ತಾಲಿಬಾನಿ ರಾಜ್ಯದಲ್ಲಿ ಇದಲ್ಲದೇ ಮತ್ತಿನ್ನೇನು ನಡೆಯುತ್ತದೆ ? ತಾಲಿಬಾನ್ ಅನ್ನು ಬೆಂಬಲಿಸುವ ಭಾರತದಲ್ಲಿರುವ ತಾಲಿಬಾನಿಪ್ರೇಮಿಗಳು ಈ ಬಗ್ಗೆ ಏನಾದರೂ ಮಾತನಾಡುವರೇ ?
ಕಾಬುಲ(ಅಫಘಾನಿಸ್ತಾನ) – ಅಫಘಾನ ವಂಶದ ೫೦ ವರ್ಷ ವಯಸ್ಸಿನ ಭಾರತೀಯ ನಾಗರಿಕ ಬಂಸರಿಲಾಲ ಅರೆಂಡೇಹ ಇವರನ್ನು ಬಂದೂಕು ತೋರಿಸಿ ಅವರ ಅಂಗಡಿಯಿಂದ ಅಪಹರಿಸಿದ್ದಾರೆ. ‘ಇಂಡಿಯನ ವರ್ಲ್ಡ್ ಫೋರಮ್’ನ ಅಧ್ಯಕ್ಷ ಪುನೀತ ಸಿಂಹ ಚಂಡೋಕ ಇವರು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ಭಾರತ ಸರಕಾರದ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದ್ದಾರೆ. ಬಂಸರಿಲಾಲ್ ಇವರ ಕುಟುಂಬ ದೆಹಲಿಯಲ್ಲಿದೆ.
अफगान मूल के सिख नागरिक का अपहरण, काबुल में फार्मा की दुकान चलाते हैं बंसरी | @Geeta_Mohan https://t.co/iCyZrQEMUn
— AajTak (@aajtak) September 15, 2021
ಬಂಸರಿಲಾಲ್ ಇವರು ಔಷಧ ಉತ್ಪಾದನೆಯ ವ್ಯಾಪಾರ ಮಾಡುತ್ತಾರೆ ಮತ್ತು ಈ ಘಟನೆಯ ಸಮಯದಲ್ಲಿ ಅವರು ಅವರ ಸಿಬ್ಬಂದಿಗಳ ಜೊತೆ ಅಂಗಡಿಯಲ್ಲಿದ್ದರು. ಬಂಸರಿಲಾಲ್ ಇವರನ್ನು ಅವರ ಸಿಬ್ಬಂದಿಗಳ ಸಹಿತ ಅಪಹರಣ ಮಾಡಲಾಗಿತ್ತು; ಆದರೆ ಅವರ ಸಿಬ್ಬಂದಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು; ಆದರೆ ಅವರನ್ನು ಮಾತ್ರ ಅಪಹರಣಕಾರರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಸ್ಥಳೀಯ ತನಿಖಾ ಇಲಾಖೆಯವರು ಈ ಬಗ್ಗೆ ದೂರನ್ನು ದಾಖಲಿಸಿದ್ದಾರೆ.