ಪ್ರಾಚೀನ ಕಾಲದಲ್ಲಿನ ಶಸ್ತ್ರಚಿಕಿತ್ಸೆ

ಶಸ್ತ್ರಕ್ರಿಯೆ ಮಾಡುವ ಮುನ್ನ ತಮ್ಮಲ್ಲಿರುವ ಉಪಕರಣಗಳನ್ನು ಕುದಿಸಿಕೊಳ್ಳುವುದು !

ಕ್ರಿ.ಪೂ. ನಾಲ್ಕು ಸಾವಿರ ವರ್ಷ ಈ ಕಾಲದಲ್ಲಿ ಜಗತ್ತಿನ ಮೊದಲನೇ ಸರ್ಜನ್, ಶಸ್ತ್ರಕರ್ಮಿ ಸುಶ್ರುತರು ಯಾವುದಾದರೂ ಶಸ್ತ್ರಕ್ರಿಯೆಯನ್ನು ಮಾಡುವ ಮುನ್ನ ಅವರು ಉಪಯೋಗಿಸುತ್ತಿದ್ದ ಸಾಧನಗಳನ್ನು ಕುದಿಸಿಕೊಳ್ಳುತ್ತಿದ್ದರು. (ವೈದಿಕ ವಿಜ್ಞಾನ ಹಾಗೂ ವೇದ ಕಾಲನಿರ್ಣಯ, ಪುಟ ಸಂಖ್ಯೆ ೧೨೫, ಡಾ. ಪದ್ಮಾಕರ ವಿಷ್ಣು ವರ್ತಕ) (ವಿಜ್ಞಾನವು ಇದನ್ನು ಸುಮಾರು ೪೦೦ ವರ್ಷಗಳ ಹಿಂದಷ್ಟೇ ಕಂಡುಹಿಡಿಯಿತು ! – ಸಂಕಲನಕಾರರು)

ತುಂಡಾದ ಎಲುಬನ್ನು ಮತ್ತೆ ಜೋಡಿಸುವುದು !

ಇಂದ್ರನ ಬಗ್ಗೆ ಋಗ್ವೇದ (೮.೧. ೧೨) ದಲ್ಲಿ ಮುಂದಿನ ವಿಷಯವಿದೆ. ‘ಎತಾಶ ರಾಜನ ತಲೆಯ ಕೆಳಗಿನ ಭಾಗದಲ್ಲಿ ಹಾಗೂ ಎದೆಯ ಮೇಲಿನ ಭಾಗದಲ್ಲಿ ‘ಕೊರಳೆಲುಬು’ (ಕ್ಲೆವಿಕಲ್) ಎಂಬ ಎಲುಬಿಗೆ ಗಾಯವಾದಾಗ ಅದರಿಂದ ನೋವು ಉತ್ಪನ್ನವಾಗುವ ಮೊದಲೇ ಇಂದ್ರನು ಅದನ್ನು ಜೋಡಿಸಿದನು. ತುಂಡಾದ ಎಲುಬನ್ನು ಮತ್ತೆ ಜೋಡಿಸಲಾಯಿತು.’

ಇಂದು ಆಧುನಿಕ ವಿಜ್ಞಾನಕ್ಕೆ ತಿಳಿದಿರುವ ‘ಕೃತಕ ಕಾಲನ್ನು ಜೋಡಿಸುವ’ ತಂತ್ರಜ್ಞಾನವು ಇಂದಿಗಿಂತಲೂ ಹೆಚ್ಚು ಪ್ರಗತಿ ಪಥದಲ್ಲಿದ್ದ ವೇದಕಾಲದ ವಿಜ್ಞಾನ !

