ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಶಾಂತಿಯ ಬಗ್ಗೆ ಮಾತನಾಡುತ್ತದೆ; ಆದರೆ ಅದರ ಪ್ರಧಾನಿ ಒಸಾಮಾ ಬಿನ್ ಲಾಡೆನ್‌ಅನ್ನು ಗೌರವಿಸುತ್ತಾರೆ ! – ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಚಾಟಿ ಬೀಸಿದ ಭಾರತ

ಇಂತಹ ಶಾಬ್ದಿಕ ಚಾಟಿ ಬೀಸಿದರೆ ಪಾಕಿಸ್ತಾನದ ಮೇಲೆ ಯಾವುದೇ ಪರಿಣಾಮವಾಗದ ಕಾರಣ, ಭಾರತವು ಅದಕ್ಕೆ ಶಸ್ತ್ರದ ಭಾಷೆಯಲ್ಲಿ ಪಾಠ ಕಲಿಸಿ ಭಾರತದಲ್ಲಿ ಭಯೋತ್ಪಾದನೆಯ ಸಮಸ್ಯೆಯನ್ನು ಶಾಶ್ವತವಾಗಿ ಕೊನೆಗೊಳಿಸಬೇಕು !

ನ್ಯೂಯಾರ್ಕ್ (ಅಮೇರಿಕಾ) – ಪಾಕಿಸ್ತಾನವು ವಿಶ್ವ ಸಂಸ್ಥೆಯಲ್ಲಿ ಶಾಂತಿ ಮತ್ತು ಭದ್ರತೆಯ ಬಗ್ಗೆ ಮಾತನಾಡುತ್ತದೆ; ಆದರೆ ಅವರ ಪ್ರಧಾನಿ ಇಮ್ರಾನ್ ಖಾನ್, ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ನನ್ನು ‘ಹುತಾತ್ಮ’ ಎಂದು ಹೇಳಿ ಗೌರವಿಸುತ್ತಾರೆ, ಎಂದು ಹೇಳುತ್ತಾ ಭಾರತವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಮೇಲೆ ಮತ್ತೊಮ್ಮೆ ಚಾಟಿ ಬೀಸಿದೆ. ಕೆಲವು ದಿನಗಳ ಹಿಂದೆಯೇ ಭಾರತವು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ಗೆ ಇದೇ ರೀತಿ ಕಪಾಳಮೋಕ್ಷ ಮಾಡಿತ್ತು.

ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ಎ. ಅಮರನಾಥ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾಗಿ ಪಾಕಿಸ್ತಾನವು ತನ್ನ ನೆರೆರಾಷ್ಟ್ರಗಳ ವಿರುದ್ಧ ಭಯೋತ್ಪಾದನೆಯನ್ನು ಪದೇ ಪದೇ ಬಳಸುತ್ತಿದೆ. ಅದು ವಿಶ್ವಸಂಸ್ಥೆಯ ಸಿದ್ಧಾಂತಗಳನ್ನು ಕಡೆಗಾಣಿಸುತ್ತದೆ. ಈ ಬಹುಪಕ್ಷೀಯ ವೇದಿಕೆಗಳಲ್ಲಿ ಸುಳ್ಳುಗಳನ್ನು ಹರಡಲು ಪ್ರಯತ್ನಿಸಿದ್ದಕ್ಕಾಗಿ ಪಾಕಿಸ್ತಾನವು ಅವಮಾನಕ್ಕೆ ಅರ್ಹವಾಗಿದೆ ಎಂದು ಹೇಳಿದರು.