* ವಾಸನಾಂಧ ಪಾದ್ರಿಗಳು ! ಭಾರತದಲ್ಲಿ ಚಲನಚಿತ್ರ ಹಾಗೂ ಇತರ ವಿಷಯಗಳ ಮೂಲಕ ಪಾದ್ರಿಗಳು ಸಭ್ಯ, ಸುಸಂಸ್ಕೃತ ಹಾಗೂ ಪ್ರೀತಿಮಯ ಎಂಬಂತಹ ಚಿತ್ರಣ ಮೂಡಿಸಿರುವುದರಿಂದ ಪಾದ್ರಿಗಳು ಈ ರೀತಿ ಏನಾದರೂ ಮಾಡುತ್ತಾರೆ, ಎಂದು ಭಾರತೀಯ ಪ್ರಸಾರಮಾಧ್ಯಮಗಳಿಗೆ ಅರಗಿಸಿಕೊಳ್ಳದ ಕಾರಣ ಅವರು ಅಂತಹ ವಿಷಯಗಳನ್ನು ಮುಚ್ಚಿಡಲು ಪ್ರಯತ್ನಿಸುತ್ತಿವೆ. ಆದ್ದರಿಂದ ಅಂತಹ ವಾರ್ತೆಗಳು ಭಾರತದಲ್ಲಿ ಓದಲು ಸಿಗುವುದಿಲ್ಲ, ಎಂಬುದನ್ನು ಗಮನದಲ್ಲಿಡಿರಿ ! – ಸಂಪಾದಕರು * ವಿದೇಶದಲ್ಲಿ ಪಾದ್ರಿಗಳ ವಾಸನಾಂಧತೆ ಹಾಗೂ ಸಲಿಂಗಕಾಮದ ನೂರಾರು ಪ್ರಕರಣಗಳು ಎದುರಿಗೆ ಬಂದಿರುವುದರಿಂದ ‘ಪಾದ್ರಿ ಅಂದರೆ ವಾಸನಾಂಧ ವ್ಯಕ್ತಿ’ ಎಂಬ ಚಿತ್ರಣವು ಮನಸ್ಸಿನಲ್ಲಿ ಮೂಡುತ್ತದೆ, ಎಂದು ಹೇಳಿದರೆ ತಪ್ಪಾಗಲಾರದು ! – ಸಂಪಾದಕರು |
ಪ್ಯಾರಿಸ್ (ಫ್ರಾನ್ಸ್) – ಫ್ರಾನ್ಸ್‍ನ ಕ್ಯಾಥೋಲಿಕ್ ಚರ್ಚ್‍ನಲ್ಲಿ 1950 ನೇ ಇಸವಿಯಿಂದ ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುವುದು ಹಾಗೂ ಅವರ ಶೋಷಣೆ ಮಾಡುವ ಸಾವಿರಾರು ಜನರಿದ್ದರು. ಅವರಲ್ಲಿ ಪಾದ್ರಿಗಳು ಸಹ ಇದ್ದರು. ಅದಕ್ಕೆ ಸಂಬಂಧಪಟ್ಟಂತೆ ರಚಿಸಲಾದ ಸ್ವತಂತ್ರ್ಯ ಆಯೋಗದ ಪ್ರಮುಖರಾದ ಜೀನ-ಮಾರ್ಕ್ ಸ್ಯಾವೆಯವರು ಒಂದು ವರದಿಯಲ್ಲಿ ಇದನ್ನು ಘೋಷಿಸುವ ಮೊದಲು ಪ್ರಸಾರಮಾಧ್ಯಮಗಳಿಗೆ ಈ ವಿಷಯದ ಬಗ್ಗೆ ಮಾಹಿತಿ ನೀಡಿದರು. ಆ ವರದಿಯು 2 ಸಾವಿರ 500 ಪುಟಗಳದ್ದಾಗಿದೆ. ಅದರಲ್ಲಿ ಅಪರಾಧಿಗಳು ಹಾಗೂ ಪೀಡಿತರ ಸಂಖ್ಯೆಯ ವಿಷಯದಲ್ಲಿ ಮಾಹಿತಿಯಿದೆ. ಅದರಲ್ಲಿ ಚರ್ಚನಲ್ಲಿ ಆರೋಪಿಗಳು ಹೇಗೆ ಸಕ್ರಿಯವಾಗಿದ್ದರು, ಅದಕ್ಕಾಗಿ ಯಾರು ಚರ್ಚನ ವ್ಯವಸ್ಥೆಯನ್ನು ಹೇಗೆ ಬಳಸಿಕೊಂಡರು, ಎಂಬ ಬಗ್ಗೆ ಸವಿಸ್ತಾರವಾದ ಮಾಹಿತಿಯಿದೆ. ಆ ವರದಿಯಲ್ಲಿ 45 ಪ್ರಸ್ತಾವನೆಗಳನ್ನು ನೀಡಲಾಗುವುದು.
