ಆಮಂತ್ರಣ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲು ‘ಪ್ರೆಸಿಡೆಂಟ್ ಆಫ್ ಭಾರತ’ ಬರಹ !

‘ಜಿ-20’ ಶೃಂಗ ಸಭೆಯಲ್ಲಿ ಸಹಭಾಗಿಯಾಗುವ ರಾಷ್ಟ್ರ ಪ್ರಮುಖರಿಗೆ ರಾಷ್ಟ್ರಪತಿಗಳಿಂದ ಔತಣಕೂಟ

ನವ ದೆಹಲಿ – ಇಲ್ಲಿ ಸೆಪ್ಟೆಂಬರ್ ೯ ಮತ್ತು ೧೦ ರಂದು ‘ಜಿ-20’ ಶೃಂಗ ಸಭೆ ನಡೆಯುವುದು. ಈ ಸಭೆಯಲ್ಲಿ ಸಹಭಾಗಿ ಆಗುವ ದೇಶದ ಪ್ರಮುಖರಿಗೆ ಭಾರತದ ರಾಷ್ಟ್ರಪತಿಗಳಿಂದ ಕಳಿಸಲಾಗಿರುವ ರಾತ್ರಿಯ ಔತಣಕೂಟ ಇಂಗ್ಲಿಷ ಆಮಂತ್ರಣ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಭಾರತ’ ಎಂದು ಬರೆಯಲಾಗಿದೆ. ವಾಸ್ತವದಲ್ಲಿ ಇಲ್ಲಿಯವರೆಗೆ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಹೀಗೆ ಬರೆಯಲಾಗುತ್ತಿತ್ತು; ಆದರೆ ಇದೇ ಮೊದಲ ಬಾರಿ ‘ಇಂಡಿಯಾ’ದ ಜಾಗದಲ್ಲಿ ‘ಭಾರತ’ ಎಂದು ಬರೆಯಲಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಮುಖಂಡ ಜೈರಾಮ ರಮೇಶ್ ಇವರು ಟ್ವೀಟ್ ಮಾಡಿ ಇದರ ಮಾಹಿತಿ ನೀಡುತ್ತಾ ಟೀಕಿಸಿದ್ದಾರೆ.

ಜೈ ರಾಮ ರಮೇಶ ಇವರು, ಸಂವಿಧಾನದ ಕಲಂ ೧ ಪ್ರಕಾರ ‘ಇಂಡಿಯಾ’ಗೆ ‘ಭಾರತ’ ಎನ್ನಲಾಗುತ್ತದೆ. ಅದು ರಾಜ್ಯದ ಸಂಘರಾಜ್ಯ ಇರಬಹುದು; ಆದರೆ ಈಗ ರಾಜ್ಯಗಳ ಸಂಘರಾಜ್ಯದ ಮೇಲೆ ಕೂಡ ಆಘಾತ ಆಗುತ್ತಿದೆ. (ಸಂವಿಧಾನದಲ್ಲಿ ಇಲ್ಲಿಯವರೆಗೆ ೧೦೦ ಕ್ಕೂ ಹೆಚ್ಚಿನ ಬದಲಾವಣೆ ಆಗಿದೆ. ಈಗ ಸರಕಾರದಿಂದ ಈ ಬದಲಾವಣೆ ಕೂಡ ನಡೆಯಬೇಕೆಂದು ರಾಷ್ಟ್ರಾಭಿಮಾನಿಗಳಿಗೆ ಅನಿಸುತ್ತದೆ ! – ಸಂಪಾದಕರು)

‘ರಿಪಬ್ಲಿಕ್ ಆಫ್ ಭಾರತ !’ – ಅಸ್ಸಾಂ ಮುಖ್ಯಮಂತ್ರಿಗಳ ಟ್ವೀಟ್

ಜೈ ರಾಮ ರಮೇಶ ಇವರ ಟ್ವೀಟ್ ನಂತರ ಕೆಲವೇ ನಿಮಿಷದಲ್ಲಿ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರು, ‘ರಿಪಬ್ಲಿಕ್ ಆಫ್ ಭಾರತ. ಆನಂದ ಮತ್ತು ಅಭಿಮಾನ ಅನುಭವಿಸುತ್ತಿದೆ. ನಮ್ಮ ಸಂಸ್ಕೃತಿ ‘ಅಮೃತಕಾಲ’ದ (ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ೭೫ ವರ್ಷಗಳು ಪೂರ್ಣವಾಹೀರುವುದರಿಂದ ಅದಕ್ಕೆ ‘ಅಮೃತಕಾಲ’ ಎನ್ನುತ್ತಾರೆ.) ದಿಶೆಗೆ ವೇಗವಾಗಿ ಮುನ್ನಡೆಯುತ್ತಿದೆ.’ ಎಂದು ಬರೆದಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ಸಿಗೆ ಹೊಟ್ಟೆಯುರಿ !

‘ಇಂಡಿಯಾ’ ಹೆಸರು ಬ್ರಿಟಿಷರು ನೀಡಿದ್ದರಿಂದ ಅದು ಗುಲಾಮದ ಪ್ರತೀಕವಾಗಿದೆ. ಸ್ವಾತಂತ್ರ್ಯದ ನಂತರ ಅದನ್ನು ಬದಲಾಯಿಸಿ ಭಾರತದ ಅಧಿಕೃತ ಏಕೈಕ ಎಂದರೆ ‘ಭಾರತ’ ಎಂದು ಘೋಷಿಸುವುದು ಅಪೇಕ್ಷಿತವಾಗಿತ್ತು. ಈಗ ಸರಕಾರ ಇದನ್ನು ಬದಲಾಯಿಸಿ ‘ಭಾರತ’ ಎಂದು ಹೆಸರು ಇಡುವುದಿದ್ದರೆ, ಬ್ರಿಟಿಷರ ಹಾಡಿಹೊಗಳುವ ಕಾಂಗ್ರೆಸ್ಸಿಗೆ ಹೊಟ್ಟೆ ಉರಿ ಬರುವುದು ಸಹಜ !