ಪಾಕಿಸ್ತಾನ – ಚೀನಾ ಆರ್ಥಿಕ ಹೆದ್ದಾರಿಯ ಕಾಮಗಾರಿ 3 ವರ್ಷಗಳಿಂದ ಸ್ಥಗಿತಗೊಂಡಿರುವ ಬಗ್ಗೆ ಚೀನಾ ಸಂಸ್ಥೆಗಳ ಅಸಮಾಧಾನ !

‘ಪಾಕಿಸ್ತಾನವನ್ನು ಅವಲಂಬಿಸಿದವರ ಕೆಲಸಗಳೆಲ್ಲ ಹಾಳಾಯಿತು’, ಇದರ ಅನುಭವವನ್ನು ಅಮೇರಿಕಾ ಪಡೆದುಕೊಂಡಿದೆ ಮತ್ತು ಈಗ ಚೀನಾವೂ ಅನುಭವಿಸುತ್ತಿದೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! – ಸಂಪಾದಕರು 

ಬೀಜಿಂಗ್ (ಚೀನಾ) – ಚೀನಾದಿಂದ ಕಟ್ಟಲಾಗುತ್ತಿರುವ ಚೀನಾ-ಪಾಕ್ ಆರ್ಥಿಕ ಹೆದ್ದಾರಿಯು ಪಾಕಿಸ್ತಾನದ ನಿಧಾನಗತಿಯ ಕಾಮಗಾರಿಯಿಂದಾಗಿ ಇನ್ನೂ ಪೂರ್ಣವಾಗಿಲ್ಲ. ಆದ್ದರಿಂದ ಚೀನಾದ ಸಂಸ್ಥೆಗಳು ಅಸಮಾಧಾನಗೊಂಡಿವೆ. ಕಳೆದ 3 ವರ್ಷಗಳಿಂದ ಈ ಯೋಜನೆಯ ಕೆಲಸ ನಿಂತಿರುವುದರಿಂದ ಪಾಕಿಸ್ತಾನದ ಶಾಸಕರ ಗುಂಪು ಕೂಡಾ ಖೇದ ವ್ಯಕ್ತ ಪಡಿಸಿದೆ. ಈ ಯೋಜನೆಗಾಗಿ ಚೀನಾ ನಾಲ್ಕುವರೆ ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಮಾಡಿದೆ.

ಶಾಸಕರ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುವ ಸಲೀಂ ಮಾಂಡವಿವಾಲಾ ಇವರು ಹೀಗೆಂದರು“ಚೀನಾದ ರಾಯಭಾರಿಯು ನನ್ನ ಬಳಿ ದೂರನ್ನು ನೀಡುತ್ತಾ, ನೀವು ಹೆದ್ದಾರಿಯನ್ನು ನಾಶ ಮಾಡಿದ್ದೀರಿ ಮತ್ತು ಕಳೆದ ಮೂರು ವರ್ಷಗಳಲ್ಲಿ ಏನೂ ಕೆಲಸ ನಡೆದಿಲ್ಲ” ಎಂದು ಹೇಳಿದ್ದಾರೆ.