‘ಋಗ್ವೇದ ೧.೧೧೬.೧೫ ರಂತೆ ಪಕ್ಷಿಯ ರೆಕ್ಕೆಗಳು ಮುರಿದ ಹಾಗೆ ‘ಖೇಲ’ ರಾಜನ ಹೆಂಡತಿ ‘ವಿಶ್ಪಲಾ’ ಇವಳ ಕಾಲುಗಳು ಯುದ್ಧದಲ್ಲಿ ತುಂಡರಿಸಲ್ಪಟ್ಟಿತ್ತು. ಆಗ ತಕ್ಷಣ ಅದೇ ದಿನ ರಾತ್ರಿ ಹೊಸ ಧಾತುವಿನ ಕಾಲುಗಳನ್ನು ಜೋಡಿಸಲಾಯಿತು ಹಾಗೂ ಶತ್ರುವಿನ ಮೇಲೆ ದಂಡೆತ್ತಿ ಹೋಗುವಷ್ಟು ಸಮರ್ಥಗೊಳಿಸಲಾಯಿತು. ವೈದಿಕ ತಂತ್ರಜ್ಞಾನದಂತೆ ‘ಒಂದೇ ರಾತ್ರಿಯೊಳಗೆ ಧಾತುವಿನ ಕಾಲುಗಳನ್ನು ಜೋಡಿಸಿದ ಬಳಿಕ ತಕ್ಷಣವೇ ರಾಣಿ ವಿಶ್ಪಲಾಳು ಯುದ್ಧದಲ್ಲಿ ಭಾಗವಹಿಸಿದಳು’, ಎಂಬುದನ್ನು ಗಮನಿಸಿದರೆ ಆಗಿನ ವೈದ್ಯಕೀಯ ಶಾಸ್ತ್ರವು ಇಂದಿಗಿಂತ ತುಂಬಾ ಪ್ರಗತಿ ಹೊಂದಿತ್ತು, ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ; ಆದರೆ ಅದನ್ನು ಒಪ್ಪಿಕೊಳ್ಳಲು ಯಾರೂ ಧೈರ್ಯ ತೋರಿಸುವುದಿಲ್ಲ.’ – (ವೈದಿಕ ವಿಜ್ಞಾನ ಹಾಗೂ ವೇದಕಾಲ ನಿರ್ಣಯ, ಪುಟ ಸಂಖ್ಯೆ. ೧೨೧, ಡಾ. ಪದ್ಮಾಕರ ವಿಷ್ಣು ವರ್ತಕ)

ಪ್ಲಾಸ್ಟಿಕ್ ಸರ್ಜರಿ

ಭಾರತವೇ ಪ್ಲಾಸ್ಟಿಕ್ ಸರ್ಜರಿಯ ಜನ್ಮಸ್ಥಾನವಾಗಿದೆ; ಏಕೆಂದರೆ ಪ್ರಾಚೀನ ಕಾಲದ ಭಾರತದಲ್ಲಿ, ಅಂದರೆ ಸನಾತನ ಹಿಂದೂ ಧರ್ಮದ ಸುವರ್ಣ ಯುಗವಿದ್ದ ಕಾಲದಲ್ಲಿ ಮುರಿದ ಮೂಗನ್ನು ಜೋಡಿಸುವುದು, ತುಂಡಾದ ಕಿವಿಯನ್ನು ಜೋಡಿಸುವುದು, ಇಷ್ಟು ಮಾತ್ರವಲ್ಲ ಸ್ತ್ರೀಯರ ಕೆನ್ನೆಯಲ್ಲಿ ಕುಳಿ ಬರುವಂತೆ ಮಾಡುವುದು ಇಷ್ಟರ ತನಕ ಶಸ್ತ್ರಚಿಕಿತ್ಸೆ ನಡೆಯುತ್ತಿತ್ತು.

