ಭಾರತವು ಜಪಾನ್‌ನೊಂದಿಗೆ ‘ಚಂದ್ರಯಾನ-4’ ಅಭಿಯಾನವನ್ನು ಪ್ರಾರಂಭಿಸಲಿದೆ !

ನವದೆಹಲಿ – ‘ಚಂದ್ರಯಾನ-3’ ಅಭಿಯಾನ ಯಶಸ್ಸಿನ ನಂತರ, ಈಗ ಭಾರತವು ‘ಚಂದ್ರಯಾನ-4’ ಅಭಿಯಾನದ ಸಿದ್ಧತೆ ನಡೆಸುತ್ತಿದೆ. ಈ ಅಭಿಯಾನದಲ್ಲಿ ಭಾರತಕ್ಕೆ ಜಪಾನ್‌ನಿಂದಲೂ ಸಹಾಯ ಸಿಗಲಿದೆ. ‘ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ’ (JAXA) ಜಪಾನಿನ ಈ ಬಾಹ್ಯಕಾಶ ಸಂಶೋಧನೆಯು ಇಸ್ರೋ ದೊಂದಿಗೆ ಕೆಲಸ ಮಾಡಲಿದೆ. 2026 ರಲ್ಲಿ ‘ಚಂದ್ರಯಾನ-4’ ಉಡಾವಣೆಯಾಗುವ ಸಾಧ್ಯತೆ ಇದೆ. ಈ ಅಭಿಯಾನ 6 ತಿಂಗಳ ಕಾಲ ನಡೆಯಲಿದೆ.