2050 ನೇ ಇಸವಿಯ ವರೆಗೆ 500 ಕೋಟಿ ಜನರು ಭೀಕರ ನೀರಿನ ಕೊರತೆಗೆ ತುತ್ತಾಗಲಿದ್ದಾರೆ ! – ವಿಶ್ವ ಸಂಸ್ಥೆಯ ಎಚ್ಚರಿಕೆ

ಪೃಥ್ವಿಯಲ್ಲಿ ಕೇವಲ ಶೇ. 0.5 ರಷ್ಟು ನೀರು ಬಳಕೆಗೆ ಯೋಗ್ಯವಾಗಿದೆ

ನೀರಿಗಾಗಿ ಮೂರನೇ ಮಹಾಯುದ್ಧವಾಗಲಿದೆ’, ಎಂದು ಈ ಹಿಂದೆಯೇ ಹೇಳಲಾಗಿದೆ. ಈ ಎಚ್ಚರಿಕೆಯೂ ಅದನ್ನೇ ಹೇಳುತ್ತಿದೆ. ವಿಜ್ಞಾನವು ಕಳೆದ 100 ರಿಂದ 150 ವರ್ಷಗಳಲ್ಲಿ ಪೃಥ್ವಿಯನ್ನು ಅತ್ಯಂತ ದಯನೀಯ ಸ್ಥಿತಿಗೆ ತಂದಿದೆ, ಈ ಬಗ್ಗೆ ವಿಜ್ಞಾನವಾದಿಗಳಿಗೆ ನಾಚಿಕೆಯಾಗಬೇಕು ! -ಸಂಪಾದಕರು 

ನ್ಯೂಯಾರ್ಕ್ (ಅಮೇರಿಕಾ)2050 ರ ವರೆಗೆ ಜಾಗತಿಕ ಮಟ್ಟದಲ್ಲಿ 500 ಕೋಟಿಗಿಂತಲೂ ಹೆಚ್ಚಿನ ಜನರು ಭೀಕರವಾದ ನೀರಿನ ಕೊರತೆಯನ್ನು ಎದುರಿಸಬೇಕಾಗುವುದು, ಎಂಬ ಎಚ್ಚರಿಕೆಯನ್ನು ವಿಶ್ವ ಸಂಸ್ಥೆಯು ನೀಡಿದೆ. ‘ಹವಾಮಾನದಲ್ಲಿನ ಬದಲಾವಣೆಯಿಂದಾಗಿ ನೆರೆ ಮತ್ತು ಬರಗಾಲದಂತಹ ನೀರಿಗೆ ಸಂಬಂಧಿಸಿದ ತೊಂದರೆಗಳಿಂದ ಜಾಗತಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ, ಹಾಗೆಯೇ ನೀರಿನ ಕೊರತೆಯಿಂದ ತೊಂದರೆಗೀಡಾಗುವ ಜನರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯೂ ಇದೆ.

‘ಸ್ಟೇಟ್ ಆಫ್ ಕ್ಲೈಮೇಟ್ ಸರ್ವಿಸಸ್ 2020: ವಾಟರ್’ ಹೆಸರಿನ ವರದಿಯಲ್ಲಿನ ಅಂಕಿಅಂಶಗಳಿಗನುಸಾರ 2018 ರಲ್ಲಿ 360 ಕೋಟಿ ಜನರಿಗೆ ಪ್ರತಿವರ್ಷ ಕಡಿಮೆಯೆಂದರೂ ಒಂದು ತಿಂಗಳಾದರೂ ಅಪೂರ್ಣ ಪ್ರಮಾಣದಲ್ಲಿ ನೀರು ಸಿಗುತ್ತದೆ. 2050 ರ ವರೆಗೆ ಈ ಪ್ರಮಾಣವು 500 ಕೋಟಿಗಿಂತಲೂ ಹೆಚ್ಚಾಗುವ ಸಾಧ್ಯತೆ ಇದೆ. ಈ ವರದಿಯಲ್ಲಿ ನೀರಿನ ವ್ಯವಸ್ಥಾಪನೆಯನ್ನು ಸುಧಾರಿಸಲು ತಕ್ಷಣ ಕಾರ್ಯಾಚರಣೆ ಮಾಡುವುದು ಅವಶ್ಯಕವಾಗಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಶಾಶ್ವತ ವಿಕಾಸ ಮತ್ತು ಹವಾಮಾನ ಬದಲಾವಣೆಗಳೊಂದಿಗೆ ಹೊಂದಿಕೊಂಡು ಹೋಗುವುದು ಆವಶ್ಯಕವಾಗಿದೆ ಎಂದು ಹೇಳಲಾಗಿದೆ. ಪೃಥ್ವಿಯಲ್ಲಿ ಕೇವಲ ಶೇ. 0.5 ರಷ್ಟು ನೀರು ಬಳಕೆಗೆ ಯೋಗ್ಯವಾಗಿರುವುದರಿಂದ ಬಿಕ್ಕಟ್ಟಿನ ಪರಿಸ್ಥಿತಿ ಉದ್ಭವಿಸುತ್ತಿದೆ.