ಯಾರೂ ಮೃತಪಟ್ಟಿಲ್ಲ ಮತ್ತು ಯಾವುದೇ ಸಿಬ್ಬಂದಿಗೆ ಕೊರೋನಾ ಸೋಂಕು ತಗಲಲಿಲ್ಲ !
ಆಯುರ್ವೇದದ ಬಗ್ಗೆ ಪ್ರಶ್ನೆಗಳನ್ನು ಎತ್ತುವವರು ಮತ್ತು ಅದನ್ನು ಕೀಳಾಗಿ ನೋಡುವವರು ಈ ಬಗ್ಗೆ ಮಾತನಾಡುತ್ತಾರೆಯೇ ?
ನವ ದೆಹಲಿಯ – ಇಲ್ಲಿಯ ಅಖಿಲ ಭಾರತೀಯ ಆಯುರ್ವೇದ ಸಂಸ್ಥಾನ (ಆಲ್ ಇಂಡಿಯಾ ಇನ್ಸ್‍ಸ್ಟಿಟ್ಯೂಟ್ ಆಫ್ ಆಯುರ್ವೇದ – ಎಐಐಎ) ಈ ಆಸ್ಪತ್ರೆಯಲ್ಲಿ ಈವರೆಗೆ ೬೦೦ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ವಿಶೇಷವೆಂದರೆ, ಒಟ್ಟು ರೋಗಿಗಳಲ್ಲಿ ಯಾರೂ ಸಾಯಲಿಲ್ಲ. ದಾಖಲಾದ ಶೇ. ೯೪ ರಷ್ಟು ರೋಗಿಗಳಿಗೆ ಆಯುರ್ವೇದ ಚಿಕಿತ್ಸೆಯನ್ನು ನೀಡಲಾಯಿತು. ಇವುಗಳಲ್ಲಿ ಆಯುರ್ವೇದ ಔಷಧಿಗಳು, ಪ್ರಾಣಾಯಾಮ ಮತ್ತು ಯೋಗಾಸನ ಒಳಗೊಂಡಿದ್ದವು. ಉಳಿದ ಶೇ. ೬ ರಷ್ಟು ರೋಗಿಗಳು ಅಲೋಪತಿಯಿಂದ ಗುಣಮುಖರಾದರು. ಒಬ್ಬ ರೋಗಿಯ ಸ್ಥಿತಿ ತುಂಬಾ ಗಂಭೀರವಾಗುತ್ತಿದ್ದಂತೆ ಅವರನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅವರು ಮೃತಪಟ್ಟರು. ಎಐಐಎ ಆಸ್ಪತ್ರೆಯ ಸಿಬ್ಬಂದಿ ಅಥವಾ ವೈದ್ಯರಲ್ಲಿ ಯಾರೊಬ್ಬರೂ ಕೊರೊನಾದ ಸೋಂಕಿಗೆ ಒಳಗಾಗಲಿಲ್ಲ.
ಅಖಿಲ ಭಾರತ ಆಯುರ್ವೇದ ಸಂಸ್ಥಾನದ ಸಂಚಾಲಕಿ ಡಾ. ತನುಜಾ ನೆಸಾರಿ ಇವರು, ನಮ್ಮಲ್ಲಿ ಅಲೋಪತಿ ವೈದ್ಯರೂ ಇದ್ದಾರೆ. ಇಲ್ಲಿನ ಸಿಬ್ಬಂದಿ ಮತ್ತು ವೈದ್ಯರು ಕೂಡ ಯೋಗಾಸನ ಮತ್ತು ಪ್ರಾಣಾಯಾಮ ಮಾಡುತ್ತಾರೆ. ಅದೇರೀತಿ ಬೆಳಿಗ್ಗೆ ಹೋಮ ಹವನಗಳನ್ನೂ ಸಹ ಮಾಡಲಾಗುತ್ತದೆ. ಅಮೃತಬಳ್ಳಿ, ಆಯುಷ್ ೬೪, ಆಯುಷ್ ಕಷಾಯ, ಅಶ್ವಗಂಧ ಮುಂತಾದ ಆಯುರ್ವೇದೀಯ ಔಷಧಿಗಳನ್ನು ರೋಗಿಗಳಿಗೆ ನೀಡಲಾಗುತ್ತದೆ ಎಂದು ಹೇಳಿದರು.