ಇದರಲ್ಲಿ ಹೊಸದೇನೂ ಇಲ್ಲ! ಪಾಕಿಸ್ತಾನ ಈ ಹಿಂದೆ ಕತ್ತೆಗಳನ್ನು ಮಾರಾಟ ಮಾಡುವ ಮೂಲಕ ಹಣ ಸಂಪಾದಿಸಲು ಪ್ರಯತ್ನಿಸಿತ್ತು- ಸಂಪಾದಕರು
ಇಸ್ಲಾಮಾಬಾದ್ (ಪಾಕಿಸ್ತಾನ) – ಕುಸಿದಿರುವ ಆರ್ಥಿಕ ಸ್ಥಿತಿಯನ್ನು ಪುನರುಜ್ಜೀವನಗೊಳಿಸಲು ಈಗ ಪಾಕಿಸ್ತಾನ ಸರಕಾರವು ಗಾಂಜಾ ಮಾರಾಟ ಮಾಡಲಿದೆ. ಇದಕ್ಕಾಗಿ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಮಂತ್ರಿ ಫವಾದ ಚೌಧರಿ ಇವರು ದೇಶದ ಮೊದಲ ಗಾಂಜಾ ಹೊಲದ ಉದ್ಘಾಟನೆ ಮಾಡಿದರು. ಗಾಂಜಾ ಇದು ಒಂದು ಅಮಲು ಪದಾರ್ಥವಾಗಿದೆ. ಆದರೂ ಪ್ರಪಂಚದಲ್ಲಿನ ಅನೇಕ ದೇಶಗಳಲ್ಲಿ ಇದನ್ನು ಔಷಧಕ್ಕಾಗಿಯೂ ಉಪಯೋಗಿಸುತ್ತಾರೆ. ಫವಾದ ಚೌಧರಿ ಇವರು ಈ ಯೋಜನೆಯ ಆರಂಭವು ಒಂದು ದೊಡ್ಡ ವಿಷಯವಾಗಿದೆ, ಎಂಬ ಪ್ರತಿಕಿಯೆಯನ್ನು ಟ್ವೀಟ್ ಮಾಡಿ ವ್ಯಕ್ತ ಪಡಿಸಿದ್ದಾರೆ.
..तो क्या भांग बेचकर देश चलाएंगे इमरान खान?#Pakistanhttps://t.co/P7lWHo0YcHhttps://t.co/RzS5iduPAr
— NBT Hindi News (@NavbharatTimes) October 1, 2021