ಗಿಲಗಿಟ ಬಾಲ್ಟಿಸ್ತಾನದಲ್ಲಿ ಪ್ರತಿಭಟನೆ : ಭಾರತದಲ್ಲಿ ವಿಲೀನಗೊಳಿಸಲು ಒತ್ತಾಯ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನ ಆಕ್ರಮಿತ ಗಿಲಗಿಟ್ ಬಾಲ್ಟಿಸ್ತಾನದಲ್ಲಿ ಮತ್ತೊಮ್ಮೆ ಬೃಹತ್ ಪ್ರತಿಭಟನೆಗಳು ನಡೆಸಲಾಗುತ್ತಿವೆ. ಪ್ರತಿಭಟನೆಯಲ್ಲಿ ಸಹಭಾಗಿಯಾಗಿರುವ ಜನರು ಭಾರತದಲ್ಲಿ ವಿಲೀನಗೊಳಿಸಲು ಆಗ್ರಹಿಸುತ್ತಿದ್ದಾರೆ. ಗಿಲಗಿಟ್ ಬಾಲ್ಟಿಸ್ತಾನದಲ್ಲಿನ ನಾಯಕರು ಪಾಕಿಸ್ತಾನದ ಸರಕಾರಕ್ಕೆ ಗೃಹಯುದ್ಧದ ಎಚ್ಚರಿಕೆ ನೀಡಿದೆ. ಈ ಬಗ್ಗೆ ಒಂದು ವಾರ್ತಾ ಸಂಸ್ಥೆಯು ನೀಡಿದ ಒಂದು ವಾರ್ತೆಯ ಪ್ರಕಾರ, ಶಿಯಾ ಧರ್ಮಗುರು ಆಗಾ ಬಾಕಿರ ಅಲ್ ಹುಸೇನಿ ಇವರ ಬಂಧನದ ವಿರುದ್ಧ ಜನರು ಬೀದಿಗೆ ಇಳಿದಿದ್ದಾರೆ. ಪಾಕಿಸ್ತಾನ ಇದು ಸುನ್ನಿ ಬಹುಸಂಖ್ಯಾತ ದೇಶವಾಗಿದೆ; ಆದರೆ ಗಿಲಗಿಟ ಬಾಲ್ಟಿಸ್ತಾನ್ ಶಿಯಾ ಬಹುಸಂಖ್ಯಾತ ಪ್ರದೇಶವಾಗಿದೆ. ಗಿಲಗಿಟ್ ಬಾಲ್ಟಿಸ್ತಾನದ ಪ್ರದೇಶ ಸರಕಾರಿ ದೃಷ್ಟಿಯಿಂದ ಬಾಲ್ಟಿಸ್ತಾನ್, ದಿಯಾಮೆರ್ ಮತ್ತು ಗಿಲಗಿಟ ಈ ಮೂರು ಭಾಗದಲ್ಲಿ ವಿಭಜಿತವಾಗಿದೆ.