ಕೆನಡಾದ ಮಿಸಿಸಾಗಾದಲ್ಲಿ ಸಾಮಾಜಿಕ ಕಾರ್ಯಕ್ರಮವನ್ನು ಆಯೋಜಿಸಿದರೆಂದು ಹಿಂದೂ ಕುಟುಂಬದ ಮೇಲೆ ಹಲ್ಲೆ ನಡೆಸಿದ ಅಪರಿಚಿತ ಹುಡುಗರು

ಜ್ಯೂ ನಾಗರಿಕರಂತೆ ಜಗತ್ತಿನಾದ್ಯಂತ ಹಿಂದೂಗಳ ವರ್ಚಸ್ಸನ್ನು ಮೂಡಿಸಲು ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯೊಂದೇ ಪರ್ಯಾಯ !- ಸಂಪಾದಕರು 

( ಪ್ರಾತಿನಿಧಿಕ ಚಿತ್ರ )

ಮಿಸಿಸಾಗಾ (ಕೆನಡಾ) – ಕೆನಡಾದ ಮಿಸಿಸಾಗಾ ನಗರದಲ್ಲಿನ ಸ್ಟ್ರೀಟ್ಸ್‍ವಿಲೆ ಉದ್ಯಾನವನದಲ್ಲಿ 45 ವಯಸ್ಸಿನ ಓರ್ವ ಹಿಂದೂ ವ್ಯಕ್ತಿಯು ಒಂದು ಸಣ್ಣ ಸಾಮಾಜಿಕ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆದ್ದರಿಂದ ಇಬ್ಬರು ಅಪ್ರಾಪ್ತ ಹುಡುಗರು ಈ ಹಿಂದೂವಿನ, ಹಾಗೂ ಅವರ ಪತ್ನಿ ಮತ್ತು 2 ಮಕ್ಕಳ ಮೇಲೆ ಹಲ್ಲೆ ನಡೆಸಿದರು. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಚತುಶ್ಚಕ್ರ ವಾಹನದಿಂದ ಪಲಾಯನಗೈಯಲು ಯತ್ನಿಸಿದಾಗ ಈ ಹುಡುಗರು ವಾಹನದ ಮೇಲೆ ಕಲ್ಲುತೂರಾಟ ನಡೆಸಿದರು. ಇದರಲ್ಲಿ ಗಾಯಗೊಂಡ ಹಿಂದೂ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.