ಸಂವಿಧಾನದಲ್ಲಿ ಬದಲಾವಣೆ ಮಾಡಿ ದೇಶಕ್ಕೆ ‘ಭಾರತ’ ಎಂದು ನಾಮಕರಣ ಮಾಡಿ ! – ಭಾಜಪದ ಶಾಸಕ ಹರನಾಥ ಸಿಂಹ ಯಾದವ

ಭಾಜಪದ ಶಾಸಕ ಹರನಾಥ ಸಿಂಹ ಯಾದವ ಇವರ ಬೇಡಿಕೆ !

ನವ ದೆಹಲಿ – ಭಾರತದ ಸಂವಿಧಾನದಲ್ಲಿ ಬದಲಾವಣೆ ಮಾಡಿ ‘ಇಂಡಿಯಾ’ ಹೆಸರನ್ನು ತೆಗೆದು ಕೇವಲ ‘ಭಾರತ’ ಎಂದು ಹೆಸರು ಇಡಬೇಕು, ಎಂದು ಭಾಜಪದ ಶಾಸಕ ಹರನಾಥ ಸಿಂಹ ಯಾದವ ಇವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಆಗ್ರಹಿಸಿದರು.

ಹರನಾಥ ಸಿಂಹ ಯಾದವ ಇವರು ಮಂಡಿಸಿರುವ ಅಂಶಗಳು

೧. ಸಂಪೂರ್ಣ ದೇಶಕ್ಕೆ ಈ ಬದಲಾವಣೆ ಬೇಕಿದೆ. ಮೂಲೆ ಮೂಲೆಯಿಂದ ಈ ಬೇಡಿಕೆ ಬರುತ್ತಿದೆ. ಸರಸಂಘಚಾಲಕರು ಕೂಡ ‘ಭಾರತ’ ಶಬ್ದ ಉಪಯೋಗಿಸಲು ಕರೆ ನೀಡಿದ್ದಾರೆ ಎಂದು ಹೇಳಿದರು. ಅವರು, ಜನರೆ ‘ಭಾರತ’ ಈ ಶಬ್ದ ಉಪಯೋಗಿಸಬೇಕು. ‘ಭಾರತ’ ಈ ಶಬ್ದ ನಮಗೆ ಶಕ್ತಿ ನೀಡುತ್ತದೆ. ಅಂತಹ ಶಕ್ತಿ ‘ಇಂಡಿಯಾ’ ಹೆಸರಿನಿಂದ ಸಿಗುವುದಿಲ್ಲ.’

೨. ಒಂದು ವೇಳೆ ‘ಸಿಂಧ’ ‘ಇಂಡಿಯಾ’ ಆದರೆ ಆಗ ಇಂಡೋನೇಷಿಯಾದಲ್ಲಿನ ಸಿಂಧು ನದಿ ಎಲ್ಲಿ ಇತ್ತು ? ‘ಆಂಗ್ಲೋ ಇಂಡಿಯನ್’ ಯಾವ ಪ್ರದೇಶದಲ್ಲಿ ವಾಸಿಸುತ್ತಿದ್ದರೋ ಆ ಪ್ರದೇಶದಲ್ಲಿ ಸಿಂಧು ನದಿಯಲ್ಲಿತ್ತು ? ಹೇಗೆ ಅನೇಕ ದೇಶಗಳು ಇರುವುದು ಅಲ್ಲಿ ಇಂಡ ಈ ಶಬ್ದ ಇದೆ. ಅಲ್ಲಿ ಸಿಂಧು ನದಿ ಎಲ್ಲಿ ಇದೆ ?

೩. ಭಾರತ ಈ ಶಬ್ದ ನಮ್ಮ ಸಾಂಸ್ಕೃತಿಕ ಹಿನ್ನೆಲೆ, ಸಾಂಸ್ಕೃತಿಕ ಸಂಪತ್ತಿ, ಸಾಂಸ್ಕೃತಿಕ ಗೌರವದ ಪ್ರತೀಕವಾಗಿದೆ. ಆದ್ದರಿಂದ ‘ಭಾರತ’ ಈ ಶಬ್ದ ಉಪಯೋಗಿಸಬೇಕು. ‘ಗುಲಾಮಗಿರಿಯ ಪ್ರತಿಕಗಳು ಭಾರತದ ಭೂಮಿಯಲ್ಲಿ ಬೇಡ’, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಕೂಡ ಹೇಳಿದ್ದಾರೆ.

