ಋತುಚರ್ಯೆ – ಮಳೆಗಾಲದಲ್ಲಿ ಆರೋಗ್ಯವಂತರಾಗಿರಲು ಆಯುರ್ವೇದದ ಕಿವಿಮಾತು !
ಮಳೆಗಾಲದ ಪ್ರಮುಖ ಲಕ್ಷಣವೆಂದರೆ ಹಸಿವು ಕಡಿಮೆಯಾಗುವುದು. ಹಸಿವು ಕಡಿಮೆಯಿರುವಾಗಲೂ ಮೊದಲಿನ ಹಾಗೆಯೇ ಆಹಾರ ಸೇವಿಸಿದರೆ, ಅದು ಅನೇಕ ರೋಗಗಳಿಗೆ ಆಮಂತ್ರಣವನ್ನೇ ನೀಡುತ್ತದೆ; ಏಕೆಂದರೆ ಕುಂಠಿತಗೊಂಡ ಹಸಿವು ಅಥವಾ ಜೀರ್ಣ ಶಕ್ತಿಯು ಹೆಚ್ಚಿನ ಕಾಯಿಲೆಗಳ ಮೂಲ ಕಾರಣವಾಗಿದೆ. ಹೊಟ್ಟೆ ಭಾರವೆನಿಸುವುದು, ಹುಳಿ ತೇಗು ಬರುವುದು, ಗ್ಯಾಸ್ (ಹೊಟ್ಟೆಯಲ್ಲಿ ವಾಯು) ಆಗುವುದು, ಇವು ಹಸಿವು ಕಡಿಮೆಯಾದುದರ ಲಕ್ಷಣಗಳಾಗಿವೆ.