‘ಅಮೆಜಾನ್’ನಿಂದ 600 ಚೀನಾ ನಿಗಮಗಳ ಮೇಲೆ ಶಾಶ್ವತ ನಿಷೇಧ !

ನವ ದೆಹಲಿ – ಆನ್‍ಲೈನ್ ಮಾರಾಟ ಮಾಡುವ ಸಂಸ್ಥೆ ‘ಅಮೆಜಾನ್’ ಚೀನಾದ 600 ನಿಗಮಗಳ ಮೇಲೆ ಶಾಶ್ವತ ನಿಷೇಧವನ್ನು ಹೇರಿದೆ. ಅವರಿಂದ ಅಮೆಜಾನ್‍ನ ಧೊರಣೆಗಳ ಉಲ್ಲಂಘನೆಯಾಗುತ್ತಿತ್ತು, ಎಂದು ಅಮೆಜಾನ್‍ನಿಂದ ಹೇಳಲಾಗಿದೆ. ಇದು ಚೀನಾವನ್ನು ‘ಗುರಿ’ಯಾಗಿಸುವ ಅಭಿಯಾನವಲ್ಲ, ಇದೊಂದು ಅಂತರಾಷ್ಟ್ರೀಯ ಅಭಿಯಾನವಾಗಿದೆ. ನಾವು ತಪ್ಪು ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳುವುದು ಜಾರಿ ಇಡುತ್ತೇವೆ. ಎಂದು ಅಮೆಜಾನ್ ಸ್ಪಷ್ಟಪಡಿಸಿದೆ. ನಾವು ಕೈಗೊಂಡ ಕ್ರಮವು ನಮ್ಮ ಗ್ರಾಹಕರ ಹಿತಕ್ಕಾಗಿ ಇರುವುದು ಎಂದು ನಮಗೆ ಖಾತ್ರಿಯಿದೆ ಎಂದಿದೆ.