ಕಾಬೂಲ್ (ಅಫ್ಘಾನಿಸ್ತಾನ)ದಲ್ಲಿನ ಗುರುದ್ವಾರದಲ್ಲಿ ತಾಲಿಬಾನಿಗಳಿಂದ ವಿಧ್ವಂಸಕ ಕೃತ್ಯ

ಕೆಲವರನ್ನು ವಶಪಡಿಸಿಕೊಂಡು ತಮ್ಮೊಂದಿಗೆ ಕರೆದೊಯ್ದರು !

* ನಂಬಿಕೆದ್ರೋಹಿ ತಾಲಿಬಾನಿಯರು ! ‘ಅಫ್ಘಾನಿಸ್ತಾನದಲ್ಲಿ ಸಿಕ್ಖ್ ಹಾಗೂ ಅವರ ಗುರುದ್ವಾರಗಳಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ ಹಾಗೂ ಹಾನಿ ಮಾಡಲು ಬಿಡುವುದಿಲ್ಲ. ಸಿಕ್ಖ್‍ರು ಅಫಗಾನಿಸ್ತಾನವನ್ನು ತೊರೆಯುವುದು ಬೇಡ’, ಎಂದು ಹೇಳಿದ ತಾಲಿಬಾನಿಯರ ಈ ಕೃತಿ ವಿಶ್ವಾಸಾರ್ಹವಾಗಿಲ್ಲ, ಎಂದು ತೋರಿಸುತ್ತದೆ. ಭಾರತದಲ್ಲಿನ ತಾಲಿಬಾನಪ್ರೇಮಿಗಳು ಈ ವಿಷಯದ ಬಗ್ಗೆ ಏಕೆ ಏನೂ ಮಾತನಾಡುವುದಿಲ್ಲ? ಈಗ ಅವರೇಕೆ ಮೌನವಾಗಿದ್ದಾರೆ?

* ಪಾಕ್‍ನ ಕುಮ್ಮಕ್ಕಿನಂತೆ ನಡೆದುಕೊಳ್ಳುವ ಖಲಿಸ್ತಾನಿಗಳು ಈ ವಿಷಯದಲ್ಲಿ ಮಾತ್ರ ಮೌನವೇಕೆ ?

ಕಾಬೂಲ್(ಅಫ್ಘಾನಿಸ್ತಾನ) – ಸಶಸ್ತ್ರ ತಾಲಿಬಾನಿ ಉಗ್ರರು ಇಲ್ಲಿನ ಒಂದು ಗುರುದ್ವಾರದೊಳಗೆ ಪ್ರವೇಶಿಸಿ ಅಲ್ಲಿ ವಿಧ್ವಂಸಕ ಕೃತ್ಯವೆಸಗಿದ್ದಾರೆ ಹಾಗೂ ಕೆಲವರನ್ನು ವಶ ಪಡಿಸಿಕೊಂಡು ತಮ್ಮೊಂದಿಗೆ ಕರೆದೊಯ್ದರು. ಆ ಉಗ್ರರು ಗುರುದ್ವಾರದಲ್ಲಿರುವ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳಿಗೆ ಹಾನಿ ಮಾಡಿದರು. ಈ ಗುರುದ್ವಾರದಲ್ಲಿ ಸಿಕ್ಖ್ ಮತದ ಸಂಸ್ಥಾಪಕರಾದ ಗುರುನಾನಕರವರು ಭೇಟಿ ನೀಡಿದ್ದರು. ಈ ವಿಷಯದ ಬಗ್ಗೆ ‘ಇಂಡಿಯನ್ ವಲ್ರ್ಡ್ ಫೋರಮ್’ನ ಅಧ್ಯಕ್ಷರಾದ ಪುನೀತ ಸಿಂಹ ಚಂಡೋಕರವರು ಮಾಹಿತಿ ನೀಡಿದರು. ಚಂಡೋಕರವರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ತಾಲಿಬಾನಿಗಳು ನಮ್ಮ ಪವಿತ್ರ ಸ್ಥಾನದ ಅವಮಾನ ಮಾಡಿದ್ದಾರೆ. ಪ್ರಧಾನಮಂತ್ರಿ ಮೋದಿ ಹಾಗೂ ಭಾರತದ ಭಾರತದ ವಿದೇಶಾಂಗ ವ್ಯವಹಾರದ ಸಚಿವಾಲಯವು ಇದರತ್ತ ಗಮನ ಹರಸಲಿ ಎಂದು ಆಗ್ರಹಿಸಿದ್ದಾರೆ.