ಪಾಕಿಸ್ತಾನದ ಮದರಸಾನಲ್ಲಿ ಬಲಾತ್ಕಾರ ಮಾಡಿದ ಮೌಲ್ವಿಗೆ (ಇಸ್ಲಾಮಿನ ಧಾರ್ಮಿಕ ನಾಯಕನಿಗೆ) ಜೀವಾವಧಿ ಶಿಕ್ಷೆ

ಲಾಹೋರ್ (ಪಾಕಿಸ್ತಾನ) – ಪಾಕಿಸ್ತಾನದ ಒಂದು ನ್ಯಾಯಾಲಯವು 12 ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ ಪ್ರಕರಣದಲ್ಲಿ ಅತಿಕ ಉರ್ ರಹಮಾನ್ ಎಂಬ ಮೌಲ್ವಿಗೆ (ಇಸ್ಲಾಂನ ಧಾರ್ಮಿಕ ನಾಯಕ) ಜೀವಾವಧಿ ಶಿಕ್ಷೆ ನೀಡಲಾಗಿದೆ, ಹಾಗೂ ಆತನಿಗೆ 2 ಲಕ್ಷ ರೂಪಾಯಿಗಳ ದಂಡವನ್ನು ಸಹ ವಿಧಿಸಿದೆ. ಬಲಾತ್ಕಾರ ನಡದಿರುವ ಘಟನೆ 2 ವರ್ಷದ ಮೊದಲು ಲಾಹೋರ್‍ದಿಂದ 200 ಕಿಮೀ ದೂರದಲ್ಲಿ ಇರುವ ಟೋಬಾ ಟೇಕ ಸಿಂಹ ಜಿಲ್ಲೆಯಲ್ಲಿ ನಡೆದಿತ್ತು. ಸಂತ್ರಸ್ತೆಯು ಆಕೆಯ ಗ್ರಾಮದಲ್ಲಿರುವ ಮದರಸಾದಲ್ಲಿ ಕಲಿಯಲು ಹೋಗುತ್ತಿದ್ದಳು. ಅಲ್ಲಿ ರಹಮಾನ್ ಈತನ ಮಹಿಳಾ ಸಹಕಾರಿ ಬೀಲಕಿಸ ಬೀಬಿ ಇವಳು ಸಂತ್ರಸ್ತೆಗೆ ಆಮಿಷವೊಡ್ಡಿ ಒಂದು ಕೋಣೆಗೆ ಕರೆದುಕೊಂಡು ಹೋದಳು, ಅಲ್ಲಿ ರಹೇಮಾನ ಇವನು ಬಲಾತ್ಕಾರ ಮಾಡಿದನು.