ಚೀನಾ ತೈವಾನ್ ಮೇಲೆ ನಿಯಂತ್ರಣ ಸಾಧಿಸಿದರೆ ಗಂಭೀರ ಪರಿಣಾಮವಾಗಲಿದೆ ! – ತೈವಾನಿನ ಎಚ್ಚರಿಕೆ

ಚಿಕ್ಕದಾದ ತೈವಾನವು ಚೀನಾಗೆ ಎಚ್ಚರಿಕೆ ನೀಡುತ್ತದೆ; ಆದರೆ ಪರಮಾಣು ಸುಸಜ್ಜಿತ ಭಾರತ ‘ಚ’ಕಾರವನ್ನೂ ಎತ್ತುವುದಿಲ್ಲ, ಇದು ನಾಚಿಕೆಗೇಡಿನ ಸಂಗತಿ !- ಸಂಪಾದಕರು 

ತೈವಾನ್ ರಾಷ್ಟ್ರಪತಿ ಸಾಯಿ ಇಂಗವೆನ

ತೈಪಯಿ(ತೈವಾನ್) – ಚೀನಾ ತೈವಾನಿನ ಮೇಲೆ ನಿಯಂತ್ರಣ ಸಾಧಿಸಿದರೆ ಗಂಭೀರ ಪರಿಣಾಮ ಆಗಲಿದೆ ಏಷ್ಯಾ ಖಂಡದಲ್ಲಿ ಇದರ ಗಂಭೀರ ಮತ್ತು ವಿನಾಶಕಾರಿ ಪ್ರತಿಕ್ರಿಯೆ ಕಂಡುಬರುವುದು. ತೈವಾನ್‍ಗೆ ಯುದ್ಧ ಬೇಕಿಲ್ಲ; ಆದರೆ ಸ್ವರಕ್ಷಣೆಗಾಗಿ ಎಲ್ಲಾ ಮಾರ್ಗವು ಉಪಯೋಗಿಸಲು ತೈವಾನ್ ಸಿದ್ಧವಾಗಿದೆ, ಇಂತಹ ಭಾಷೆಯಲ್ಲಿ ತೈವಾನ್ ಚೀನಾಕ್ಕೆ ಎಚ್ಚರಿಕೆ ನೀಡಿದೆ. ತೈವಾನ್ ರಾಷ್ಟ್ರಪತಿ ಸಾಯಿ ಇಂಗವೆನ ಇವರು ಒಂದು ವಿದೇಶ ನೀತಿಯ ವಿಷಯವಾಗಿ ದಿನಪತ್ರಿಕೆಯಲ್ಲಿ ಒಂದು ಲೇಖನ ಬರೆದಿದ್ದಾರೆ. ಅದರಲ್ಲಿ ಅವರು ಈ ಎಚ್ಚರಿಕೆಯನ್ನು ನೀಡಿದ್ದಾರೆ.

1. ಕಳೆದ ಕೆಲವು ದಿನಗಳಿಂದ ಚೀನಾದ ಯುದ್ಧ ವಿಮಾನವು ತೈವಾನನಿನ ವಾಯುಮಾರ್ಗದ ಗಡಿಭಾಗದಲ್ಲಿ ನುಸುಳಲು ಪ್ರಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ. ಅಕ್ಟೋಬರ್ 1 ರಂದು ಚೀನಾ ರಾಷ್ಟ್ರೀಯ ದಿನ ಆಚರಿಸುವಾಗ ಸೈನ್ಯದ ಶಕ್ತಿ ಪ್ರದರ್ಶನ ಮಾಡಿತು. ಚೀನಾದ ವಾಯುದಳವು ತೈವಾನ್‍ನ ವಾಯು ಗಡಿಭಾಗದಲ್ಲಿ 38 ಯುದ್ಧ ವಿಮಾನಗಳನ್ನು ನುಸುಳಿಸಿತ್ತು. ಈ ಬಗ್ಗೆ ತೈವಾನ್‍ವು ಆಕ್ರೋಶವನ್ನು ವ್ಯಕ್ತ ಪಡಿಸಿದೆ.

2. ಚೀನಾವು ತೈವಾನ್ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದೆ. ತೈವಾನ ತನ್ನನ್ನು ತಾನು ಸ್ವತಂತ್ರ ದೇಶ ಎಂದು ತನ್ನ ಪರಿಚಯವನ್ನು ಜಗತ್ತಿಗೆ ತೋರಿಸುತ್ತಿದೆ, ಆದರೆ ಚೀನಾವು ಇದು ನಮ್ಮ ಭೂಭಾಗ ಎಂದು ಹೇಳಿಕೊಳ್ಳುತ್ತಿದೆ. ಚೀನಾದ ರಾಷ್ಟ್ರಪತಿ ಶಿ ಜಿನಪಿಂಗ ಇವರು ಸಹ ‘ತೈವಾನ ಇದು ಸದ್ಯದಲ್ಲಿಯೇ ಚೀನಾದ ಭೂಭಾಗ ಆಗಲಿದೆ’, ಎಂದು ಹೇಳಿದ್ದರು.