ಅಫ್ಘಾನಿಸ್ತಾನದಲ್ಲಿ ಮಹಿಳಾ ಕಲ್ಯಾಣ ಇಲಾಖೆಯನ್ನು ಮುಚ್ಚಿದ ತಾಲಿಬಾನ್ !

ಭಾರತದ ತಾಲಿಬಾನಿ ಪ್ರೇಮಿಗಳು, ಮಹಿಳಾ ನಾಯಕಿಯರು, ಪ್ರತಿಷ್ಠಿತ ಮಹಿಳೆಯರು ಹಾಗೂ ಜಗತ್ತಿನಾದ್ಯಂತದ ಮಹಿಳಾ ಸಂಘಟನೆಯವರು ಈ ವಿಷಯವಾಗಿ ಏನಾದರೂ ಹೇಳುವರೇನು ? – ಸಂಪಾದಕರು 

ಕಾಬುಲ್(ಅಫ್ಘಾನಿಸ್ತಾನ) – ಅಫ್ಘಾನಿಸ್ತಾನದಲ್ಲಿನ ‘ಮಹಿಳಾ ಕಲ್ಯಾಣ ಇಲಾಖೆ’ಯನ್ನು ತಾಲಿಬಾನ್ ಸರಕಾರ ಮುಚ್ಚಿಬಿಟ್ಟಿದೆ. ಈ ಇಲಾಖೆಯ ಜಾಗದಲ್ಲಿ ಸದ್ಗುಣಗಳ ಪ್ರಚಾರ ಮತ್ತು ದುರ್ಗುಣ ತಡೆಗಟ್ಟುವ ಇಲಾಖೆಯನ್ನು ಸ್ಥಾಪಿಸಲಾಗಿದೆ. (ತಾಲಿಬಾನ್ ಸದ್ಗುಣಗಳ ಪ್ರಚಾರ ಮಾಡುವುದು, ಎಂದರೆ ಆಶ್ಚರ್ಯವೇ ಸರಿ ! – ಸಂಪಾದಕರು) ಈ ಇಲಾಖೆ ಯಾವ ಸ್ಥಳದಲ್ಲಿತೋ, ಆ ಕಟ್ಟಡದಲ್ಲಿ ನೌಕರಿ ಮಾಡುತ್ತಿದ್ದ ಅಂತರಾಷ್ಟ್ರೀಯ ಬ್ಯಾಂಕಿನ ಸಿಬ್ಬಂದಿಗಳನ್ನು ಬಲವಂತವಾಗಿ ಹೊರಗಟ್ಟಲಾಗಿದೆ. ತಾಲಿಬಾನ್‍ನ ಹಿಂದಿನ ರಾಜ್ಯಾಡಳಿದಲ್ಲಿಯೂ ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ಶಿಕ್ಷಣದ ಅಧಿಕಾರವನ್ನು ನಿರಾಕರಿಸಲಾಗಿತ್ತು. ಹಾಗೂ ಅವರ ಸಾರ್ವಜನಿಕ ಜೀವನದ ಮೇಲೂ ನಿಷೇಧ ಹೇರಲಾಗಿತ್ತು.