ನವ ದೆಹಲಿ – ಒಂದು ದಶಕದ ಹಿಂದೆ, ವಿಶ್ವದ ರಕ್ಷಣಾ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳ ಅಗ್ರ 3 ಆಮದು ದೇಶಗಳಲ್ಲಿ ಭಾರತವು ಒಂದಾಗಿತ್ತು. ಕಳೆದ 6 ವರ್ಷಗಳಲ್ಲಿ ರಕ್ಷಣಾ ಉತ್ಪಾದನೆ ಕ್ಷೇತ್ರದಲ್ಲಿ ಭಾರತದ ಚಿತ್ರಣವೇ ಬದಲಾಗಿದೆ. 2022-23 ರಲ್ಲಿ ಭಾರತವು 16 ಸಾವಿರ ಕೋಟಿ ಮೌಲ್ಯದ ಸ್ವದೇಶಿ ಶಸ್ತ್ರಾಸ್ತ್ರಗಳು ಮತ್ತು ಬಿಡಿಭಾಗಗಳನ್ನು 80 ದೇಶಗಳಿಗೆ ರಫ್ತು ಮಾಡಿದೆ. ಕೇಂದ್ರ ಸರಕಾರವು 2025 ರವರೆಗೆ 14 ಸಾವಿರ ಕೋಟಿ ರೂಪಾಯಿಗಳ ರಕ್ಷಣಾ ಉತ್ಪಾದನೆಯ ಗುರಿಯನ್ನು ಹೊಂದಿದೆ. 5 ವರ್ಷಗಳಲ್ಲಿ 35 ಸಾವಿರ ಕೋಟಿ ರೂಪಾಯಿಗಳ ರಫ್ತು ಮಾಡುವ ಸಿದ್ಧತೆ ಮಾಡಲಾಗಿದೆ.
भारत का रक्षा निर्यात 6 साल में 10 गुना, 2022-23 में 16 हजार करोड़ के हथियार बेचे#India | #DefenseExports | #LoudAndClear | @Surbhi_R_Sharma pic.twitter.com/g2y6zoAVkN
— TV9 Bharatvarsh (@TV9Bharatvarsh) September 4, 2023
1. ರಕ್ಷಣೆಯಲ್ಲಿನ ಸ್ವದೇಶೀಕಾರಣವು 2013 ರಲ್ಲಿ ಪ್ರಾರಂಭವಾಯಿತು. ಸ್ಥಳೀಯ ಕಂಪನಿಯ ಜಂಟಿ ಯೋಜನೆಯು ಇತರ ದೇಶಗಳೊಂದಿಗಿನ ರಕ್ಷಣಾ ಒಪ್ಪಂದದ ಮೊದಲ ಷರತ್ತು ಆಗಿದೆ . ’53 ಸಿ -215 ಎಂ. ಡಬ್ಲ್ಯೂ.’ ಸಾರಿಗೆ ವಿಮಾನಕ್ಕಾಗಿ ಏರ್‌ಬಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. 3 ವರ್ಷಗಳಲ್ಲಿ 13 ವಿಮಾನಗಳು ಸ್ಪೇನ್‌ನಿಂದ ಭಾರತಕ್ಕೆ ಬರಲಿವೆ. ಉಳಿದ 40 ಅನ್ನು ವಾಡೋದರಾದಲ್ಲಿನ ಎರೋಸ್ಪೇಸ್ ಸಂಕೀರ್ಣದಲ್ಲಿ ನಿರ್ಮಿಸಲಾಗುವುದು.
2. ಕಳೆದ ವಾರ ಭಾರತಕ್ಕೆ 7 ದಿನಗಳ ಕಾಲ ಭೇಟಿಗೆ ಬಂದ ಬ್ರೆಜಿಲನ ಆರ್ಮಿ ಕಮಾಂಡರ್ ಜನರಲ್ ಟಾಮಸ್ ಮಿಗುಏಲ್ ಮಾಇನ ರಿಬೆರೊ ಪಾಇವಾ ಇವರು, ‘ಮೇಡ್ ಇನ್ ಇಂಡಿಯಾ’ ಶಸ್ತ್ರಾಸ್ತ್ರಗಳ ಬಗ್ಗೆ ಆಸಕ್ತಿ ತೋರಿಸಿದ್ದಾರೆ.
2. ಕೇನಿಯಾದ ರಕ್ಷಣಾ ಸಚಿವ ಅಡೆನ್ ಬ್ರೆರ್ ಡ್ಯುಆಲೆ ಸಹ ಯುದ್ಧ ನೌಕೆಗಳು ಮತ್ತು ಯುದ್ಧದ ಹೆಲಿಕಾಪ್ಟರ್‌ಗಳನ್ನು ಭಾರತದಿಂದ ಖರೀದಿಸಲು ಬಯಸುತ್ತಾರೆ.