ಈಗ ಚಿಕ್ಕ ಬಾಂಗ್ಲಾದೇಶವು ಸಹ ಭಾರತವನ್ನು ಎದುರಿಸುವಷ್ಟು ಮುಂದುವರೆದಿದೆ. ಇದರಿಂದ ಭಾರತವು ಕಠೋರ ವಿದೇಶ ನೀತಿಯನ್ನು ಕೈಗೊಳ್ಳುವ ಆವಶ್ಯಕತೆ ಎಷ್ಟಿದೆ ಎಂದು ಸ್ಪಷ್ಟವಾಗುತ್ತದೆ ! – ಸಂಪಾದಕರು
ಢಾಕಾ (ಬಾಂಗ್ಲಾದೇಶ) – ಬಂಗಾಲದ ಕೊಲ್ಲಿಯ ಗಡಿರೇಖೆಯ ವಿಷಯವಾಗಿ ಭಾರತದ ಜೊತೆ ನಡೆಯುತ್ತಿರುವ ವಾದ ವಿವಾದದ ಹಿನ್ನೆಲೆಯಲ್ಲಿ ಬಾಂಗ್ಲಾದೇಶವು ವಿಶ್ವಸಂಸ್ಥೆಯಲ್ಲಿ 2 ಅರ್ಜಿಯನ್ನು ದಾಖಲಿಸಿದೆ. ಬಂಗಾಲ ಕೊಲ್ಲಿಯು ಭಾರತದ ಸ್ವಾಧೀನದಲ್ಲಿದೆ; ಆದರೆ ಅದನ್ನು ಬಾಂಗ್ಲಾದೇಶ ವಿರೋಧಿಸುತ್ತಿದೆ.
ಬಾಂಗ್ಲಾದೇಶದ ಮಾಜಿ ವಿದೇಶಾಂಗ ಸಚಿವ ಶಹಿದುಲ್ ಹಕ ಇವರು, ಎರಡೂ ನೆರೆ ದೇಶಗಳ ನಡುವೆ ಸಮುದ್ರಗಡಿ ವಿವಾದ ನಡೆಯುತ್ತಿದೆ, ಈವರೆಗೆ ಎರಡೂ ದೇಶಗಳಲ್ಲಿ ಅನೇಕ ಬಾರಿ ಚರ್ಚೆ ನಡೆದಿದೆ, ಆದರೆ ಈ ವಾದ ಇಲ್ಲಿಯವರೆಗೆ ಹಾಗೆ ಇದೆ. ಎರಡೂ ದೇಶಗಳು ಈಗ ವಿಶ್ವಸಂಸ್ಥೆಗೆ ಹೋಗಿವೆ. ಜಗತ್ತಿನ ಎಲ್ಲಕ್ಕಿಂತ ದೊಡ್ಡ ವೇದಿಕೆಯಿಂದ ಈ ಸಮಸ್ಯೆ ಬಗೆಹರಿಯುವುದು ಎಂಬ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. (ವಿಶ್ವ ಸಂಸ್ಥೆಯಲ್ಲಿ ಯಾವುದಾದರೂ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಅದು ಇನ್ನಷ್ಟು ಕಗ್ಗಂಟಾಗುತ್ತದೆ, ಕಾಶ್ಮೀರ ಸಮಸ್ಯೆಯಿಂದ ಭಾರತಕ್ಕೆ ಇದರ ಅನುಭವ ಬಂದಿದೆ. ಆದ್ದರಿಂದ ವಿಶ್ವ ಸಂಸ್ಥೆಯು ಸಮುದ್ರ ಗಡಿ ವಿಷಯ ಏನಾದರೂ ನಿರ್ಣಯ ಕೊಡಬಹುದೆಂಬ, ಅಪೇಕ್ಷೆ ಬೇಡ ! – ಸಂಪಾದಕರು)