ಸಿಂಗಾಪುರ – ಭಾರತೀಯ ಸಂಜಾತೆ ಥರ್ಮನ ಷಣ್ಮುಗರತ್ನಂ ಇವರು ಸಿಂಗಾಪುರದ ರಾಷ್ಟ್ರಾಧ್ಯಕ್ಷರಾದರು ! ರಾಷ್ಟ್ರಾಧ್ಯಕ್ಷರ ಸ್ಥಾನಕ್ಕಾಗಿ ನಡೆದಿರುವ ಚುನಾವಣೆಯಲ್ಲಿ ಅವರು ಚೀನಾ ಮೂಲದ ೨ ಅಭ್ಯರ್ಥಿಗಳನ್ನು ಸೋಲಿಸಿದರು. ಥರ್ಮನ ಇವರಿಗೆ ಶೇಕಡ ೭೦.೪, ಎನ್‌ಜಿ ಕೋಕ ಸಂಗ ಇವರಿಗೆ ಶೇಕಡ ೧೫.೭೨ ಹಾಗೂ ಟ್ಯಾನ್ ಕಿನ್ ಲಿಯಾನ್ ಇವರಿಗೆ ಶೇಕಡ ೧೩.೮೮ ರಷ್ಟು ಮತಗಳು ದೊರೆತಿವೆ. ಸಿಂಗಪುರದ ಪ್ರಧಾನ ಮಂತ್ರಿ ಲೀ ಸಿಎನ್ ಲುಂಗ್ ಇವರು ಥರ್ಮನ್ ಇವರನ್ನು ಅಭಿನಂದಿಸಿದರು. ಗೆಲುವಿನ ನಂತರ ಯೋಗ್ಯ ನಿರ್ಣಯ ತೆಗೆದುಕೊಂಡಿರುವುದಕ್ಕಾಗಿ ಥರ್ಮನ್ ಇವರು ಸಿಂಗಪುರದ ಮತದಾರರ ಕುರಿತು ಆಭಾರ ವ್ಯಕ್ತಪಡಿಸಿದರು. ಇನ್ನೊಂದು ಕಡೆಗೆ ಸೋಲುಂಡ ಅಸಮಾಧಾನಗೊಂಡಿರುವ ಟ್ಯನ್ ಕಿನ್ ಲಿಯಾನ್ ಇವರು, ಸಿಂಗಪುರ ಚುನಾವಣೆ ಬದಲು ಹಳೆಯ ಪದ್ಧತಿ ಜಾರಿಗೊಳಿಸಿ, ಅದರಲ್ಲಿ ರಾಷ್ಟ್ರಪತಿಯ ಆಯ್ಕೆ ಸಂಸತ್ತ ನಡೆಸುತ್ತದೆ ಎಂದು ಹೇಳಿದರು. (ಚೀನಾದ ಜನರಿಗೆ ಭಾರತ ಮತ್ತು ಭಾರತೀಯ ಮೂಲದ ನಾಗರಿಕರ ಯಶಸ್ಸು ಎಂದು ಸ್ವೀಕರಿಸಲು ಸಾಧ್ಯವಿಲ್ಲ, ಇದೇ ಇದರಿಂದ ತಿಳಿದು ಬರುತ್ತದೆ ! – ಸಂಪಾದಕರು)
ಥರ್ಮನ್ ಇವರು ಅಧ್ಯಕ್ಷ ಸ್ಥಾನಕ್ಕಾಗಿ ಜನರಿಂದ ಆಯ್ಕೆ ಆಗಿರುವ ಮೊದಲ ಭಾರತೀಯರಾಗಿದ್ದಾರೆ ಹಾಗೂ ಸಿಂಗಾಪುರದ ಭಾರತೀಯ ಸಂಜಾತೆ ಮೂರನೇ ರಾಷ್ಟ್ರಪತಿ ಆಗಿದ್ದಾರೆ. ೧೯೮೧ ರಲ್ಲಿ ಸಂಸತ್ತಿನಿಂದ ಆಯ್ಕೆ ಆಗಿರುವ ದೇವೇನ ನಾಯರ ರಾಷ್ಟ್ರಪತಿಯಾಗಿದ್ದರು. ಎಸ್.ಆರ್. ನಾಥನ್ ಇವರು ೧೯೯೯ ರಿಂದ ೨೦೧೧ ವರೆಗೆ ೧೧ ವರ್ಷ ರಾಷ್ಟ್ರಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಅವಿರೋಧವಾಗಿ ಆಯ್ಕೆ ಆಗಿದ್ದರು. ೧೯೯೧ ರಿಂದ ಸಾಮಾನ್ಯ ಜನರ ಮತದಾನದ ಮೂಲಕ ರಾಷ್ಟ್ರಪತಿಗಳ ಆಯ್ಕೆ ನಡೆಯುತ್ತಿದೆ.
ಯಾರು ಥರ್ಮನ್ ಷಣ್ಮುಗರತ್ನಂ ?
ಥರ್ಮನ್ ಇವರು ಫೆಬ್ರುವರಿ ೨೫, ೧೯೫೭ ರಲ್ಲಿ ಸಿಂಗಾಪುರದಲ್ಲಿ ಜನಿಸಿದರು. ಅವರ ಅಜ್ಜ ತಮಿಳುನಾಡಿನಿಂದ ಸಿಂಗಪುರಕ್ಕೆ ಸ್ಥಳಾಂತರವಾದರು. ಥರ್ಮನ್ ಇವರ ತಂದೆ ಪ್ರಾ. ಕೆ. ಷಣ್ಮುಗರತ್ನಂ ವೈದ್ಯಕೀಯ ವಿಜ್ಞಾನಿಯಾಗಿದ್ದರು. ಅವರಿಗೆ ಸಿಂಗಪುರದಲ್ಲಿ ಪೆಥಾಲಾಜಿಯ ಜನಕರೆಂದು ತಿಳಿಯಲಾಗಿದೆ.
ಥರ್ಮನ್ ಇವರ ಪತ್ನಿ ಜೆನ ಇಟೋಗಿ ಇವರು ಚೀನಾ ಜಪಾನಿ ಮೂಲದವರಾಗಿದ್ದಾರೆ. ಈ ದಂಪತಿಗಳಿಗೆ ಒಂದು ಹೆಣ್ಣು ಮಗು ಮತ್ತು ಮೂರು ಗಂಡು ಮಕ್ಕಳು ಇದ್ದಾರೆ. ಮಗಳ ಹೆಸರು ಮಾಯ ಮತ್ತು ಗಂಡ ಮಕ್ಕಳು ಹೆಸರು ಕೃಷ್ಣ, ಅರ್ಜುನ ಮತ್ತು ಆಕಾಶ ಎಂದಾಗಿವೆ.
#Singapore | Indian-origin Economist Tharman Shanmugaratnam wins Presidential election pic.twitter.com/bP2WTWpNnL
— DD News (@DDNewslive) September 2, 2023