ದೆಹಲಿ ಪುರಸಭೆಯು ಕೊರೊನಾದಿಂದ ಗುಣಮುಖರಾದವರಿಗೆ ಆಯುರ್ವೇದ ಮತ್ತು ಪಂಚಕರ್ಮದಿಂದ ಮುಂದಿನ ಚಿಕಿತ್ಸೆ ನೀಡಲಿದೆ

ಈಗ ಆಯುರ್ವೇದದ ಮಹತ್ವವು ಗಮನಕ್ಕೆ ಬರುತ್ತಿರುವುದರಿಂದ, ಇಂತಹ ಚಿಕಿತ್ಸೆಗಳು ಸರಕಾರಿ ಹಂತದಲ್ಲಿ ನಡೆಯುತ್ತಿದ್ದರೆ ಅದು ಶ್ಲಾಘನೀಯವಾಗಿದೆ! ಇಂತಹ ಪ್ರಯತ್ನಗಳು ದೇಶದೆಲ್ಲೆಡೆ ಆಗಬೇಕು !

ನವ ದೆಹಲಿ – ಕೊರೊನಾದಿಂದ ಗುಣಮುಖರಾದ ರೋಗಿಗಳಿಗೆ ಆಯುರ್ವೇದ ಮತ್ತು ಪಂಚಕರ್ಮಗಳ ಸಹಾಯದಿಂದ ಚಿಕಿತ್ಸೆ ನೀಡಲು ದೆಹಲಿ ಪುರಸಭೆಯ ಆಸ್ಪತ್ರೆಗಳಲ್ಲಿ ವಿಶೇಷ ವಿಭಾಗಗಳನ್ನು ಸ್ಥಾಪಿಸಲಿದೆ. ಕೊರೋನಾದಿಂದ ಗುಣಮುಖರಾದ ನಂತರ ವ್ಯಕ್ತಿಯು ಆಯಾಸಗೊಂಡಿರುತ್ತಾರೆ. ಅಲ್ಲದೆ, ಅವರು ಇತರ ಕಾಯಿಲೆಗಳಿಂದ ಬಳಲುತ್ತಿದ್ದರೆ, ಅದರ ಪರಿಣಾಮವೂ ಆಗುತ್ತಿರುತ್ತದೆ. ಅವರ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಅಂತಹವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು.

ಪ್ರಶಾಂತ ವಿಹಾರ, ಪದಮ ನಗರ, ರಾಜೇಂದ್ರ ನಗರ, ಹೈದರಪುರ, ಬೇಗಮ್‍ಪುರ ಮತ್ತು ಕರಮಪುರಗಳಲ್ಲಿ ಪಂಚಕರ್ಮ ಆಸ್ಪತ್ರೆಗಳನ್ನು ‘ಪೋಸ್ಟ್ ಕೋವಿಡ್ ಕೇರ್’ ಆಸ್ಪತ್ರೆಗಳಾಗಿ ಪರಿವರ್ತಿಸಲಾಗುವುದು, ಕನಿಷ್ಠ ೧೦೦೦ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಉತ್ತರ ಪುರಸಭೆಯ ಮಹಾಪೌರ ಜಯಪ್ರಕಾಶ ಇವರು ತಿಳಿಸಿದ್ದಾರೆ.