೪. ವೇದಗಳಲ್ಲಿನ ಒಂದು ಶ್ಲೋಕದ ಸಂದರ್ಭ ನೀಡುತ್ತಾ ಯಾದವ ಇವರು, ಮಹಾಸಾಗರದ ಉತ್ತರಕ್ಕೆ ಹಿಮಾಲಯ ಇದೆ ಮತ್ತು ಹಿಮಾಲಯದ ದಕ್ಷಿಣಕ್ಕೆ ಇರುವ ಭೂಮಿಗೆ ‘ಭಾರತ’ ಎನ್ನುತ್ತಾರೆ. ಇಲ್ಲಿಯ ಜನರಿಗೆ ‘ಭಾರತೀಯರು’ ಎನ್ನುತ್ತಾರೆ. ಆದ್ದರಿಂದ ‘ಇಂಡಿಯಾ’ದ ಬದಲು ‘ಭಾರತ’ ಈ ಶಬ್ದ ಉಪಯೋಗಿಸಬೇಕು ಎಂದು ಹೇಳಿದರು.

‘ಇಂಡಿಯಾ’ ಈ ಶಬ್ದ ಅಂದರೆ ಬ್ರಿಟಿಷರು ನಮಗೆ ನೀಡಿರುವ ಬೈಗುಳ ! – ಯಾದವ

ಯಾದವ ಇವರು ಮಾತು ಮುಂದುವರೆಸಿ, ಆಂಗ್ಲದಲ್ಲಿ ‘ಇಂಡಿಯಾ’ ಈ ಶಬ್ದ ಬ್ರಿಟಿಷರ ದೃಷ್ಟಿಯಲ್ಲಿ ನಾವು ಅಶಿಕ್ಷಿತ ಜನಾಂಗದವರು ಎಂದು ಇದೆ ಆದ್ದರಿಂದ ಅವರು ಭಾರತಕ್ಕೆ ‘ಇಂಡಿಯಾ’ ಎಂದು ನಾಮಕರಣ ಮಾಡಿದರು; ಆದರೆ ನಮ್ಮ ದೇಶದಲ್ಲಿ ಇಂತಹ ವಿಕೃತ ಮಾನಸಿಕತೆಯ ಜನರು ಇದ್ದಾರೆ, ಅವರು ಜನರ ದಾರಿ ತಪ್ಪಿಸುತ್ತಾರೆ, ‘ಬ್ರಿಟಿಷರು ಸಿಂಧುದಿಂದ ಬಂದಿದ್ದರು, ಅವರಿಗೆ ‘ಸಿಂಧ’ ಈ ಶಬ್ದ ಹೇಳಲು ಬರುತ್ತಿರಲಿಲ್ಲ, ಅವರು ‘ಇಂದ’ ಎಂದು ಹೇಳುತ್ತಿದ್ದರು ಮತ್ತು ನಿಧಾನವಾಗಿ ಅದು ‘ಇಂದ’ ಹೋಗಿ ‘ಇಂಡಿಯಾ’ ಆಯಿತು. ಇಂಡಿಯಾ ಈ ಶಬ್ದ ನಮಗೆ ಬ್ರಿಟಿಷರ ನೀಡಿರುವ ಬೈಗುಳವಾಗಿದೆ. ಆದ್ದರಿಂದ ‘ಇಂಡಿಯಾ’ ಈ ಶಬ್ದ ತೆಗೆದು ಹಾಕಬೇಕು ಎಂದು ಹೇಳಿದರು.

 

ಸಂಪಾದಕೀಯ ನಿಲುವು

‘ಸಂವಿಧಾನದಲ್ಲಿ ಬದಲಾವಣೆ ಮಾಡುವಾಗ ‘ಭಾರತ’ ಹೆಸರಿನ ಜೊತೆಗೆ ದೇಶವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ’ ಎಂದು ಹಿಂದೂ ಮತ್ತು ಅವರ ಸಂಘಟನೆಗಳಿಂದ ಸಂಘಟಿತವಾಗಿ ಬೇಡಿಕೆ ಸಲ್ಲಿಸಬೇಕು. ಇದರಿಂದ ಸನಾತನ ಧರ್ಮದ ವಿರುದ್ಧ ಮಾತನಾಡುವ ಧೈರ್ಯ ಯಾರಿಗೂ ಆಗುವುದಿಲ್ಲ !