ದಕ್ಷಿಣ ಚೀನಾ ಸಾಗರದಲ್ಲಿ ಚೀನಾದ ನೌಕೆಗಳ ನುಸುಳುವಿಕೆಯ ವಿಷಯದಲ್ಲಿ ಚೀನಾದ ರಾಯಭಾರಿಯನ್ನು ಭೇಟಿಗಾಗಿ ಕರೆದ ಮಲೇಶಿಯಾ !

ಭಾರತಕ್ಕಿಂತಲೂ ಚಿಕ್ಕ ದೇಶಗಳು ಚೀನಾಗೆ ನೇರವಾಗಿ ಸವಾಲೊಡ್ಡುತ್ತಿರುವಾಗ ಭಾರತಕ್ಕೆ ಅದೇಕೆ ಸಾಧ್ಯವಾಗುತ್ತಿಲ್ಲ ? -ಸಂಪಾದಕರು

ಕ್ವಾಲಾಲಂಪುರ (ಮಲೇಶಿಯಾ) – ದಕ್ಷಿಣ ಚೀನಾ ಸಮುದ್ರದಲ್ಲಿ ಮಲೇಶಿಯಾದ ವಿಶೇಷ ಆರ್ಥಿಕ ಕ್ಷೇತ್ರದಲ್ಲಿ ಚೀನಾದ ನೌಕೆಗಳ ನುಸುಳುವಿಕೆ ಹೆಚ್ಚಾಗಿದೆ. ಇದನ್ನು ಆಕ್ಷೇಪಿಸಿ ಮಲೇಶಿಯಾ ತನ್ನ ದೇಶದಲ್ಲಿನ ಚೀನಾದ ರಾಯಭಾರಿಯನ್ನು ಭೇಟಿಗಾಗಿ ಕರೆದಿದೆ.

1. ಚೀನಾದ ಈ ಕೃತ್ಯವು ಸಂಯುಕ್ತ ರಾಷ್ಟ್ರಗಳ 1982 ರ ಸಮುದ್ರ ಕಾನೂನಿನ ಉಲ್ಲಂಘನೆಯಾಗಿದೆ. ನಾವು ನಮ್ಮ ಸಾಗರದ ಗಡಿಯ ರಕ್ಷಣೆಗಾಗಿ, ಹಾಗೆಯೇ ಸಾರ್ವಭೌಮತೆಯನ್ನು ರಕ್ಷಿಸಲು ಹೆಜ್ಜೆ ಇಡಲಿದ್ದೇವೆ ಎಂದು ಮಲೇಶಿಯಾದ ವಿದೇಶಾಂಗ ಸಚಿವಾಲಯವು ಸ್ಪಷ್ಟಪಡಿಸಿದೆ.

2. ದಕ್ಷಿಣ ಚೀನಾ ಸಮುದ್ರವು ಸಾಗರ ಮೂಲಕ ವ್ಯಾಪಾರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಈ ಭಾಗದಲ್ಲಿ ನೈಸರ್ಗಿಕ ಸಾಧನಸಂಪತ್ತು ಹೆಚ್ಚಿನ ಪ್ರಮಾಣದಲ್ಲಿರುವ ಬಗ್ಗೆ ಹೇಳಲಾಗುತ್ತದೆ. ಚೀನಾವು ದಕ್ಷಿಣ ಚೀನಾ ಸಮುದ್ರದ ಹೆಚ್ಚಿನಾಂಶ ಎಲ್ಲ ಭಾಗಗಳಲ್ಲಿ ಸತತವಾಗಿ ಹಕ್ಕು ಚಲಾಯಿಸುತ್ತಿದೆ. ಚೀನಾದ ಈ ವಿಸ್ತಾರವಾದಿ ಭೂಮಿಕೆಯನ್ನು ಮಲೇಶಿಯಾ, ಫಿಲಿಪೈನ್ಸ್, ಬ್ರುನೇ, ವಿಯೆಟ್ನಾಂ ಇತ್ಯಾದಿ ದೇಶಗಳು ಸತತವಾಗಿ ವಿರೋಧಿಸುತ್ತಿವೆ.