ಭಾರತಕ್ಕೆ ಸಮಯ ನೀಡುವುದು ಪಾಕಿಸ್ತಾನದ ನ್ಯಾಯಾಲಯದ ಅಂಗವಾಗಿದೆ; ಆದರೆ ಅದು ಭಾರತಕ್ಕೆ ಭಾರತೀಯ ಅಥವಾ ವಿದೇಶಿ ನ್ಯಾಯವಾದಿಯನ್ನು ನೇಮಿಸಲು ಅನುಮತಿ ನೀಡುವುದು ಅವಶ್ಯಕವಾಗಿದೆ, ಈ ಅನುಮತಿಯನ್ನು ಪಾಕಿಸ್ತಾನವು ಏಕೆ ನೀಡುತ್ತಿಲ್ಲ ? – ಸಂಪಾದಕರು
ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಇಸ್ಲಾಮಾಬಾದ ಉಚ್ಚ ನ್ಯಾಯಾಲಯವು ಭಾರತೀಯ ಮಾಜಿ ನೌಕಾದಳದ ಅಧಿಕಾರಿಯಾದ ಕುಲಭೂಷಣ ಜಾಧವರಿಗಾಗಿ ನ್ಯಾಯವಾದಿಯನ್ನು ನೇಮಿಸಲು ಭಾರತಕ್ಕೆ ಇನ್ನಷ್ಟು ಸಮಯ ನೀಡಿದೆ. ಪಾಕಿಸ್ತಾನದ ಸೈನ್ಯ ನ್ಯಾಯಾಲಯವು ಕುಲಭೂಷಣರವರಿಗೆ ನೀಡಿದ ಮರಣದಂಡನೆ ಶಿಕ್ಷೆಯ ತೀರ್ಪಿನ ಬಗ್ಗೆ ಈ ನ್ಯಾಯಾಲಯದಲ್ಲಿ ಪುನಃ ವಿಚಾರಣೆ ನಡೆಸಲಾಗುವುದು. ಕುಲಭೂಷಣ ಜಾಧವ ಇವರನ್ನು ಪಾಕಿಸ್ತಾನದ ಸೈನ್ಯ ನ್ಯಾಯಾಲಯವು ಬೇಹುಗಾರಿಕೆ ಮತ್ತು ಭಯೋತ್ಪಾದನಾ ಚಟುವಟಿಕೆ ಈ ಆರೋಪದಡಿಯಲ್ಲಿ ಏಪ್ರಿಲ್ 2017 ರಂದು ಅಪರಾಧಿ ಎಂದು ಘೋಷಿಸಿತ್ತು. ಈ ಅಪರಾಧಕ್ಕಾಗಿ ಅವರಿಗೆ ಮರಣದಂಡನೆಯ ಶಿಕ್ಷೆ ನೀಡಲಾಗಿತ್ತು.
Pakistan court gives India more time to appoint lawyer in Kulbhushan Jadhav case https://t.co/YmnaZm24fs
— TOI World News (@TOIWorld) October 6, 2021
1. ಉಚ್ಚ ನ್ಯಾಯಾಲಯದ 3 ನ್ಯಾಯಾಧೀಶರ ವಿಭಾಗೀಯ ಪೀಠದ ಎದುರು ಕುಲಭೂಷಣ ಜಾಧವರಿಗಾಗಿ ನ್ಯಾಯವಾದಿಗಳನ್ನು ನೇಮಿಸುವ ಬಗ್ಗೆ ಆಲಿಕೆ ನಡೆಯಿತು. ಪಾಕಿಸ್ತಾನದ ಅಟಾರ್ನಿ ಜನರಲ್ ಖಾಲಿದ ಜಾವೇದ ಖಾನರವರು `5 ಮೇ 2021 ರಂದು ನ್ಯಾಯಾಲಯವು ಒಂದು ಆದೇಶದ ಮೂಲಕ ನ್ಯಾಯವಾದಿಗಳ ನೇಮಕಾತಿಗಾಗಿ ಭಾರತವನ್ನು ಸಂಪರ್ಕಿಸಲು ಪ್ರಯತ್ನಿಸುವಂತೆ ಹೇಳಿತ್ತು. ಭಾರತಕ್ಕೆ ಈ ನಿರ್ಣಯದ ಬಗ್ಗೆ ತಿಳಿಸಲಾಗಿತ್ತು; ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಭಾರತಕ್ಕೆ ಒಂದು ಪ್ರತ್ಯೇಕವಾದ ಕೊಠಡಿಯಲ್ಲಿ ಜಾಧವ ಮತ್ತು ರಾಯಭಾರಿ ಅಧಿಕಾರಿಗಳೊಂದಿಗೆ ಭೇಟಿ ಮಾಡಲಿಕ್ಕಿದೆ; ಆದರೆ ಭಾರತೀಯ ಪ್ರತಿನಿಧಿಗಳೊಂದಿಗೆ ಪ್ರತ್ಯೇಕ ಭೇಟಿ ಮಾಡಿಸುವ ಅಪಾಯವನ್ನು ಪಾಕಿಸ್ತಾನಿ ಅಧಿಕಾರಿಗಳು ತೆಗೆದುಕೊಳ್ಳಲಾರರು. ಕೇವಲ ಹಸ್ತಲಾಘವದಿಂದಲೂ ಜಾಧವರ ಜೀವಕ್ಕೆ ಅಪಾಯವಾಗಬಹುದು. ಭಾರತವು ಜಾಧವರಿಗಾಗಿ ಹೊರಗಿನಿಂದ ಓರ್ವ ನ್ಯಾಯವಾದಿಯನ್ನು ನೇಮಿಸಲು ಇಚ್ಛಿಸುತ್ತಿದೆ. ಆದರೆ ಪಾಕಿಸ್ತಾನದ ಕಾನೂನು ಇದಕ್ಕೆ ಅನುಮತಿ ನೀಡುವುದಿಲ್ಲ. ಭಾರತದ ಕಾನೂನು ಸಹ ಹೀಗೆಯೇ ಇದೆ’ ಎಂದು ಹೇಳಿದರು.
2. ಈ ಸಮಯದಲ್ಲಿ ನ್ಯಾಯಾಲಯವು `ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ನ್ಯಾಯಾಲಯದ ನಿರ್ಣಯವನ್ನು ಪಾಲಿಸಬೇಕಿದೆ. ಆದುದರಿಂದ ಕುಲಭೂಷಣ ಜಾಧವ ಮತ್ತು ಭಾರತ ಸರಕಾರಕ್ಕೆ ಇನ್ನೊಂದು ಸ್ಮರಣಪತ್ರವನ್ನು ಕಳಿಸಿಕೊಡಬೇಕು. ಭಾರತಕ್ಕೆ ಏನಾದರೂ ಆಕ್ಷೇಪವಿದ್ದಲ್ಲಿ ಅವರು ನ್ಯಾಯಾಲಯದಲ್ಲಿ ತಮ್ಮ ನಿಲುವನ್ನು ಮಂಡಿಸಬೇಕು. ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ನ್ಯಾಯಾಲಯದಲ್ಲಿ ಅಡಚಣೆಯನ್ನು ಹೇಳಬಹುದು’ ಎಂದು ಹೇಳಿದೆ.