳಕಿಗೆ ಬಂದ ನಂತರ ಅಮೇರಿಕಾವು ಇದನ್ನು ಒಪ್ಪಿ ಕ್ಷಮೆ ಯಾಚಿಸಿದೆ.

ಅಮೆರಿಕಾದ ರಕ್ಷಣಾ ಸಚಿವ ಲಾಯಡ ಆಸ್ಟಿನ ಇವರು ಮನವಿಯಲ್ಲಿ, ಡ್ರೋನ್ ದಾಳಿಯಿಂದ ಬಲಿಯಾಗಿದ್ದ ಕುಟುಂಬಗಳ ಬಗ್ಗೆ ನಾವು ಮನಃಪೂರ್ವಕವಾಗಿ ಸಂವೇದನೆ ವ್ಯಕ್ತ ಪಡಿಸುತ್ತೇವೆ. ನಾವು ಕ್ಷಮೆ ಯಾಚಿಸುತ್ತೇವೆ ಮತ್ತು ನಾವು ಈ ಘೋರ ತಪ್ಪಿನಿಂದ ಕಲಿಯಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.