ಬಾಂಗ್ಲಾದೇಶದ ಖುಲನಾ ಜಿಲ್ಲೆಯಲ್ಲಿ ನೂರಾರು ಮತಾಂಧರಿಂದ ಹಿಂದೂಗಳ ೧೦ ದೇವಾಲಯಗಳ ಮೇಲೆ ದಾಳಿ, ದೇವತೆಗಳ ವಿಗ್ರಹಗಳು ಧ್ವಂಸ !

ಖುಲನಾ ಜಿಲ್ಲೆಯಲ್ಲಿರುವ ಶಿಯಾಲಿ ಗ್ರಾಮದಲ್ಲಿ ಆಗಸ್ಟ್ ೭ ರ ಮಧ್ಯಾಹ್ನ ನೂರಾರು ಮತಾಂಧರು ಜಮಾಯಿಸಿದರು. ಅವರು ಹಳ್ಳಿಯ ಹಿಂದೂಗಳ ೧೦ ದೇವಾಲಯಗಳ ಮೇಲೆ ದಾಳಿ ಮಾಡಿ ನಾಶಪಡಿಸಿದರು. ಅದರಲ್ಲಿ ೪ ದೊಡ್ಡ ಮತ್ತು ೬ ಸಣ್ಣ ದೇವಸ್ಥಾನಗಳು ಒಳಗೊಂಡಿವೆ.

ಪಾಕಿಸ್ತಾನದ ಶ್ರೀ ಗಣಪತಿ ದೇವಸ್ಥಾನವನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೫೦ ಜನರ ಬಂಧನ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭೋಂಗ ನಗರದ ಶ್ರೀ ಗಣಪತಿ ದೇವಸ್ಥಾನವನ್ನು ಮತಾಂಧರು ಧ್ವಂಸಗೊಳಿಸಿದ್ದರು. ಪ್ರಕರಣದಲ್ಲಿ ಮುಖ್ಯ ಸೂತ್ರಧಾರ ಸೇರಿದಂತೆ ೫೦ ಜನರನ್ನು ಬಂಧಿಸಲಾಗಿದೆ. ಒಟ್ಟು ೧೫೦ ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಟೋಕಿಯೊ ಒಲಿಂಪಿಕ್ಸ್‌ : ಜಾವೆಲಿನ್ ಥ್ರೋದಲ್ಲಿ ನೀರಜ್ ಚೋಪ್ರಾಗೆ ಚಿನ್ನದ ಪದಕ

ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಕ್ರೀಡಾಪಟು ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಭಾರತೀಯ ಕ್ರೀಡಾಪಟು, ೨೩ ವರ್ಷದ ನೀರಜ್ ಚೋಪ್ರಾ ಈ ಸಾಧನೆಯ ಸರದಾರ.

ತಾಲಿಬಾನವು ಗುರುದ್ವಾರದಲ್ಲಿನ ತೆಗೆದು ಹಾಕಿದ್ದ ಧ್ವಜವನ್ನು ಮತ್ತೆ ಹಾಕಿದರು !

ಅಫ್ಘನಿಸ್ತಾನದ ಪಕತಿಯಾ ಪ್ರದೇಶದ ಥಾಲ್ ಸಾಹಿಬ್ ಗುರುದ್ವಾರದಲ್ಲಿ ಹಾಕಲಾಗಿದ್ದ ಪವಿತ್ರ ಧ್ವಜವನ್ನು ತಾಲಿಬಾನಿಗಳು ತೆಗೆದಿದ್ದರು; ಆದರೆ ಅಂತರರಾಷ್ಟ್ರೀಯ ಒತ್ತಡದಿಂದಾಗಿ ತಾಲಿಬಾನವು ಅದನ್ನು ಮತ್ತೆ ಹಾಕಿದೆ. ಭಾರತವೂ ಕೂಡಾ ಧ್ವಜವನ್ನು ತೆಗೆದಿರುವ ಬಗ್ಗೆ ತೀರ್ವವಾಗಿ ಖಂಡಿಸಿತ್ತು.

ಹವಾಮಾನ ಬದಲಾವಣೆಯಿಂದಾಗಿ ಬ್ರಿಟನ್ ಹಿಮದ ಅಡಿಯಲ್ಲಿ ಹೂತುಹೋಗುವ ಭಯ ! – ಪ್ರಮುಖ ವಿಜ್ಞಾನಿಗಳ ಹೇಳಿಕೆ

ವಿಶ್ವದ ಪ್ರಮುಖ ವಿಜ್ಞಾನಿ ಡಾ. ನಿಕಲಸ ಬಾಯರ್ಸ್ ಇವರು, ಸದ್ಯ ಹವಾಮಾನವು ವೇಗವಾಗಿ ಬದಲಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಬ್ರಿಟನ್ ಹಿಮದ ಅಡಿಯಲ್ಲಿ ಹೂತುಹೋಗಬಹುದು ಎಂಬ ಭಯವನ್ನು ವ್ಯಕ್ತಪಡಿಸಿದ್ದಾರೆ.

