ತಮಿಳುನಾಡಿನ ಒಂದು ಹಳ್ಳಿಯಲ್ಲಿ ಲಸಿಕೆ ತೆಗೆದುಕೊಳ್ಳಬೇಕೆಂದು ಉಚಿತ ಬಿರಿಯಾನಿ ಹಾಗೂ ಉಡುಗೊರೆ ನೀಡುವ ಯೋಜನೆ

ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಇಂತಹ ಯೋಜನೆಯನ್ನು ನಡೆಸಬೇಕಾಗುತ್ತದೆ, ಇದು ಜನರು ತಮ್ಮ ಆರೋಗ್ಯದ ಬಗ್ಗೆ ಎಷ್ಟು ಅಸಡ್ಡೆ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ !

ಚೆನ್ನೈ (ತಮಿಳುನಾಡು) – ಚೆನ್ನೈನ ಮೀನುಗಾರಿಕಾ ಗ್ರಾಮವಾದ ಕೋಲವಂನಲ್ಲಿ ಜನರು ಕೊರೊನಾದ ಲಸಿಕೆ ಪಡೆಯಬೇಕು, ಎಂದು ಬಿರಿಯಾನಿ ಮತ್ತು ‘ಲಕ್ಕಿ ಡ್ರಾ’ ಮೂಲಕ ಉಡುಗೊರೆಗಳನ್ನು ಉಚಿತವಾಗಿ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಗ್ರಾಮದ ಜನರು ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ. ‘ಎಸ್‍ಟಿಎಸ್ ಫೌಂಡೇಶನ್’ ಎಂಬ ಖಾಸಗಿ ಸಂಸ್ಥೆಯಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ.

ಈ ಯೋಜನೆ ಘೋಷಣೆಯಾದ ೩ ದಿನಗಳಲ್ಲಿ ಗ್ರಾಮದಲ್ಲಿ ೩೪೫ ಜನರಿಗೆ ಲಸಿಕೆ ನೀಡಲಾಗಿದೆ. ಹಿಂದಿನ ಎರಡು ತಿಂಗಳಲ್ಲಿ ಕೇವಲ ೫೮ ಜನರು ಲಸಿಕೆಯನ್ನು ಪಡೆದಿದ್ದರು. ಗ್ರಾಮದಲ್ಲಿ ೮ ವರ್ಷಕ್ಕಿಂತ ಮೇಲ್ಪಟ್ಟ ೬೪೦೦ ಕ್ಕೂ ಹೆಚ್ಚು ಜನರಿದ್ದಾರೆ. ಪ್ರತಿ ವಾರ ‘ಲಕ್ಕಿ ಡ್ರಾ’ ತೆಗೆಯಲಾಗುವುದು. ಈ ಮೂಲಕ ಮಿಕ್ಸರ್ ಗ್ರೈಂಡರ್, ಚಿನ್ನದ ನಾಣ್ಯ ಇತ್ಯಾದಿಗಳನ್ನು ಉಡುಗೊರೆಯಾಗಿ ನೀಡಲಾಗುವುದು ಮತ್ತು ಒಂದು ‘ಬಂಪರ್ ಡ್ರಾ’ ಸಹ ತೆಗೆಯಲಾಗುವುದು. ಅದರಲ್ಲಿ ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಮತ್ತು ಸ್ಕೂಟರ್ ಮುಂತಾದ ವಸ್ತುಗಳನ್ನು ಉಚಿತವಾಗಿ ನೀಡಲು ಯೋಜಿಸಲಾಗಿದೆ. ಈ ಯೋಜನೆಯ ಹಿಂದೆ ಕೋಲವಂ ಗ್ರಾಮವನ್ನು ಕೊರೊನಾ ಮುಕ್ತಗೊಳಿಸುವ ಉದ್ದೇಶವಿದೆ.