ಸಂಯುಕ್ತ ರಾಷ್ಟ್ರಗಳ ಮಾನವಾಧಿಕಾರ ಪರಿಷತ್ತಿನಲ್ಲಿ ಪಾಕಿಸ್ತಾನ ಹಾಗೂ ಇಸ್ಲಾಮಿ ದೇಶಗಳ ಸಂಘಟನೆಗಳಿಗೆ ಭಾರತದಿಂದ ಛೀಮಾರಿ !

ಪಾಕಿಸ್ತಾನಕ್ಕೆ ಈ ರೀತಿ ಶಾಬ್ದಿಕ ಛೀಮಾರಿಯಿಂದ ಯಾವುದೇ ರೀತಿಯ ಪರಿಣಾಮವಾಗುವುದಿಲ್ಲ. ಅದಕ್ಕೆ ಅರ್ಥವಾಗುವಂತಹ ಭಾಷೆಯಲ್ಲಿ ಭಾರತವು ಪ್ರತ್ಯುತ್ತರವನ್ನು ನೀಡುವುದು ಅಗತ್ಯ ! – ಸಂಪಾದಕರು

ನ್ಯೂಯಾರ್ಕ್ (ಅಮೇರಿಕಾ) – ಸಂಯುಕ್ತ ರಾಷ್ಟ್ರವು ಉಗ್ರಗಾಮಿಗಳೆಂದು ಘೋಷಿಸಿರುವವರಿಗೆ ಪಾಕಿಸ್ತಾನವು ಬೆಂಬಲ, ತರಬೇತಿ ಹಾಗೂ ಆರ್ಥಿಕ ಸಹಾಯ ಮತ್ತು ಆಯುಧಗಳ ಪೂರೈಕೆ ಮಾಡುತ್ತಾ ಬಂದಿದೆ. ಇದು ಪಾಕಿಸ್ತಾನದ ಧೋರಣೆಯಾಗಿದೆ. ಅದಕ್ಕಾಗಿ ಅದು ಕುಖ್ಯಾತಿಗೊಳಗಾಗಿದೆ. ಅನೇಕ ಸಂಸ್ಥೆಗಳು ಪಾಕಿಸ್ತಾನವು ಉಗ್ರಗಾಮಿಗಳಿಗೆ ನೀಡುವ ಸಹಾಯದಿಂದ ಚಿಂತೆಗೊಳಗಾಗಿವೆ. ಪಾಕಿಸ್ತಾನವು ಸಂಯುಕ್ತ ರಾಷ್ಟಗಳ ಮಾನವಾಧಿಕಾರ ಪರಿಷತ್ತಿನ ವೇದಿಕೆಯನ್ನು ತನ್ನ ಹುಸಿ ಸಿದ್ಧಾಂತಗಳನ್ನು ಪ್ರಚಾರ ಮಾಡಲು ಉಪಯೋಗಿಸಿಕೊಳ್ಳುತ್ತಿದೆ. ಈಗ ಅದು ಅದಕ್ಕೆ ಅಭ್ಯಾಸವಾಗಿಬಿಟ್ಟಿದೆ, ಎಂಬ ಶಬ್ದಗಳಲ್ಲಿ ಭಾರತವು ಪಾಕಿಸ್ತಾನಕ್ಕೆ ಪರಿಷತ್ತಿನ 48ನೇಯ ಅಧಿವೇಶನದಲ್ಲಿ ಛೀಮಾರಿ ಹಾಕಿದೆ. ಆಗ ಭಾರತವು ಇಸ್ಲಾಮಿ ದೇಶಗಳ ಸಂಘಟನೆಯಾದ ‘ಆರ್ಗನೈಜೇಶನ ಆಫ ಇಸ್ಲಾಮಿಕ ಕೊಆಪರೆಶನ’ (ಒ.ಐ.ಸಿ.) ಅನ್ನು ಕೂಡ ದೂಷಿಸಿದೆ. ‘ಒ.ಆಯ.ಸಿ. ಸಂಘಟನೆಗೆ ಜಮ್ಮೂ-ಕಾಶ್ಮೀರದ ವಿಷಯದಲ್ಲಿ ಮಾತನಾಡುವ ಅಧಿಕಾರವೇ ಇಲ್ಲ; ಏಕೆಂದರೆ ಜಮ್ಮೂ-ಕಾಶ್ಮೀರವು ಭಾರತದ ಅವಿಭಾಜ್ಯ ಭಾಗವಾಗಿದೆ’, ಎಂದು ಭಾರತವು ಸ್ಪಷ್ಟವಾಗಿ ಹೇಳಿತು.