ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಸಿಗದಿದ್ದರೆ, ವಿಶ್ವಸಂಸ್ಥೆಯ ವಿಶ್ವಾಸಾರ್ಹತೆ ಕೊನೆಗೊಳ್ಳುತ್ತದೆ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ನವ ದೆಹಲಿ – ಭಾರತ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ಐದನೇ ಅತಿದೊಡ್ಡ ಅರ್ಥವ್ಯವಸ್ಥೆ ಹೊಂದಿರುವ ದೇಶವಾಗಿದೆ. ಇಂತಹ ಸಮಯದಲ್ಲಿ ಒಂದು ವೇಳೆ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ನೀಡದಿದ್ದರೆ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆ ಕೊನೆಗೊಳ್ಳುತ್ತದೆ. ಇದರಿಂದಾಗಿ ನಾವು ವಿಶ್ವಸಂಸ್ಥೆಯ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸುತ್ತೇವೆ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರು ಹೇಳಿದ್ದಾರೆ. ಅವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.

ಡಾ. ಜೈಶಂಕರ್ ಮಂಡಿಸಿದ ಅಂಶಗಳು:

1. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು 1940 ರಲ್ಲಿ ಸ್ಥಾಪಿಸಲಾಯಿತು. ಆಗ ಅದು ಕೇವಲ 50 ಸದಸ್ಯರನ್ನು ಹೊಂದಿತ್ತು. ಈಗ ಈ ಸಂಖ್ಯೆ 200 ಕ್ಕೆ ಏರಿದೆ. ಹಾಗಾಗಿ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಇದನ್ನು ನಿರ್ಲಕ್ಷಿಸಿದರೆ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆ ಕ್ರಮೇಣ ಕ್ಷೀಣಿಸುತ್ತದೆ. ಆದ್ದರಿಂದ, ವಿಶ್ವಸಂಸ್ಥೆಯ ಸದಸ್ಯರು ಈಗ ಬದಲಾಗುವ ಸಮಯ ಎಂದು ಒಪ್ಪಿಕೊಳ್ಳಬೇಕು.

2. ಪ್ರಸ್ತುತ ಈ ಮಂಡಳಿಯ ಖಾಯಂ ಸದಸ್ಯರಾಗಿರುವ ದೇಶಗಳು ಸದಸ್ಯತ್ವವನ್ನು ಬಿಡಲು ಸಿದ್ಧರಿಲ್ಲ. ಇಂತಹ ಸಂದರ್ಭದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿಸುವ ಅಗತ್ಯವಿದೆ. ಆಫ್ರಿಕಾ ಖಂಡದ ಒಂದೇ ಒಂದು ದೇಶ ವಿಶ್ವಸಂಸ್ಥೆಯಲ್ಲಿ ಇಲ್ಲ. ದಕ್ಷಿಣ ಅಮೆರಿಕಾದಿಂದ ಯಾವುದೇ ದೇಶವಿಲ್ಲ. ಜನಸಂಖ್ಯೆಯ ದೃಷ್ಟಿಯಿಂದ ಜಗತ್ತಿನ ಅತಿದೊಡ್ಡ ರಾಷ್ಟ್ರವಾದ ಭಾರತ ಕೂಡ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇಲ್ಲ ಎಂದು ಹೇಳಿದರು.