ಗಣಪತಿ ದೇವಸ್ಥಾನದ ಮೇಲೆ ಆಕ್ರಮಣ ಮಾಡಿದವರನ್ನು ತಕ್ಷಣ ಬಂಧಿಸಿ ಹಾಗೂ ಮಂದಿರದ ದುರಸ್ತಿ ಮಾಡಿ ! – ಪಾಕ್ ನ ಸರ್ವೋಚ್ಚ ನ್ಯಾಯಾಲಯದ ಆದೇಶ

ಗಣಪತಿ ದೇವಸ್ಥಾನದ ಮೇಲೆ ಆಕ್ರಮಣ ಮಾಡುವಂತೆ ಯಾರು ಜನರನ್ನು ಉದ್ರೇಕಿಸುವ ಕಾರ್ಯ ಮಾಡಿದ್ದಾರೆಯೋ; ಹಾಗೆಯೇ ಯಾರು ಮಂದಿರದ ಮೇಲೆ ಆಕ್ರಮಣ ಮಾಡಿದ್ದಾರೆಯೋ ಅವರನ್ನೆಲ್ಲ ತಕ್ಷಣ ಬಂಧಿಸಬೇಕು.

ಪೋಲಂಡಿನ ವಾರ್ಸಾ ವಿಶ್ವವಿದ್ಯಾಲಯದ ಗ್ರಂಥಾಲಯದ ಗೋಡೆಯ ಮೇಲೆ ಉಪನಿಷತ್ತಿನ ಶ್ಲೋಕಗಳನ್ನು ಬರೆಯಲಾಗಿದೆ !

ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಛಾಯಾಚಿತ್ರ ಹರಿದಾಡುತ್ತಿದೆ. ಅದರಲ್ಲಿ ಪೋಲಂಡಿನ ವಾರ್ಸಾ ವಿಶ್ವವಿದ್ಯಾಲಯದ ಗ್ರಂಥಾಲಯದ ಹೊರಗೋಡೆಯಲ್ಲಿ ಉಪನಿಷತ್ತಿನ ಶ್ಲೋಕಗಳನ್ನು ಬರೆದಿರುವುದು ಕಂಡು ಬರುತ್ತಿದೆ.

ಪಾಕ್ ನಲ್ಲಿ ಮತಾಂಧರಿಂದ ಗಣಪತಿ ದೇವಸ್ಥಾನದ ವಿಧ್ವಂಸ !

ಭಾರತದಲ್ಲಿನ ಜಾತ್ಯಾತೀತವಾದಿಗಳಿಗೆ ಇಸ್ಲಾಮಿ ದೇಶದಲ್ಲಿರುವ ಹಿಂದೂಗಳ ಸ್ಥಿತಿಯು ಏಕೆ ಕಾಣಿಸುತ್ತಿಲ್ಲ? ಈ ವಿಷಯದಲ್ಲಿ ಅವರು ಏಕೆ ಯಾವತ್ತೂ ಏನೂ ಮಾತನಾಡುವುದಿಲ್ಲ ?

ಭಯೋತ್ಪಾದಕರಿಗೆ ಒದಗಿಸಲಾಗುವ ಹಣಕಾಸು ಹಾಗೂ ತಾಂತ್ರಿಕ ಸಹಾಯವನ್ನು ತಡೆಗಟ್ಟಲು ಪ್ರಯತ್ನಿಸುವೆವು !

ಆಗಸ್ಟ್ 19 ರಂದು ಜಯಶಂಕರರು ವಿಶ್ವಸಂಸ್ಥೆಯ ಮುಖ್ಯ ಕಾರ್ಯದರ್ಶಿಯಾದ ಆಂತೊನಿಯೋ ಗುಟ್ರೆಸರವರ ಐಸಿಸ್ ಮೇಲಿನ (ಇಸ್ಲಾಮಿಕ್ ಸ್ಟೇಟ್ ಅಂದರೆ ಇಸ್ಲಾಮಿಕ್ ರಾಜ್ಯದ) ವರದಿಯ ವಿಷಯದ ಚರ್ಚೆಯಲ್ಲಿಯೂ ಭಾಗವಹಿಸಲಿದ್ದಾರೆ.

ಪಾಕಿಸ್ತಾನದ ಪ್ರಧಾನಮಂತ್ರಿಯ ಸರಕಾರಿ ನಿವಾಸಸ್ಥಾನವನ್ನು ಬಾಡಿಗೆಗಾಗಿ ಕೊಡಲಾಗುವುದು.

ದಿವಾಳಿತನದ ಹಾದಿ ಹಿಡಿದಿರುವ ಪಾಕಿಸ್ತಾನದಲ್ಲಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರ ಅಧಿಕೃತ ನಿವಾಸಸ್ಥಾನವನ್ನು ಬಾಡಿಗೆಗೆ ಕೊಡಲಾಗುವುದು. ಈ ಮೊದಲು 2019 ರಲ್ಲಿ ಪ್ರಧಾನಮಂತ್ರಿಯ ಮನೆಯನ್ನು ವಿದ್ಯಾಪೀಠವನ್ನಾಗಿಸುವುದಾಗಿ ಘೋಷಣೆಯನ್ನು ಮಾಡಲಾಗಿತ್ತು.