ಹೂಗ್ಲಿ (ಬಂಗಾಲ) ದಲ್ಲಿ ರೋಗಿ ಶೇಖ್ ಇಸ್ಮಾಯಿಲ್‍ನು ಮೃತಪಟ್ಟಿದ್ದರಿಂದ ಮತಾಂಧರಿಂದ ವೈದ್ಯರ ಮೇಲೆ ಹಲ್ಲೆ

ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಂದ ಕೆಲಸ ಸ್ಥಗಿತ ಆಂದೋಲನ !

ಬಂಗಾಲವು ಮತ್ತೊಂದು ಬಾಂಗ್ಲಾದೇಶವಾಗುವ ಹಾದಿಯಲ್ಲಿ ಇರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಇದು ತೃಣಮೂಲ ಕಾಂಗ್ರೆಸ್‍ಅನ್ನು ಆರಿಸಿದಕ್ಕಾಗಿ ಹಿಂದೂಗಳಿಗೆ ಸಿಕ್ಕಿದ ಶಿಕ್ಷೆಯೇ ಎನ್ನಬಹುದು!

ಹೂಗ್ಲಿ (ಬಂಗಾಲ) – ಇಲ್ಲಿಯ ಪಾಂಡುವಾ ಗ್ರಾಮೀಣ ಆಸ್ಪತ್ರೆಯಲ್ಲಿ ಇಸ್ಮಾಯಿಲ್ ಶೇಖ್ ಎಂಬ ರೋಗಿಯು ಮೃತಪಟ್ಟಿದ್ದರಿಂದ ಆತನ ಸಂಬಂಧಿಕರು ಚಿಕಿತ್ಸೆ ನೀಡುವ ವೈದ್ಯ ಶಿವಶಂಕರ ರಾಯ ಇವರನ್ನು ಥಳಿಸಿರುವ ಘಟನೆ ನಡೆದಿದೆ. ಈ ಘಟನೆಯ ನಂತರ ವೈದ್ಯರು ಮತ್ತು ಆರೋಗ್ಯ ಕಾರ್ಮಿಕರು ತಮಗೆ ರಕ್ಷಣೆ ನೀಡುವಂತೆ ಮತ್ತು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಮುಷ್ಕರವನ್ನು ಪ್ರಾರಂಭಿಸಿದ್ದರಿಂದ ಇತರ ರೋಗಿಗಳು ಪರದಾಡುತ್ತಿದ್ದಾರೆ. ಕೇವಲ ಅಗತ್ಯ ಸೇವೆಗಳು ನಡೆಯುತ್ತಿವೆ. ಆಸ್ಪತ್ರೆಯ ಆವರಣದಲ್ಲಿ ಶಾಶ್ವತವಾದ ಪೊಲೀಸ್ ಚೌಕಿ ಸ್ಥಾಪಿಸಬೇಕು ಎಂದು ವೈದ್ಯರು ಒತ್ತಾಯಿಸಿದ್ದಾರೆ. ಘಟನೆ ನಡೆದ ೨೪ ಗಂಟೆಗಳ ನಂತರವೂ ಪೊಲೀಸರು ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ.

ಈ ಘಟನೆಗೆ ‘ತೃಣಮೂಲ ಕಾಂಗ್ರೆಸ್ ಗೂಂಡಾಗಳು ಕಾರಣ’ ಎಂದು ಬಿಜೆಪಿಯು ಆರೋಪಿಸಿದರೆ, ತೃಣಮೂಲ ಕಾಂಗ್ರೆಸ್ ಮುಖಂಡ ಸೌಗತ್ ರಾಯ್, ‘ನಾವು ವೈದ್ಯರನ್ನು ರಕ್ಷಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ. (ವೈದ್ಯರ ರಕ್ಷಣೆಯನ್ನು ಮಾಡಲಾಗುತ್ತಿದ್ದಲ್ಲಿ ಅವರ ಮೇಲೆ ಯಾಕೆ ಹಲ್ಲೆಗಳಾಗುತ್ತಿವೆ ? ಇಂತಹ ಸುಳ್ಳುಗಾರರು ವ್ಯವಹಾರಗಳನ್ನು ಹೇಗೆ ಮಾಡುತ್ತಿರಬಹುದು, ಎಂಬುದು ಗಮನಕ್ಕೆ ಬರುತ್ತದೆ ! – ಸಂಪಾದಕ)