‘ಮಹಮ್ಮದ್ ಗಜನವಿಯು ಹತ್ತನೇ ಶತಮಾನದ ಪ್ರಸಿದ್ಧ ಮುಸಲ್ಮಾನ ಯೋಧನಾಗಿದ್ದನು, ಅವನೇ ಸೋಮನಾಥನ ಮೂರ್ತಿ ಧ್ವಂಸ ಮಾಡಿದ್ದನು !’

ತಾಲಿಬಾನ್ ಸರಕಾರದ ‘ಹಕ್ಕಾನಿ ನೆಟ್ವರ್ಕ್’ನ ಮುಖ್ಯಸ್ಥ ಅನಸ ಹಕ್ಕಾನಿ ಇವನ ಟ್ವೀಟ್

ತಾಲಿಬಾನಿ ಸರಕಾರ ಭಾರತ ಮತ್ತು ಹಿಂದೂದ್ವೇಷಿ ಆಗಿದೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಇಂತಹ ಸರಕಾರದ ಜೊತೆಗೆ ಭಾರತವು ಯಾವುದೇ ಸಂಬಂಧ ಇರಿಸಿಕೊಳ್ಳದೆ ಅವರ ಮೇಲೆ ನಿಷೇಧ ಹೇರಬೇಕು ! – ಸಂಪಾದಕರು 

`ಹಕ್ಕಾನಿ ನೆಟ್ವರ್ಕ್’ ಈ ಸಂಘಟನೆಯ ಮುಖ್ಯಸ್ಥ ಅನಸ ಹಕ್ಕಾನಿ ಇವನು ಮಹಮ್ಮದ್ ಗಜನವಿಯ ಸಮಾಧಿಗೆ ತಲೆಬಾಗಿದನು

ನವದೆಹಲಿ – ಅಫ್ಘಾನಿಸ್ತಾನದ ತಾಲಿಬಾನ್ ಸರಕಾರದಲ್ಲಿ ಸಹಭಾಗಿಯಾಗಿರುವ `ಹಕ್ಕಾನಿ ನೆಟ್ವರ್ಕ್’ ಈ ಸಂಘಟನೆಯ ಮುಖ್ಯಸ್ಥ ಅನಸ ಹಕ್ಕಾನಿ ಇವನು ಮಹಮ್ಮದ್ ಗಜನವಿಯ ಸಮಾಧಿಗೆ ತಲೆಬಾಗಿದನು. ತದನಂತರ ಅವನು ಅಲ್ಲಿಯ ಛಾಯಾಚಿತ್ರ ಪ್ರಸಾರ ಮಾಡಿ ಟ್ವೀಟ್ ಮಾಡಿದ್ದಾನೆ. ಅದರಲ್ಲಿ ಅವನು, ಇಂದು ನಾನು ಹತ್ತನೇ ಶತಮಾನದ ಪ್ರಸಿದ್ಧ ಮುಸಲ್ಮಾನ ಯೋಧ ಮತ್ತು ಮುಜಾಹಿದ್ (ಧರ್ಮಯೊಧ) ಸುಲ್ತಾನ ಮಹಮ್ಮದ್ ಗಜನವಿ ಇವನ ಕಬರ್ ಗೆ ಭೇಟಿ ನೀಡಿದೆ. ಗಜನವಿಯು ಒಂದು ಶಕ್ತಿಶಾಲಿ ಮುಸಲ್ಮಾನ ಆಡಳಿತ ಸ್ಥಾಪಿಸಿದನು ಮತ್ತು ಸೋಮನಾಥನ ಮೂರ್ತಿಯನ್ನು ನಾಶಮಾಡಿದನು.

ಈ ಹೇಳಿಕೆಯ ಬಗ್ಗೆ ಸಾಮಾಜಿಕ ಮಾಧ್ಯಮದಿಂದ ಬಹಳಷ್ಟು ಟೀಕೆಕಗಳು ಆಗುತ್ತಿವೆ. ಅನಸ ಹಕ್ಕಾನಿಯು ಕೆಲವು ದಿನಗಳ ಹಿಂದೆ ‘ಭಾರತವು ಅಫ್ಗಾನಿಸ್ತಾನದ ನಿಜವಾದ ಮಿತ್ರ ಅಲ್ಲ’ ಎಂದು ಹೇಳಿಕೆ ನೀಡಿದ್ದನು.