ಪಾಕಿಸ್ತಾನದಲ್ಲಿ ಮಸೀದಿಯಿಂದ ನೀರು ತರಲು ಹೋದ ಹಿಂದೂ ಕುಟುಂಬದವರಿಗೆ ಮತಾಂಧರಿಂದ ಥಳಿತ !

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳ ರಕ್ಷಣೆಗಾಗಿ ಭಾರತ ಸರಕಾರವು ಯಾವಾಗ ನೇತೃತ್ವ ತೆಗೆದುಕೊಳ್ಳಲಿದೆ ? – ಸಂಪಾದಕರು 

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹಿಮಯಾರ್ ಖಾನ್ ಪಟ್ಟಣದ ಒಂದು ಮಸೀದಿಯಿಂದ ನೀರು ತರಲು ಹೋದ ಬಡ ಹಿಂದೂ ಕುಟುಂಬವನ್ನು ಮತಾಂಧರು ಥಳಿಸಿದ್ದಾರೆ. `ಹಿಂದೂಗಳು ಮಸೀದಿಯ ಪಾವಿತ್ರ್ಯವನ್ನು ಭಂಗಗೊಳಿಸಿದ್ದಾರೆ’, ಎಂದು ಮತಾಂಧರು ಹೇಳಿದ್ದಾರೆ. ಈ ಕುಟುಂಬದ ಮುಖ್ಯಸ್ಥನ ಹೆಸರು ರಾಮ್ ಭೀಲ್ ಎಂದಾಗಿದೆ. ಅವರು ಮತ್ತು ಅವರ ಕುಟುಂಬದವರು ಮಸೀದಿಯ ಹತ್ತಿರದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಇನ್ನೂ ಪೋಲಿಸರಲ್ಲಿ ದೂರು ದಾಖಲಿಸಿಲ್ಲ; ಏಕೆಂದರೆ ಥಳಿಸಿದವರು ಆಡಳಿತಾರೂಢ ತೆಹ್ರೀಕ್-ಎ-ಇನ್ಸಾಫ್ ಸಂಸದರ ಪರಿಚಯದವರಾಗಿದ್ದಾರೆ. (ಆಡಳಿತಾರೂಢ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಸರಕಾರವು ‘ನಾವು ಹಿಂದೂಗಳಿಗಾಗಿ ಏನಾದರೂ ಮಾಡುತ್ತಿದ್ದೇವೆ’, ಎಂದು ಜಗತ್ತಿಗೆ ತೋರಿಸಲು ದೇವಸ್ಥಾನಗಳನ್ನು ದುರುಸ್ತಿ ಮಾಡುವುದಾಗಿ ಘೋಷಿಸಿತು. ಆದರೆ ಈ ಪಕ್ಷವು ಹಿಂದೂ ವಿರೋಧಿಯಾಗಿದೆ, ಎಂಬುದು ಈ ಪ್ರಕರಣದಿಂದ ಕಂಡುಬರುತ್ತದೆ. ಆದ್ದರಿಂದ ‘ಪಾಕಿಸ್ತಾನ ಸರಕಾರವು ಇಲ್ಲಿಯ ಹಿಂದೂಗಳಿಗಾಗಿ ಏನಾದರೂ ಮಾಡುತ್ತಿದೆ’, ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ ! – ಸಂಪಾದಕರು) ಈ ಘಟನೆಯ ಬಗ್ಗೆ ಭೀಲ್ ಸಮಾಜದಿಂದ ಪೊಲೀಸ್ ಠಾಣೆಯ ಹೊರಗೆ ಆಂದೋಲನ ಮಾಡಲಾಯಿತು.