Church sex abuse: Thousands of paedophiles in French Church, report says https://t.co/O2jAPUV5hm
— BBC News (World) (@BBCWorld) October 3, 2021
1. ಸ್ಯಾವೆಯವರು ಈ ಬಗ್ಗೆ ಹೇಳುತ್ತಾ, ಆಯೋಗವು ನಡೆಸಿದ ತನಿಖೆಯಲ್ಲಿ 2 ಸಾವಿರದ 900 ಜನರು ಹಾಗೂ ಚರ್ಚ್‍ನ ಇತರ ಸದಸ್ಯರು ಕೂಡ ಸಕ್ರಿಯವಾಗಿದ್ದರು. ವಾಸ್ತವದಲ್ಲಿ ಆ ಸಂಖ್ಯೆಯು ಹೆಚ್ಚಾಗಿರಬಹುದು. ಅಂದರೆ ಶೋಷಣೆ ಮಾಡುವವರ ಸಂಖ್ಯೆಯು ಹೆಚ್ಚಾಗಿದೆ.
2. ಕ್ಯಾಥೋಲಿಕ್ ಚರ್ಚ್‍ನಲ್ಲಿ ಲೈಂಗಿಕ ಶೋಷಣೆಯ ಘಟನೆಗಳು ಹೆಚ್ಚಾಗಿವೆ. ಅದನ್ನು ತಡೆಯಲು ಪೋಪ ಫ್ರಾನ್ಸಿಸ್‍ರವರು ಐತಿಹಾಸಿಕ ಉಪಾಯಯೋಜನೆಯನ್ನು ಘೋಷಿಸಿದ್ದಾರೆ. ಅದಕ್ಕನುಸಾರವಾಗಿ ಲೈಂಗಿಕ ಶೋಷಣೆಯ ಘಟನೆಯ ಬಗ್ಗೆ ಮಾಹಿತಿಯಿರುವ ಚರ್ಚ್‍ನ ಸಿಬ್ಬಂದಿಗಳು ತಮ್ಮ ವರಿಷ್ಠರಿಗೆ ಮಾಹಿತಿ ನೀಡುವುದು ಕಡ್ಡಾಯ ಮಾಡಲಾಗಿದೆ. ಈ ರೀತಿಯಲ್ಲಿ ಇನ್ನಷ್ಟು ಮಾಹಿತಿಗಳು ತಿಳಿದು ಬಂದಿದೆ.
3. ಫ್ರೆಂಚ್ ಕಾಥೋಲಿಕ್ ಚರ್ಚನ ಮೂಲಕ 2018 ನೇ ಇಸವಿಯಲ್ಲಿ ಸ್ವತಂತ್ರ್ಯ ಆಯೋಗವನ್ನು ರಚಿಸಲಾಯಿತು. ಆಯೋಗದಲ್ಲಿ 22 ಕಾನೂನು ತಜ್ಞರು, ಡಾಕ್ಟರ್, ಇತಿಹಾಸತಜ್ಞರು, ಸಮಾಜಶಾಸ್ತ್ರಜ್ಞರು, ಧರ್ಮಜ್ಞಾನಿಯವರ ಸಮಾವೇಶವಿದೆ. 1950 ನೇ ಇಸವಿಯಿಂದ ಪಾದ್ರಿಗಳು ಮಾಡಿರುವ ಲೈಂಗಿಕ ಶೋಷಣೆಯ ತನಿಖೆ ಮಾಡುವುದು ಆ ಆಯೋಗದ ಕೆಲಸವಾಗಿತ್ತು. ಆಯೋಗವು ಈ ಸಂದರ್ಭದಲ್ಲಿ ಅನೇಕ ಸಾಕ್ಷಿಗಳನ್ನು ಪಡೆದುಕೊಂಡಿದೆ. ದೂರವಾಣಿಯ ಮೂಲಕ ಕೂಡ ಅನೇಕರು ಅವರ ಮೇಲಾದ ಪ್ರಸಂಗದ ಮಾಹಿತಿ ನೀಡಿದರು.