ಆಯುರ್ವೇದ ಎಂಬ ಐದನೇ ವೇದವನ್ನು ನಿರ್ಮಿಸಿದ ಋಷಿಗಳು

ಕೇವಲ ರೋಗದಿಂದ ಶಾಶ್ವತವಾಗಿ ಮುಕ್ತಗೊಳ್ಳುವುದು ಮಾತ್ರವಲ್ಲದೇ ಮೂಲತಃ ಆರೋಗ್ಯ ಸಂಪನ್ನ ಜೀವನ ನಡೆಸುವ ವಿಶಾಲ ದೃಷ್ಟಿಕೋನದಿಂದ ಪ್ರಾಚೀನ ಭಾರತೀಯ ಸಂಸ್ಕತಿಯಲ್ಲಿ ಆಯುರ್ವೇದದ ಉಗಮವಾಯಿತು ! ಆಧುನಿಕ ವೈದ್ಯಕೀಯ ಶಾಸ್ತ್ರದ ತಾತ್ಕಾಲಿಕ ಉಪಾಯ ಹಾಗೂ ಅದರ ದುಷ್ಪರಿಣಾಮಗಳನ್ನು ಗಮನಿಸಿದರೆ ರೋಗವನ್ನು ಬೇರುಸಹಿತ ಕಿತ್ತೊಗೆದು ಶಾರೀರಿಕ ಆರೋಗ್ಯವನ್ನು ಋತುಮಾನ ಹಾಗೂ ದಿನಚರ್ಯೆಯೊಂದಿಗೆ ಸಮನ್ವಯ ಇಟ್ಟುಕೊಳ್ಳುವ ನಿಯಮವನ್ನು ಹೇಳುವ ಆಯುರ್ವೇದದ ಮಹತ್ವವು ಗಮನಕ್ಕೆ ಬರುತ್ತದೆ. ಕೇವಲ ಶಾರೀರಿಕ ಹಾಗೂ ಮಾನಸಿಕವಷ್ಟೇ ಅಲ್ಲ, ಆದಿದೈವಿಕ ಮಾತ್ರವಲ್ಲದೇ ಭವರೋಗಗಳಿಂದ ಮುಕ್ತಗೊಳಿಸುವ ಆಯುರ್ವೇದ ಎಂಬ ಐದನೇ ‘ಜೀವನದ’ ವೇದವನ್ನು ಋಷಿಗಳು ನಿರ್ಮಿಸಿದರು. ಇಂದು ನಮಗೆ ಆಯುರ್ವೇದದ ಕೆಲವೇ ಔಷಧಿಗಳ ಹಾಗೂ ಉಪಚಾರಗಳ ಬಗ್ಗೆ ಮಾಹಿತಿಯಿದೆ. ಪ್ರಾಚೀನ ಕಾಲದ ಋಷಿಮುನಿಗಳು ವೈದ್ಯಕೀಯ ಶಾಸ್ತ್ರದಲ್ಲಿ ಮಾಡುತ್ತಿದ್ದ ವಿವಿಧ ಪ್ರಯೋಗಗಳು ಇಂದು ಕಾಲದ ಸ್ಮತಿಯಿಂದ ಅಳಿಸಿ ಹೋಗಿದೆ, ಆದರೂ ಆ ಬಗ್ಗೆ ಸಂಶೋಧನೆಗೆ ಮಾತ್ರ ತುಂಬಾ ಮಹತ್ವವಿದೆ. ಅದೇ ರೀತಿ ಆಗಿನ ಪ್ರಗತಿ ಹೊಂದಿತ ವೈದ್ಯಕೀಯ ಶಾಸ್ತ್ರದಲ್ಲಿನ ಶಸ್ತ್ರಚಿಕಿತ್ಸೆಯಂತಹ ವಿಷಯಗಳನ್ನು ಓದಿ ನಮಗೆ ಆಶ್ಚರ್ಯವಾಗುವುದು ! ಹಿಂದೂಗಳೇ,  ನಮ್ಮ ಪರಿಪೂರ್ಣ ಸಂಸ್ಕೃತಿಯ ಮಹತ್ವವನ್ನು  ಅರಿತುಕೊಳ್ಳಿ.